ರೈತರ ಚಿನ್ನಾಭರಣ ಹರಾಜು,ಮುತ್ತೂಟ್ ಫೈನಾನ್ಸ್ ವಿರುದ್ಧ ಮಂಡ್ಯದಲ್ಲಿ ಪ್ರತಿಭಟನೆ..!

0
247

ರೈತರ ಚಿನ್ನಾಭರಣವನ್ನ ಹರಾಜು ಮಾಡುತ್ತಿದ್ದ ಮುತ್ತೂಟ್ ಫೈನಾನ್ಸ್ ಕ್ರಮವನ್ನ ಕಂಡಿಸಿ ಮಂಡ್ಯದಲ್ಲಿ ರೈತರು ಪ್ರತಿಭಟನೆ ನಡೆಸಿದ್ದಾರೆ. ಪಾಂಡವಪುರ ಪಟ್ಟಣದಲ್ಲಿರುವ ಮುತ್ತೂಟ್ ಫೈನಾನ್ಸ್ ಬಳಿ ರೈತ ನಾಯಕ ದರ್ಶನ್ ಪಟ್ಟಣ್ಣಯ್ಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದು, ಮುತ್ತೂಟ್ ಫೈನಾನ್ಸ್ ವಿರದ್ದ ದಿಕ್ಕಾರ ಕೂಗಲಾಗಿದೆ. 15 ಮಂದಿ ರೈತರ ಚಿನ್ನಾಭರಣನ್ನು ಹರಾಜು ಮಾಡಲು ಮುಂದಾದ ಹಿನ್ನಲೆ ಈ ಪ್ರತಿಭಟನೆ ನಡೆದಿದೆ. ಪ್ರತಿಭಟನೆಕಾರರನ್ನು ಮನವಲಿಸಲು ಮುಂದಾದ ಮಂಡ್ಯ ಜಲ್ಲಾ ವಲಯ ವ್ಯವಸ್ತಾಪಕ ದಿನೇಶ್ ಅವರನ್ನ, ರೈತರು ತರಾಟೆಗೆ ತಗೆದುಕೊಂಡಿದ್ದಾರೆ.

ಮುತ್ತೂಟ್ ಫೈನಾನ್ಸ್ ಅಧಿಕಾರಿಗಳು ವಾರ್ಷಿಕ ಶೇಕಡ 26 ರಷ್ಟು ದುಪ್ಪಟ್ಟು ಬಡ್ಡಿ ದರ ವಿಧಿಸಿ ಗ್ರಾಮೀಣ ರೈತರ ಚಿನ್ನವನ್ನ ಕೊಳ್ಳೆಹೊಡೆಯಲು ಮುಂದಾಗಿದ್ದಾರೆ.ಹೀಗಾಗಿ ಇಂತಹ ಫೈನಾನ್ಸ್‍ಗಳನ್ನ ರಾಜ್ಯದ್ಯಾಂತ ಮುಚ್ಚಬೇಕು ಎಂದು ರೈತರು ಆಗ್ರಹಿಸಿದ್ದರು. ಇನ್ನು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ್ದ ತಹಸಿಲ್‍ದಾರ್ ಪ್ರಮೋದ್ ಎಲ್ ಪಾಟೀಲ್ ಅವರು ಫೈನಾನ್ಸ್ ವ್ಯವಸ್ತಾಪಕರು ಮತ್ತು ಅಧಿಕಾರಿಗಳ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿ ಒಡವೆ ಹರಾಜನ್ನು ಮುಂದೂಡಿಸಿದ್ದಾರೆ.

LEAVE A REPLY

Please enter your comment!
Please enter your name here