ಕೊನೆಗೂ ವಿನೋದ್ ರಾಜ್ ಅವರಿಗೆ ಅದೃಷ್ಟ ಲಕ್ಷ್ಮಿ ಹುಡುಕಿಕೊಂಡು ಬಂದಳು !

0
935

ಕನ್ನಡದ ಹೆಮ್ಮೆಯ ನಟಿ ಲೀಲಾವತಿಯವರ ಪುತ್ರರಾದ ವಿನೋದ್ ರಾಜ್ ಅವರನ್ನು 1987 ರಲ್ಲಿ ಡ್ಯಾನ್ಸ್ ರಾಜಾ ಡ್ಯಾನ್ಸ್ ಎಂಬ ಚಿತ್ರದ ಮೂಲಕ ದ್ವಾರಕೀಶ್ ಅವರು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿಸಿದರು! ಅವರ ನೃತ್ಯ ಕೌಶಲ್ಯಕ್ಕೆ ಹೆಸರುವಾಸಿಯಾಗಿದ್ದು, ಕರ್ನಾಟಕದ ಮೈಕಲ್ ಜಾಕ್ಸನ್ ಎಂದೇ ಕರೆಯುತ್ತಿದ್ದರು. ಇನ್ನೂ ವಿನೋದ್ ರಾಜ್ ಅವರು ಅಂಬರೀಶ್ , ಅರ್ಜುನ್ ಸರ್ಜಾ , ರಮೇಶ್ ಅರವಿಂದ್ , ಶ್ರೀನಿವಾಸ್ ಮೂರ್ತಿ ಮುಂತಾದ ನಟರೊಂದಿಗೆ ಕೆಲಸ ಮಾಡಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಹೆಸರನ್ನು ಮಾಡಿದ್ದರು.

 

 

ಆದರೆ ಅದೇಕೋ ಏನೋ ಇದ್ದಕ್ಕಿದ್ದಂತೆ ಚಿತ್ರರಂಗದಿಂದ ವಿನೋದ್ ರಾಜ್ ಅವರು ದೂರ ಉಳಿದು, ತನ್ನ ತಾಯಿ ಲೀಲಾವತಿಯವರೊಂದಿಗೆ ತೋಟವೊಂದನ್ನು ಮಾಡಿ ಕೃಷಿಯ ಜೀವನ ಸಾಗಿಸುತ್ತಿದ್ದಾರೆ.! ೯೦ರ ದಶಕದಲ್ಲಿ ಒಳ್ಳೆಯ ಡ್ಯಾನ್ಸರ್ ಆಗಿ ಹೆಸರುವಾಸಿಯಾಗಿದ್ದ ವಿನೋದ್ ರಾಜ್ , ಚಿತ್ರರಂಗದಲ್ಲಿ ಅಷ್ಟು ಯಶಸ್ಸು ಕಂಡಿರಲಿಲ್ಲ.. ಆದರೆ ಅಂದು ಡ್ಯಾನ್ಸ್ ರಾಜಾ ಡ್ಯಾನ್ಸ್ ಸಿನಿಮಾದಲ್ಲಿ ಅವರು ಹಾಕಿದ ಸ್ಟೆಪ್ ಗಳಿಂದ ಇಂದಿನ ಯುವ ಪೀಳಿಗೆಗಳು ಅವರನ್ನು ಸಾಮಾಜಿಕ ಜಾಲತಾಣದಲ್ಲಿ ನೆನೆಪಿಸಿಕೊಳ್ಳುತ್ತಿರುತ್ತಾರೆ !

 

 

ಇತ್ತೀಚೆಗೆ ಕಿರುತೆರೆ ಲೋಕದಲ್ಲಿ ರಿಯಾಲಿಟಿ ಶೋಗಳ ಅಬ್ಬರ ಜಾಸ್ತಿಯಾಗಿದ್ದು, ಡ್ಯಾನ್ಸ್ ಮತ್ತು ಸಂಗೀತ ಕಾರ್ಯಕ್ರಮಗಳು ವಿವಿಧ ವಾಹಿನಿಯಲ್ಲಿ ಪ್ರಸಾರವಾಗುತ್ತಲೇ ಇವೆ. ಆದರೆ ಡ್ಯಾನ್ಸ್ ರಿಯಾಲಿಟಿ ಕಾರ್ಯಕ್ರಮದಲ್ಲಿ ನೃತ್ಯದ ಗಂಧ ಗಾಳಿಯೇ ಗೊತ್ತಿಲ್ಲದವರನ್ನು ಜಡ್ಜ್ ಆಗಿ ನೇಮಕ ಮಾಡಿರುವುದು ವೀಕ್ಷಿಕರಿಗೆ ಅಸಮಾಧಾನ ವಾಗಿದೆ.

 

 

ಇದನ್ನು ಕಂಡ ನೆಟ್ಟಿಗರು ಮತ್ತು ಪ್ರೇಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಡ್ಯಾನ್ಸ್ ಕಾರ್ಯಕ್ರಮದಲ್ಲಿ ಯಾರ್ ಯಾರನ್ನೋ ತೀರ್ಪುಗಾರರನ್ನಾಗಿ ಕೂರಿಸುವ ಬದಲು ವಿನೋದ್ ರಾಜ್ ಅವರನ್ನು ಕೂರಿಸಿ ಎಂದು ಪದೇ ಪದೇ ತಮ್ಮ ಧ್ವನಿಯನ್ನು ಎತ್ತುತ್ತಿದ್ದರು. ಮತ್ತು ವಾಹಿನಿಯ ಮುಖ್ಯಸ್ಥರ ಬಳಿ ಕೇಳಿಕೊಳ್ಳುತ್ತಿದ್ದರು. ಆದರೆ ಇದ್ಯಾವುದನ್ನು ಲೆಕ್ಕಿಸದ ವಾಹಿನಿಯ ಮುಖ್ಯಸ್ಥರು ವಿನೋದ್ ರಾಜ್ ಅವರಿಗೆ ಅವಕಾಶವನ್ನು ನೀಡಲೇ ಇಲ್ಲ.

 

 

ಆದರೆ ಇದೀಗ ಕಿರುತೆರೆಯಲ್ಲಿ ಅವಕಾಶ ಸಿಗದೇ ಹೋದರೂ ಬೆಳ್ಳಿತೆರೆಯ ಮೇಲೆ ಒಂದು ಬಿಗ್ ಆಫರ್ ಒಲಿದು ಬಂದಿದೆ ಅದೇನು ಎಂದು ತಿಳಿದುಕೊಳ್ಳಲು ಮುಂದೆ ಓದಿ..ಕನ್ನಡ ಚಿತ್ರರಂಗ ಕಂಡ ಅದ್ಭುತ ನಟ ವಿನೋದ್‍ರಾಜ್‍ ದ್ವಾರಕೀಶ್‍ ಮೂಲಕ ‘ಡಾನ್ಸ್ ರಾಜ ಡಾನ್ಸ್’ ಚಿತ್ರದಿಂದ ಕನ್ನಡಿಗರ ಮನೆಮಗ ಎನಿಸಿದ ನಟ.! ನಾನಾ ಕಾರಣಗಳಿಗಾಗಿ ಹಲವು ವರ್ಷಗಳಿಂದ ಬೆಳ್ಳಿ ತೆರೆಯಿಂದ ದೂರವಿದ್ದಾರೆ.

 

 

ಆದರೆ ಏತನ್ಮಧ್ಯೆ, ‘ಮುಖವಾಡ’ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ಅವರನ್ನು ಕರೆತರುವ ತಯಾರಿ ನಡೆಸಿರುವ ಬಗ್ಗೆ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದೆ. ಎಸ್. ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಮುಖವಾಡ’ ಚಿತ್ರದಲ್ಲಿ ಪವನ್‍ ತೇಜ, ಶಿಲ್ಪಾ ಮಂಜುನಾಥ್ ಜೊತೆಗೆ ವಿನೋದ್ ರಾಜ್ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಈ ಕುರಿತು ಮಾತುಕತೆ ನಡೆಯುತ್ತಿದೆ ಎಂದು ಚಿತ್ರತಂಡ ಹೇಳಿಕೊಂಡಿತ್ತು.

 

 

ಆದರೆ ಇದರ ಬಗ್ಗೆ ಸ್ಪಷ್ಟನೆ ನೀಡಿರುವ ವಿನೋದ್ ರಾಜ್ ಯಾವುದೇ ಸಿನಿಮಾದಲ್ಲಿ ಅಭಿನಯಿಸಲು ಒಪ್ಪಿಗೆ ಕೊಟ್ಟಿಲ್ಲ ಹಾಗೂ ಸದ್ಯಕ್ಕೆ ಒಪ್ಪಿಗೆ ಕೊಡುವುದೂ ಇಲ್ಲ ಎಂದು ಹೇಳಿದ್ದಾರೆ. ಸಸ್ಪೆನ್ಸ್ ಮತ್ತು ಥ್ರಿಲ್ಲರ್ ಕತೆಯುಳ್ಳ ಮುಖವಾಡ ಚಿತ್ರದ ಮೂಲಕ ಏನಾದರೂ ವಿನೋದ್ ರಾಜ್ ಅವರು ಮರಳಿ ಸ್ಕ್ರೀನ್ ಮೇಲೆ ಬಂದರೆ ಅಭಿಮಾನಿಗಳಂತೂ ಖುಷಿ ಪಡುವುದರಲ್ಲಿ ಎರಡನೇ ಮಾತಿಲ್ಲ.

 

 

ತಮ್ಮ ತಾಯಿಯಂತೆ ಸರಳ ಗುಣವನ್ನು ಹೊಂದಿರುವ ವಿನೋದ್ ರಾಜ್ ಅವರು ಚಿತ್ರರಂಗ ತೊರೆದರು ಕನ್ನಡ ಜನರನ್ನು ಪ್ರೀತಿಸುವುದನ್ನು ಬಿಟ್ಟಿಲ್ಲ.. ಟಿವಿ 9 ಕನ್ನಡದ ಪ್ರವಾಹ ಪರಿಹಾರ ನಿಧಿಗೆ ದೇಣಿಗೆ ನೀಡಿದ ಏಕೈಕ ನಟ ಇವರಾಗಿದ್ದು, ಭ್ರಷ್ಟಾಚಾರದ ವಿರುದ್ಧ ಜನ ಲೋಕಪಾಲ್ ಮಸೂದೆಯನ್ನು ಬೆಂಬಲಿಸುವ ಅಣ್ಣಾ ಹಜಾರೆ ಅವರ ಚಳವಳಿಗೆ ಸೇರಿದ್ದರು.

 

 

ಕೃಷಿಯೊಂದಿಗೆ ಜೀವನ ನಡೆಸುತ್ತಾ ಸಮಾಜ ಸೇವೆಯಲ್ಲೂ ಕೈಜೋಡಿಸುತ್ತಾ ಜೀವನವನ್ನು ಸಾಗಿಸುತ್ತಿರುವ ವಿನೋದ್ ರಾಜ್ ಅವರು.. ಕಿರುತೆರೆಯಲ್ಲಿ ನೃತ್ಯ ಕಾರ್ಯಕ್ರಮದ ತೀರ್ಪುಗಾರರಾಗಿ ನೋಡಬೇಕೆಂದು ಜನರ ಮಹದಾಸೆಯಂತೆಯೇ ಮುಖವಾಡ ಚಿತ್ರದಲ್ಲಿ ಅಭಿನಯಿಸಬೇಕೆಂದು ಪ್ರೇಕ್ಷಕರ ಇಚ್ಛೆಯೂ ಆಗಿದೆ.

LEAVE A REPLY

Please enter your comment!
Please enter your name here