ಅಂಬುಲೆನ್ಸ್ ಸಿಗದ ಕಾರಣ ಗರ್ಭಿಣಿಯನ್ನು ಬೈಕಿನಲ್ಲಿ ಕರೆತಂದ ಕುಟುಂಬಸ್ಥರು

0
111

ಅಂಬುಲೆನ್ಸ್ ಸಿಗದ ಕಾರಣದಿಂದ ಕುಟುಂಬಸ್ಥರು ಗರ್ಭಿಣಿ ಸ್ತ್ರೀ ಅನ್ನು ಬೈಕಿನಲ್ಲಿ ಸುಮಾರು ಹತ್ತು ಕಿಲೋಮೀಟರ್ ನಷ್ಟು ದೂರ ಬೈಕಿನಲ್ಲಿಯೇ ಕರೆದುಕೊಂಡು ಆಸ್ಪತ್ರೆಗೆ ಹೋಗಿದ್ದಾರೆ. ಜಾರ್ಖoಡ್ ರಾಜ್ಯದ ಚಂದ್ವಾ ಹೋಬಳಿಯಲ್ಲಿ ಈ ಘಟನೆ ನಡೆದಿದ್ದು ಗರ್ಭಿಣಿ ಶಾಂತದೇವಿ ಹೆರಿಗೆ ನೋವಿನಿಂದ ನರಳುತ್ತಿದ್ದು ಅದರೊಡನೆ ತೀವ್ರ ರಕ್ತಸ್ರಾವ ಕೂಡ ಆಗಿದೆ
ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಸ್ತರು ಮೊದಲು ಆಂಬುಲೆನ್ಸ್ ಗೆ ಕರೆ ಮಾಡಿದರು ಆದರೆ ಆಸ್ಪತ್ರೆ ಸಿಬ್ಬಂದಿ ಆಂಬುಲೆನ್ಸ್ ಸೇವೆಯಲ್ಲಿಲ್ಲ ಎಂದು ಹೇಳಿದ್ದರು
ಶಾಂತದೇವಿಗೆ ಮತ್ತಷ್ಟು ಹೆರಿಗೆ ನೋವು ಹೆಚ್ಚಾಗಿ ಸ್ಥಿತಿ ಗಂಭೀರವಾದಾಗ ಕುಟುಂಬಸ್ಥರು ಭಯಗೊಂಡು ಅದೇ ಗ್ರಾಮದ ವ್ಯಕ್ತಿಯೊಬ್ಬರ ಬೈಕಿನಲ್ಲಿ ಗರ್ಭಿಣಿಯನ್ನು ಚಾಂದ್ವಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ
ಮಹಿಳೆಯ ಪರಿಸ್ಥಿತಿ ನೋಡಿ ವೈದ್ಯರು ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಲತೆಹಾರ್ ಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ
ಮುಂದಿನ ಲತೆಹಾರ್ ಆಸ್ಪತ್ರೆಗೆ 27 ಕಿಲೋಮೀಟರ್ ದೂರದ ಪ್ರಯಾಣಕ್ಕೆ ಆಂಬುಲೆನ್ಸ್ ಸೇವೆ ಒದಗಿಸಿ ಕೊಟ್ಟಿದ್ದಾರೆ.
ಮತ್ತೆ ಲತೆಹಾರ್ ನಲ್ಲೂ ಕೂಡ ತಾತ್ಕಾಲಿಕ ಚಿಕಿತ್ಸೆ ನೀಡಿ ಮುಂದಿನ ಚಿಕಿತ್ಸೆಗೆ ಗರ್ಭಿಣಿಯನ್ನು ರಾಂಚೆ ರಾಜೇಂದ್ರ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಈಗ ಸದ್ಯಕ್ಕೆ ಮಹಿಳೆ ಆರೋಗ್ಯ ಸುಧಾರಣೆಗೊಂಡಿದೆ.
ಶಾಂತದೇವಿಯ ಪತಿ ಕಮಲಗಂಜು ತನ್ನ ಪತ್ನಿಗೆ ಹೆರಿಗೆ ನೋವು ಶುರುವಾದಗಿನಿಂದ ಆಂಬುಲೆನ್ಸ್ ವ್ಯವಸ್ಥೆಗಾಗಿ ಆಸ್ಪತ್ರೆಗೆ ಕರೆ ಮಾಡುತ್ತಿದ್ದರಂತೆ ಆದರೆ ಆ ಕಡೆಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ ಎಂದು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.
ಗರ್ಭಿಣಿಯ ದೇಹದಲ್ಲಿ ಹಿಮೋಗ್ಲೋಬಿನ್ ಕೂಡ ತುಂಬಾ ಕಡಿಮೆಯಿದ್ದು ಮಹಿಳೆಯ ರಕ್ತಕ್ಕೆ ಸರಿಹೊಂದುವ ಗುಂಪಿನ ರಕ್ತವು ಕೂಡ ಬ್ಲಡ್ ಬ್ಯಾಂಕಿನಲ್ಲಿ ಇರಲಿಲ್ಲ.
ಅನಿವಾರ್ಯದಿಂದಾಗಿ ಮಹಿಳೆಗೆ ಪ್ರಾಥಮಿಕ ಚಿಕಿತ್ಸೆ ನೀಡಿ ರಾಂಚಿಯ ಆಸ್ಪತ್ರೆಗೆ ಕಳುಹಿಸಬೇಕೆಂದು ಜಿಲ್ಲಾ ಸರ್ಜನ್ ಶಿವಪೂಜಾನ್ ಶರ್ಮ ಹೇಳಿದರು.
ನಂತರ ಈಕೆಯ ಕುಟುಂಬಸ್ಥರು 108 ಕ್ಕೆ ಕರೆಮಾಡಿದರು ಕೂಡ ಆಂಬುಲೆನ್ಸ್ ನಮಗೆ ಸೇವೆ ನೀಡಿಲ್ಲ ಎಂದು ದೂರಿದ್ದಾರೆ
ಆದರೆ ಆಂಬುಲೆನ್ಸ್ ಗೆ ಒಂದು ಬಾರಿ ಕರೆ ಮಾಡಿದರೆ ಕರೆ ಮಾಡಿ 40 ನಿಮಿಷದ ವರೆಗೆ ಆಂಬುಲೆನ್ಸ್ ಗಾಗಿ ಕಾಯಬೇಕು ಆ 40 ನಿಮಿಷದ ನಂತರ ಕ್ರಮ ಕೈಗೊಳ್ಳಬೇಕು ಎಂಬುದು ಕಾನೂನಾಗಿದೆ.
ಕರೆ ಮಾಡಿದರು ಆಂಬುಲೆನ್ಸ್ ಬರದ ಕಾರಣ ಕುಟುಂಬಸ್ಥರು ಗರ್ಭಿಣಿಯನ್ನು ಬೈಕಿನಲ್ಲಿಯೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಸಿ ಪಿ ಎಂ ಮುಖಂಡರು ಜಿಲ್ಲಾ ಆರೋಗ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೂಕ್ತ ತನಿಖೆ ನಡೆಸಿ ಜಿಲ್ಲಾ ಸರ್ಜನ್ ವಿರುದ್ಧ ಸರ್ಕಾರ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here