ಈ ವಾಹನ ರಸ್ತೆಯಲ್ಲಿ ಸಂಚರಿಸಿದ್ರೆ ಗೊತ್ತೇ ಆಗಲ್ಲ ಆಶ್ಚರ್ಯನಾ..?

0
307

ಸಾರಿಗೆ ಸಂಪರ್ಕದಲ್ಲಿ ಸುಧಾರಣೆ ಬಯಸಿರುವ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆಗಳ ಸಚಿವಾಲಯವು ‘ಫೇಮ್’ ಯೋಜನೆ ರೂಪಿಸಿದ್ದು ಇದರ ಭಾಗವಾಗಿ ಎರಡನೇ ಹಂತದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ 50 ಎಲೆಕ್ಟ್ರಿಕ್‍ಬಸ್ ಕೊಳ್ಳಲು ಸಹಾಯಧನ ಒದಗಿಸಲು ಸಿದ್ಧವಾಗಿದೆ. ಈಯೋಜನೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಿಂದ ಮಾತ್ರವಲ್ಲದೆ ಇತರ ಪ್ರಮುಖ ನಗರಗಳ ಮಧ್ಯೆಯೂ ಎಲೆಕ್ಟ್ರಿಕ್ ಬಸ್ ಸಂಚಾರ ನಡೆಸಲಿದೆ.

ಸಾರಿಗೆ ಸಂಸ್ಥೆ ಕಳೆದ ವರ್ಷವೇ ಬೆಂಗಳೂರಿನಿಂದ ಇನ್ನೂರು ಕಿ.ಮೀ. ಹತ್ತಿರದಲ್ಲಿರುವ ಮೈಸೂರು, ತುಮಕೂರು, ಕೋಲಾರ, ಹಾಸನ ನಗರಗಳಿಗೆ ವಿದ್ಯುತ್ ಚಾಲಿತ ಬಸ್ ಸಂಪರ್ಕಕ್ಕೆ ತೀರ್ಮಾನಿಸಲಾಗಿತ್ತು. ಫೇಮ್ ಯೋಜನೆಯ ಒಂದನೇ ಹಂತದಲ್ಲಿ ನಗರ ಸಾರಿಗೆಗೆ ಮಾತ್ರ ಸಹಾಯಧನ ನೀಡಲು ನಿಯಮ ರೂಪಿಸಲಾಗಿತ್ತು, ಹಾಗಾಗಿ ಯೋಜನೆ ಕೈಗೂಡಿರಲಿಲ್ಲ.

ನೂತನ ಫೇಮ್ ಯೋಜನೆಯ ನಿಯಮದಲ್ಲಿ ಮಾರ್ಪಾಡುಗಳಾಗಿದ್ದು, ನಗರ ಸಾರಿಗೆ ಮತ್ತು ಅಂತರ್ ನಗರ ಸಾರಿಗೆ ಸೇವೆ ಒದಗಿಸಲು ಸಬ್ಸಿಡಿ ಕೊಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಇದರಿಂದ ಕೆಎಸ್‍ಆರ್‍ಟಿಸಿಯ ಎಲೆಕ್ಟ್ರಿಕ್ ಬಸ್ ಕನಸು ನನಸಾಗುವ ಸಮಯ ಬಂದಿದೆ.

ರಾಜ್ಯ ರಸ್ತೆ ಸಾರಿಗೆ ಸಂಸ್ಥೆ 2018 ರಲ್ಲೇ 50 ಎಲೆಕ್ಟ್ರಿಕ್ ಬಸ್‍ಗಳಿಗೆ ಸಬ್ಸಿಡಿ ನೀಡುವಂತೆ À ಬೃಹತ್ ಕೈಗಾರಿಕಾ ಮಂತ್ರಾಲಯಕ್ಕೆ ಯೋಜನಾವರದಿ ಸಲ್ಲಿಸಲಾಗಿತ್ತು. ಈಗ ಅದೇ ಪ್ರಸ್ತಾವನೆ ಪರಿಶೀಲಿಸಿ ತಾತ್ವಿಕ ಒಪ್ಪಿಗೆ ನೀಡಿರುವುದರಿಂದ ಮತ್ತೊಮ್ಮೆ ಯೋಜನಾ ವರದಿ ಸಲ್ಲಿಕೆ ಇಲ್ಲ. ಗುತ್ತಿಗೆ ಆಧಾರದ ಯೋಜನೆಗೆ ಸಹಾಯಧನ ನೀಡಲು ಒಪ್ಪಿಗೆ ನೀಡಿರುವುದರಿಂದ ಗುತ್ತಿಗೆ ಮಾದರಿಯಲ್ಲೇ ವಿದ್ಯುತ್ ಚಾಲಿತ ಬಸ್ ಸೇವೆ ಒದಗಿಸಬೇಕಿದೆ ಮತ್ತು ಶೀಘ್ರದಲ್ಲೇ ಟೆಂಡರ್ ಕರೆಯುವ ಪ್ರಕ್ರಿಯೆ ಆರಂಭಿಸುವ ಸೂಚನೆಯನ್ನು ಸಾರಿಗೆ ಸಂಸ್ಥೆ ತಿಳಿಸಿದೆ.

ಸಾಮಾನ್ಯವಾಗಿ ಡೀಸೆಲ್ ಬಸ್ ಮತ್ತು ಎಲೆಕ್ಟ್ರಿಕ್ ಬಸ್ ಎರಡರಲ್ಲಿ ಎಲಕ್ಟ್ರಿಕ್ ಬಸ್ ದುಪ್ಪಟ್ಟು ವೆಚ್ಚವಾಗಲಿದೆ. ಈ ಬಸ್ ಪರಿಸರ ಪೂರಕವಾಗಿ ಸೇವೆ ನೀಡುವ ಸಲುವಾಗಿಯೇ ಇದನ್ನು ಹೆಚ್ಚು ಪ್ರೋತ್ಸಾಹಿಸುತ್ತಿರುವುದು. ಇನ್ನು ಯೋಜನೆಯನ್ನು ಗುತ್ತಿಗೆ ನೀಡುವುದರಿಂದ ನಿರ್ವಹಣೆ ಯೋಚನೆಯೂ ಕಡಿಮೆಯೇ. ಕೇಂದ್ರ ಸರ್ಕಾರ ಫೇಮ್ ಯೋಜನೆಯಲ್ಲಿ ಒಂದು ಬಸ್ ಕೊಳ್ಳಲು ಸುಮಾರು 1 ಕೋಟಿ ನೆರವು ನೀಡಲು ಮುಂದಾಗಿದೆ. ಇದಕ್ಕೆ ಇನ್ನು ಒಂದು ಅಗತ್ಯವಿದೆ ಅದುವೇ ವಿದ್ಯುತ್ ರಾಜ್ಯ ಸರ್ಕಾರ ಕಡಿಮೆ ದರದಲ್ಲಿ ವಿದ್ಯುತ್ ನೀಡಿದ್ದೇ ಆದರೆ ಹೊಗೆ ರಹಿತ, ಮಾಲಿನ್ಯ ರಹಿತ ಸಮಪರ್ಕ ಸೇವೆ ನಿಮ್ಮೂರಿಗೂ ಬರಲಿದೆ.

LEAVE A REPLY

Please enter your comment!
Please enter your name here