ಮೊದಲ ಬಾರಿಗೆ ಭಾರತದಲ್ಲಿ ‘ಹೂಸು’ ಬಿಡುವ ಸ್ಪರ್ಧೆ.! ಯಾವ ರಾಜ್ಯದಲ್ಲಿ ಗೊತ್ತಾ..?

0
598

ಏನಪ್ಪಾ ಇದು.? ಹೂಸು ಬಿಡುವುದು ಒಂದು ಸ್ಪರ್ಧೆಯ.! ಈ ರೀತಿಯು ಸ್ಪರ್ಧೆ ನಡೆಯಲಿದೆಯಾ ಎಂದೆಲ್ಲ ನೀವು ಹಲವು ಪ್ರಶ್ನೆಗಳು ನಿಮ್ಮಲ್ಲಿ ಖಂಡಿತವಾಗಿ ಮೂಡಿರುತ್ತದೆ. ಅದು ನಿಜವೂ ಹೌದು. ಮನುಷ್ಯನಿಗೆ ಬಹುತೇಕವಾಗಿ ಕಾಡುವ ಗ್ಯಾಸ್ಟ್ರಿಕ್ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಇಲ್ಲೊಂದು ತಂಡ ಹೂಸು ಬಿಡುವ ಸ್ಪರ್ಧೆಯನ್ನು ಆಯೋಜಿಸಿದೆ. ಕೇಳಲು ಒಂದು ರೀತಿ ಮುಜಗರವಾಗುತ್ತದೆ. ಆದರೆ ಆ ಮುಜಗರವನ್ನು ತೆಗೆಯಬೇಕೆಂಬ ಕಾರಣದಿಂದಲೇ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸಾಮಾನ್ಯವಾಗಿ ನಾವು ಹೊರಗಡೆ ಎಲ್ಲಾದರೂ ಇದ್ದ ಸಂಧರ್ಭಗಳಲ್ಲಿ ನಮ್ಮ ಪಕ್ಕ ಇರುವವರು ಯಾರಾದರೂ ಹೂಸು ಬಿಟ್ಟರೆ ಅವರಿಗೆ ಒಂದಿಷ್ಟು ಬೈಗುಳವನ್ನು ಮನಸ್ಸಿನಲ್ಲಿಯೇ ನೀಡಿರುತ್ತೇವೆ. ಹೂಸು ಬಿಟ್ಟವರಿಗೆ ಒಂದು ಪಟ್ಟವನ್ನು ಕಟ್ಟಿ ಅವರನ್ನು ಹೂಸು ರಾಜ ಎಂದೆಲ್ಲ ಹಂಗಿಸುತ್ತಾರೆ. ಭಾರತದಲ್ಲಿ ಇಂಥದ್ದೊಂದು ಸ್ಪರ್ಧೆ ಏರ್ಪಡಿಸುತ್ತಿರುವುದು ಯತಿನ್ ಮತ್ತು ಮುಲ್ ಸಾಂಘ್ವಿ ಎಂಬ ಯುವಕರು. ಗುಜರಾತ್ ರಾಜ್ಯದ ವಜ್ರ ನಗರಿ ಸೂರತ್‍ನಲ್ಲಿ ಈ ‘ಹೂಸು ವೀರ’ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದೇ ಸೆಪ್ಟೆಂಬರ್ ತಿಂಗಳ 22 ರಂದು ಈ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ವಿಜೇತರಾಗುವವರಿಗೆ ವಿಶೇಷ ಬಹುಮಾನ ಕೂಡ ಇದೆ.

ಈ ರೀತಿಯ ಸ್ಪರ್ಧೆ ಆಯೋಜಿಸಲು ಕಾರಣವೇನು ಎಂದು ಆಯೋಜಕರ ಬಳಿ ಕೇಳಿದರೆ, ಅವರು ಕೊಡುವ ಕಾರಣ ಇಂದು ಎಲ್ಲರಿಗೂ ಸಾಮಾನ್ಯವಾಗಿ ಗ್ಯಾಸ್ ಟ್ರಬಲ್ ಸಮಸ್ಯೆ ಇದೆ. ಜನರು ಪ್ರತಿಷ್ಟೆ, ಹೆಸರು, ಗೌರವ ಎಂದುಕೊಂಡು ಮುಕ್ತವಾಗಿ ಹೂಸು ಬಿಡುವುದಕ್ಕೆ ನಾಚಿಕೆ ಪಡುತ್ತಿದ್ದಾರೆ. ಹಾಗಾಗಿ ಈ ಹೂಸು ಬಿಡುವ ಸ್ಪರ್ಧೆಯಿಂದ ಒಂದು ಸುಲಭ ವೇದಿಕೆ ಕಲ್ಪಿಸುತ್ತಿದ್ದೇವೆ ಎಂದು ಮುಲ್ ಸಾಂಘ್ವಿ ತಿಳಿಸಿದ್ದಾರೆ. ಹೂಸು ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಟ್ರೋಫಿ ನೀಡಲಾಗುತ್ತದೆ ಜೊತೆಗೆ 10 ಸಾವಿರ ರೂಪಾಯಿಗೂ ಹೆಚ್ಚು ಹಣವನ್ನು ಬಹುಮಾನ ರೂಪದಲ್ಲಿ ನೀಡಲಾಗುತ್ತದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here