ನೀವು ಕೃಷಿಕರಾಗಿದ್ದರೆ ಈ ಮಾಹಿತಿ ಓದಲೇ ಬೇಕು..

0
403

ಪಕ್ಷಿಗಳು ನಿಸರ್ಗದಲ್ಲಿನ ಅಧ್ಬುತ ಸೃಷ್ಟಿ. ಈ ಪಕ್ಷಗಳು ನೀಡಿದ ಕೊಡುಗೆ ಮನುಕುಲಕ್ಕೆ ಅಗಾಧವಾಗಿದೆ. ಇಂದು ದೇಶದಲ್ಲಿ ಬಹುತೇಕ ಕೃಷಿಯ ಆರೋಗ್ಯ ಕಾಪಾಡುತ್ತಿರುವುದು ಇದೇ ಪಕ್ಷಿಗಳು ಅಂದರೆ ನಿಮಗೆ ಆಶ್ಚರ್ಯವಾಗುತ್ತದೆ. ಹೌದು, ಯಾವುದೇ ಬಂಧವಿಲ್ಲದ ಬದುಕು ಕಟ್ಟಿಕೊಂಡಿರುವ ಪ್ರಪಂಚದ ಅಚ್ಚರಿಯ ಜೀವಿಗಳು ಅಂದರೆ ಪಕ್ಷಿಗಳು. ನಿಸರ್ಗದಲ್ಲಿ ಆಭರಣಗಳಂತಿವೆ ಈ ಹಕ್ಕಿಗಳು. ಕವಿಗಳಿಗೆ ಸ್ಪೂರ್ತಿ ನೀಡಿ ಹಾರುವ ಹಕ್ಕಿಗಳು ಕವಿಗೆ ದೇವರು ಋಜು ಮಾಡಿದಂತೆ ಕಂಡಿದೆ.

ಮನುಷ್ಯನಿಗೆ ನೀಲಾಕಾಶಕ್ಕೆ ಹಾರಬೇಕು ಎಂದು ಅನ್ನಿಸಿದ್ದು ಇದೇ ಹಕ್ಕಿಗಳನ್ನು ಕಂಡು, ಮನುಷ್ಯ ಕನಸಿನಲ್ಲೂ ಹಾರಲು ಪ್ರಯತ್ನಿಸುತ್ತಾನೆ ಅವನ ಮೊದಲ ಕೆಲಸ ಕನಸಿನಲ್ಲೂ ರೆಕ್ಕೆ ಕಟ್ಟಿಕೊಳ್ಳುವುದೇ ಆಗಿರುತ್ತದೆ. ಪಕ್ಷಿಗಳಲ್ಲಿ ಎರಡು ಪ್ರಮುಖ ವಿಧಗಳು, ಹಾರುವ ಪಕ್ಷಿಗಳು ಮತ್ತು ಹಾರಲಾಗದ ಪಕ್ಷಿಗಳು. ಈ ಪಕ್ಷಿಗಳ ಅಧ್ಯಯನಕ್ಕೆ ವಿಶೇಷವಾದ ಶಾಖೆ ಇದೆ, ಭಾರತದಲ್ಲಿ ಪಕ್ಷಿಗಳ ಅಧ್ಯಯನ ನಡೆಸಿದವರಲ್ಲಿ ಸಲೀಂ ಅಲಿ ಪ್ರಮುಖರು. ಪಕ್ಷಿಗಳು ನಿಸರ್ಗದಲ್ಲಿ ಹಲವು ಸಮತೋಲನಗಳಿಗೆ ಕಾರಣವಾಗಿದೆ ಹಾಗೆಯೇ ರೈತರಿಗೂ ಸಹಕಾರಿ.

ಬಹಳಷ್ಟು ಪಕ್ಷಿಗಳ ಆಹಾರ ಕೀಟಗಳೇ ಆಗಿರುತ್ತದೆ, ಕೀಟಗಳು ರೈತರ ಮತ್ತು ಬೆಳೆಯ ಶತ್ರುವಾಗಿದೆ, ಇಂತಹ ಕೀಟಗಳನ್ನು ನಿಯಂತ್ರಣ ಪಕ್ಷಿಗಳಿಂದ ಮಾತ್ರ ಸಾಧ್ಯ. ಒಂದು ರೀತಿಯ ನೈಸರ್ಗಿಕ ನಿಯಂತ್ರಣ ಪಕ್ಷಿಗಳಿಂದ ನಿರಂತರವಾಗಿ ಸಾಗುತ್ತಲೇ ಇದೆ. ಕಡಿಮೆ ಸಮಯದಲ್ಲಿ ಬೆಳೆಗಳಿಗೆ ಕಂಟಕವಾಗುವ ಮಿಡತೆಗಳನ್ನು ಹತೋಟಿಗೆ ತರುವ ಪಕ್ಷಿಗಳು ಕೃಷಿಕ ಮಿತ್ರ ಅನ್ನೋದರಲ್ಲಿ ಯಾವುದೇ ಸಂಶಯವಿಲ್ಲ. ಕೃಷಿಕರು ಮೊಟ್ಟೆ ಮತ್ತು ಮಾಂಸಕ್ಕಾಗಿ ಒಂದಷ್ಟು ಪಕ್ಷಿಗಳನ್ನು ಸಾಕಾಣಿಕೆ ಮಾಡುತ್ತಾರೆ. ಹೀಗೆ ಕೋಳಿ, ಬಾತುಕೋಳಿ ಮತ್ತು ಎಮು ಪಕ್ಷಿಗಳನ್ನು ಸಾಕಲಾಗುತ್ತದೆ.

ಇದು ರೈತರಿಗೆ ಹಣ ತಂದುಕೊಡುವಲ್ಲಿ ಮುಖ್ಯ ಉಪಕಸುಬಾಗಿ ಗುರುತಿಸಿಕೊಂಡಿದೆ. ಕುಕ್ಕುಟೋದ್ಯಮ ಅತ್ಯಂತ ಜನಪ್ರಿಯ ಉದ್ಯಮವಾಗಿದೆ. ಇನ್ನು ಪಕ್ಷಿಗಳು ಕೃಷಿಕರ ಪ್ರಮುಖ ಸಾಕುಪ್ರಾಣಿಗಳಾದ ಹಸು ಎಮ್ಮೆಗಳ ಮೈಮೇಲೆ ಅಂಟಿಕೊಂಡು ಬಾದಿಸುವ ಕೀಟಗಳನ್ನು ಹೆಕ್ಕಿ ತಿನ್ನುತ್ತವೆ. ಹೀಗೆ ದಿನಂಪ್ರತಿ ನಡೆಯುವ ಕಾರಣದಿಂದಾಗಿ ಹಸು, ಎಮ್ಮೆಗಳ ಆರೋಗ್ಯ ಶುಚಿಯಾಗಿರುತ್ತದೆ. ಇದರಿಂದ ಸಾಕು ಪ್ರಾಣಿಗಳು ರೈತನಿಗೆ ಸದಾಕಾಲ ನೆರವನ್ನು ನೀಡುತ್ತದೆ.

ಅದೇ ರೀತಿ ರೈತರು ಬೆಳೆದು ಶೇಖರಿಸಿಟ್ಟ ಆಹಾರ ಧಾನ್ಯಗಳನ್ನು ಇಲಿ ಹೆಗ್ಗಣಗಳು ನಾಶಪಡಿಸುತ್ತದೆ. ಇಂತಹ ಮೂಷಿಕಗಳ ನಿಯಂತ್ರಣದಲ್ಲಿ ಕೆಲವು ದೊಡ್ಡ ಪಕ್ಷಿಗಳು ಅಂದರೆ ಗೂಬೆ ಮತ್ತು ಹದ್ದುಗಳು ರೈತರಿಗೆ ನೆರವಾಗುತ್ತದೆ. ಇದರಿಂದ ಬೆಳೆಯ ರಕ್ಷಣೆಯೂ ಸಾಧ್ಯವಾಗುತ್ತದೆ. ಕಾಗೆಗಳಂತಾ ಪಕ್ಷಿಗಳು ಗ್ರಾಮಗಳಲ್ಲಿ ಶುಚಿಯಾಗಿಡುವ ಕೆಲಸದಲ್ಲಿ ತೊಡಗಿದ್ದು ರೈತನ ಸುತ್ತಮುತ್ತಲಿನ ಪರಿಸರವನ್ನು ಕಾಪಾಡುತ್ತದೆ.

LEAVE A REPLY

Please enter your comment!
Please enter your name here