ಮುಂಜಾನೆ ಫಸ್ಟ್ ಮೀಟ್, ಮಧ್ಯಾಹ್ನ ಲಂಚ್, ಸಾಯಂಕಾಲವೇ ಮದುವೆಯಾದ ಕನ್ನಡದ ಖ್ಯಾತ ನಟಿ!

0
1003

ಪ್ರೀತಿ ಎಂಬುದು ಯಾವಾಗ ಯಾರ ಮೇಲೆ ಹೇಗೆ ಆಗುತ್ತದೆ ಎಂಬುದು ಹೇಳಲು ಕಷ್ಟ ಸಾಧ್ಯ!
ಈ ಪ್ರೀತಿ ಎಂಬುದು ಹೇಗೆ ಹುಟ್ಟುತ್ತದೆ ಯಾವ ಸಮಯದಲ್ಲಿ, ಯಾರ ಮೇಲೆ ಆಗುತ್ತದೆ ಎಂಬುದನ್ನು ಊಹಿಸಲು ಸಾಧ್ಯವಿಲ್ಲ. ಈ ಪ್ರೀತಿಗೆ ಯಾವುದೇ ಜಾತಿ, ಧರ್ಮಗಳಿಲ್ಲ, ಹಣಕಾಸಿನ ಅವಶ್ಯಕತೆಯೂ ಇಲ್ಲ. ಪ್ರೀತಿಸುವ ಒಳ್ಳೆಯ ಮನಸ್ಸು ಇದ್ದರೆ ಜಗವನ್ನೇ ಗೆಲ್ಲಬಹುದು ಎಂಬುದು ಪ್ರೇಮಿಗಳ ಲೆಕ್ಕಾಚಾರ..!

 

 

ಕೆಲವು ಪ್ರೇಮಿಗಳು ಹತ್ತಾರು ವರ್ಷ ಪ್ರಯತ್ನಿಸಿ ತಮ್ಮ ಪ್ರೀತಿಯನ್ನು ಗೆದ್ದು ಮದುವೆಯಾಗುತ್ತಾರೆ. ಇನ್ನು ಕೆಲವರು ತಿಂಗಳುಗಳಲ್ಲೇ ತಮ್ಮ ಮನೆಗಳಲ್ಲಿ ಒಪ್ಪಿಸಿ ಮದುವೆಯಾಗಿ ಬಿಡುತ್ತಾರೆ. ಆದರೆ ಪ್ರೀತಿಯಲ್ಲಿ ಗೆದ್ದು ಸುಖ ಸಂಸಾರ ನಡೆಸುವವರಿಗಿಂತ, ಪ್ರೀತಿಯಲ್ಲಿ ಸೋತು ಪ್ರಾಣ ಕಳೆದುಕೊಳ್ಳುವವರ ಮಂದಿಯೇ ಜಾಸ್ತಿ.

 

 

ಆದರೆ ಯಾರೂ ಊಹಿಸಲಾರದ ಪ್ರೇಮಕಥೆಯೊಂದು ಕನ್ನಡ ಚಿತ್ರರಂಗದ ನಟಿ ಮತ್ತು ನಿರ್ದೇಶಕರ ಜೀವನದಲ್ಲಿ ನಡೆದು ಹೋಗಿದೆ. ಕೆಲವರಿಗೆ ಇದು ಆಶ್ಚರ್ಯ ತಂದರೆ, ಇನ್ನು ಕೆಲವರಿಗೆ ಈ ವಿಚಾರ ನಂಬಲು ಸಾಧ್ಯವಾಗುವುದೇ ಇಲ್ಲ. ಹೌದು, ಬೆಳಿಗ್ಗೆ ಒಬ್ಬರನ್ನೊಬ್ಬರು ನೋಡುತ್ತಾರೆ, ಆ ಒಂದು ನೋಟ ಪ್ರೀತಿಯಾಗುತ್ತದೆ,ಆ ದಿನ ಸಾಯಂಕಾಲವೇ ಇಬ್ಬರು ಮದುವೆ ಆಗಿಬಿಡುತ್ತಾರೆ.! ಇದು ಕನಸಾ ನನಸಾ ಎಂಬ ಪ್ರಶ್ನೆ ಕಾಡುವುದಂತೂ ಸತ್ಯ.. ಬಹುಶಃ ಈ ರೀತಿಯಾದ ಮದುವೆ ಯಾರೂ ಆಗಲು ಸಾಧ್ಯವೇ ಇಲ್ಲ ಅಲ್ಲವೇ ??? ಯಾರು ಆ ನಟಿ ಮತ್ತು ನಿರ್ದೇಶಕ ಎಂದು ತಿಳಿಯಲು ಮುಂದೆ ಓದಿ.

 

 

ಇತ್ತೀಚಿಗೆ ಹಿರಿಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿ ತುಳಸಿ 90ರ ದಶಕದಲ್ಲಿ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಖ್ಯಾತ ನಟಿಯಾಗಿದ್ದರು. ಅದೊಂದು ದಿನ ಡೈನಾಮಿಕ್ ಪ್ರಿನ್ಸ್ ದೇವರಾಜ್ ಅಭಿನಯದ ಮದರ್ ಇಂಡಿಯಾ ಸಿನಿಮಾದ ಚಿತ್ರೀಕರಣ.. ಆ ಸಿನಿಮಾದ ನಿರ್ದೇಶಕರು ಶಿವಮಣಿ, ಈ ಚಿತ್ರದಲ್ಲಿ ಒಂದು ಪಾತ್ರವನ್ನು ನಿರ್ವಹಿಸಲು ತುಳಿಸಿ ಅವರು ಆಯ್ಕೆಯಾಗಿದ್ದರು. ಸಿನಿಮಾ ಚಿತ್ರೀಕರಣಕ್ಕೆಂದು ತುಳಸಿ ಒಂದು ಜಾಗದಲ್ಲಿ ಕುಳಿತಿರುತ್ತಾರೆ.

 

 

ಅವರ ಪಕ್ಕದಲ್ಲಿ ನಿರ್ದೇಶಕ ಶಿವಮಣಿ ಅವರು ಧೂಮಪಾನವನ್ನು ಮಾಡುತ್ತಿರುತ್ತಾರೆ. ಧೂಮಪಾನದ ಹೊಗೆಯೂ ತುಳಸಿ ಅವರಿಗೆ ಸಹಿಸಿಕೊಳ್ಳಲಾಗದೆ ಕೆಮ್ಮುತ್ತಾರೆ. ಇದನ್ನು ನೋಡಿದ ಶಿವಮಣಿ ಅವರು ತಬ್ಬಿಬ್ಬಾಗಿ ಸಿಗರೇಟು ಮತ್ತು ಲೈಟರ್ ಅನ್ನು ಎಸೆದು ಬಿಡುತ್ತಾರೆ.

 

 

ಅಂದೇ ನೋಡಿ ಇಬ್ಬರೂ ಒಬ್ಬರನ್ನೊಬ್ಬರು ನೋಡಿದ್ದು, ನೋಡಿದ ತಕ್ಷಣ ಮನಸ್ಸಿನಲ್ಲಿ ಒಂದು ಸೆಳೆತ ಉಂಟಾಗುತ್ತದೆ. ಮಧ್ಯಾಹ್ನ ಅಷ್ಟೇ ಇಬ್ಬರು ಪರಸ್ಪರ ಒಬ್ಬರ ಬಗ್ಗೆ ಒಬ್ಬರು ತಿಳಿದುಕೊಂಡು ಮಾತುಕತೆಯನ್ನು ನಡೆಸುತ್ತಿರುತ್ತಾರೆ. ನಂತರ ಚಿತ್ರೀಕರಣವೆಲ್ಲ ಮುಗಿದು ಇಬ್ಬರೂ ತಮ್ಮ ತಮ್ಮ ಮನೆಗೆ ಹೋಗಿಬಿಡುತ್ತಾರೆ.

 

 

ನಂತರ ಶಿವಮಣಿ ಅವರಿಗೆ ಏನಾಯಿತೋ ಏನೋ ಗೊತ್ತಿಲ್ಲ ತುಳಸಿ ಅವರನ್ನು ಒಂದೇ ದಿನದಲ್ಲಿ ಗಾಢವಾಗಿ ಪ್ರೀತಿಸುತ್ತಾರೆ. ಅವರನ್ನು ಒಂದು ಕ್ಷಣವು ಬಿಟ್ಟು ಇರಲು ಸಾಧ್ಯವಾಗುವುದಿಲ್ಲ .. ತಕ್ಷಣ ತನ್ನ ತಂದೆಯ ಆಶೀರ್ವಾದವನ್ನು ಪಡೆದು ತಾಳಿಯನ್ನು ತೆಗೆದುಕೊಂಡು ತುಳಸಿಯವರ ಮನೆಗೆ ಹೋಗಿಬಿಡುತ್ತಾರೆ. ಶಿವಮಣಿ ಅಷ್ಟೊತ್ತಿನಲ್ಲಿ ಬಂದಿದ್ದನ್ನು ಕಂಡು ತುಳಸಿ ಅವರಿಗೆ ಶಾಕ್ ಆಗುತ್ತದೆ. ನಂತರ ಶಿವಮಣಿ ನೇರವಾಗಿ ನನ್ನನ್ನು ಮದುವೆಯಾಗುತ್ತೀಯಾ ಎಂದು ಕೇಳಿಬಿಡುತ್ತಾರೆ.

 

 

ಅಷ್ಟೊತ್ತಿಗಾಗಲೇ ತುಳಸಿ ಅವರು ಇವರನ್ನು ತನ್ನ ಗಂಡ ಎಂದು ಮನಸ್ಸಿನಲ್ಲೇ ಒಪ್ಪಿಕೊಂಡು ಬಿಟ್ಟಿದ್ದರು. ಶಿವಮಣಿಗೆ ಅವರು ಧೈರ್ಯವಾಗಿ ತಾಳಿಯನ್ನು ಇಟ್ಟುಕೊಂಡು ಬಂದು ಕೇಳಿದ ತಕ್ಷಣ ತುಳಸಿ ಅವರು ಮದುವೆಯಾಗುತ್ತೇನೆ ಎಂದು ಒಪ್ಪಿಕೊಂಡುಬಿಟ್ಟರು! ನಂತರ ಅದೇ ದಿನ ಸಾಯಂಕಾಲವೇ ಇಬ್ಬರು ದೇವಸ್ಥಾನದಲ್ಲಿ ವಿವಾಹವಾಗಿಯೇ ಬಿಡುತ್ತಾರೆ.

 

 

ಆದರೆ ಇವರಿಬ್ಬರ ವಿವಾಹ ಚಿತ್ರರಂಗದವರಿಗಾಗಲೀ ಸ್ನೇಹಿತರಿಗಾಗಲಿ ತಿಳಿದಿರಲಿಲ್ಲ. ದೇವಸ್ಥಾನದಲ್ಲಿ ಮದುವೆಯಾದ ಬಳಿಕ ಶಿವಮಣಿ ಅವರು ತನ್ನ ಮನೆಗೆ ಕರೆದುಕೊಂಡು ಹೋದರು.. ನಂತರ ಇವರಿಬ್ಬರ ವಿವಾಹ ಕಾಡ್ಗಿಚ್ಚಿನಂತೆ ಎಲ್ಲೆಡೆ ಹರಡಿತು. ಯಾರಿಗೂ ಈ ಮದುವೆ ವಿಚಾರವನ್ನು ನಂಬಲು ಸಾಧ್ಯವೇ ಆಗುತ್ತಿರಲಿಲ್ಲ. 1995 ರಲ್ಲಿ ವಿವಾಹವಾದ ಇವರು ಬಹಳ ಅನ್ಯೋನ್ಯವಾಗಿ ವೈವಾಹಿಕ ಜೀವನವನ್ನು ನಡೆಸುತ್ತಿದ್ದಾರೆ.

ನೀವು ಯಾವತ್ತೂ ಈ ರೀತಿಯಾದ ಪ್ರೇಮ ವಿವಾಹವನ್ನು ಕೇಳಿರಲು ಸಾಧ್ಯವಿರುವುದಿಲ್ಲ.. ಪ್ರೇಮ ವಿವಾಹ ತಮಗೆ ಇಷ್ಟವಾದಲ್ಲಿ ಕಾಮೆಂಟ್ ಮುಖಾಂತರ ನಿಮ್ಮ ಅನಿಸಿಕೆಗಳನ್ನು ತಿಳಿಸಬಹುದು.

LEAVE A REPLY

Please enter your comment!
Please enter your name here