ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಮಳೆಯ ಅವಾಂತರ ಸಾಕಷ್ಟು ಹಾನಿ ಮಾಡಿದೆ ಜೊತೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂತಹ ಸಂದರ್ಭದಲ್ಲಿ ದಿಲ್ಲಿ ಪ್ರವಾಸ ಕೈಗೊಂಡಿರುವ ಸಿಎಂ ಯಡಿಯೂರಪ್ಪ ರಾಜ್ಯದ ಜನರ ಹಿತಾಸಕ್ತಿ ಬಗ್ಗೆ ಯೋಚಿಸುತ್ತಿದ್ದಾರ.? ಯಾದಗಿರಿ, ಬೆಳಗಾವಿ, ರಾಯಚೂರು,ಬಾಗಲಕೋಟೆ, ವಿಜಯಪುರ ಅರ್ಧ ಕರ್ನಾಟಕವೇ ಮುಳುಗಿ ಹೋಗುವ ಪರಿಸ್ಥಿತಿ ಎದುರಾಗಿದೆ. ಇದರ ಬಗ್ಗೆ ಸ್ವಲ್ಪವೂ ಆಲೋಚಿಸದೆ ದೆಹಲಿ ಪ್ರವಾಸ ಕೈಗೊಂಡಿರುವುದು ಎಷ್ಟರ ಮಟ್ಟಿಗೆ ಸರಿ.? ಎಂದು ಜೆಡಿಎಸ್ ಕಾರ್ಯಕರ್ತರು ಟ್ವೀಟ್ ಮಾಡುವ ಮೂಲಕ ಯಡಿಯೂರಪ್ಪನವರ ಮೇಲೆ ಫುಲ್ ಗರಂ ಆಗಿದ್ದಾರೆ.
ಉತ್ತರ ಕರ್ನಾಟಕ ನಲುಗುತ್ತಿದ್ದು, ಸರ್ಕಾರ ಡೋಂಟ್ ಕೇರ್.! “ರೋಮ್ ಉರಿಯುವಾಗ ದೊರೆ ಪಿಟೀಲು ಬಾರಿಸುತ್ತಿದ್ದಂತೆ ಬಿಎಸ್ವೈ ಕಥೆ” ಎಂದು ಟ್ವೀಟ್ ಮಾಡುವ ಮೂಲಕ ಸರ್ಕಾರದ ವಿರುದ್ಧ ಜೆಡಿಎಸ್ ಕಾರ್ಯಕರ್ತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ ಕುಮಾರಸ್ವಾಮಿ ಅವರು ಮಾತನಾಡಿ ಅಕ್ಷರಶಃ ಅರ್ಧ ಕರ್ನಾಟಕವೇ ಮುಳುಗಿ ಹೋಗುತ್ತಿದೆ. ಎಲ್ಲಿ ಹೋಗಿದ್ದಾರೆ.? ಸಿಎಂ ಯಡಿಯೂರಪ್ಪನವರು, ಜನರಿಗೆ ಊಟ ನೀರು ಸಿಗದಂತಹ ಪರಿಸ್ಥಿತಿ ಎದುರಾಗಿದೆ. ಇಂಥ ಪರಿಸ್ಥಿತಿಯ ಮಧ್ಯೆ ಸಿಎಂ ಎಲ್ಲಿ ಹೋಗಿದ್ದಾರೆ.? ನಿಖಿಲ್ ಇಲ್ಲಿ ಎಲ್ಲಿದಿಯಪ್ಪಾ ಎಂದು ಕೇಳುವ ಬದಲು ಯಡಿಯೂರಪ್ಪ ಎಲ್ಲಿದಿಯಪ್ಪಾ.?? ಎಂಬ ಪ್ರಶ್ನೆಯನ್ನು ಕೇಳಿ ಎಂದು ನೆರೆದಿದ್ದ ಜನರಿಗೆ ತಿಳಿ ಹೇಳಿದರು.