ಸಿದ್ಧಾರ್ಥ್ ರವರ ಸಾವಿಗೆ ರೋಚಕ ತಿರುವು, ಚಾಲಕನ ಹೇಳಿಕೆ ಮೇಲೆ ಅನುಮಾನ…

0
116

ರಾಜ್ಯದ ಹೆಸರಾಂತ ಉದ್ಯಮಿ ಕೆಫೆ ಕಾಫಿ ಡೇ ಮಾಲಿಕರಾದ ಸಿದ್ಧಾರ್ಥ್ ರವರ ನಿಗೂಢ ಸಾವು ಇದೀಗ ಹೊಸ ತಿರುವು ಪಡೆದುಕೊಂಡಿದೆ. ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದ್ದರು, ಅದೊಂದು ಕೊಲೆ ಎನ್ನುವ ಸಂಶಯವು ಪೊಲೀಸ್ ಇಲಾಖೆಯನ್ನು ಕಾಡುತ್ತಿದೆ .

ಪೊಲೀಸ್ ಇಲಾಖೆಯು ಎಲ್ಲಾ ಆಯಾಮಗಳಲ್ಲು ಸಾವಿಗೆ ಸಂಬಂಧಿಸಿದ ವಿವರಗಳನ್ನು ಕಲೆ ಹಾಕುತ್ತಿದ್ದು ಈ ಪ್ರಕರಣದ ಸಂಪೂರ್ಣ ಸಂಗತಿಯನ್ನು ತಿಳಿಯಲು ನಾಲ್ಕು ತಂಡಗಳನ್ನು ರಚಿಸಿ ತನಿಖೆ ಆರಂಭಿಸಿದ್ದಾರೆ. ಸಿದ್ಧಾರ್ಥ್ ರವರ ಜೊತೆಗಿದ್ದ ಚಾಲಕನ ಹೇಳಿಕೆಗಳೇ ಈಗ ಪೊಲೀಸ್ ಇಲಾಖೆಗೆ ಅನುಮಾನ ಹೆಚ್ಚಿಸಿದೆ.

ಏಕೆಂದರೆ ಚಾಲಕ ಹೇಳುವಂತೆ ಆತ ಸೋಮವಾರ ಸಂಜೆ 7 ಗಂಟೆ ಸುಮಾರಿಗೆ ನೇತ್ರಾವತಿ ಸೇತುವೆಯ ಬಳಿ ನಾವು ತಲುಪಿದ್ದಾಗಿ ತಿಳಿಸಿದ್ದಾನೆ. ನಂತರ ನನ್ನನ್ನು ಮುಂದೆ ಹೋಗುವಂತೆ ತಿಳಿಸಿ ಸಿದ್ಧಾರ್ಥ್ ರವರು ನೇತ್ರಾವತಿ ಸೇತುವೆಯ ಬಳಿ ಇಳಿದುಕೊಂಡರು ಎಂಬ ಹೇಳಿಕೆ ನೀಡಿದ್ದಾನೆ. ಈ ವಿಷಯವೇ ಪೊಲೀಸ್ ಸಿಬ್ಬಂದಿಗಳಿಗೆ ಹೆಚ್ಚು ಅನುಮಾನಕ್ಕೆ ಅವಕಾಶ ಮಾಡಿಕೊಟ್ಟಿರುವ ಸಂಗತಿ, ಏಕೆಂದರೆ ಬಂಟ್ವಾಳದ ಬ್ರಹ್ಮರಕೂಟ್ಲು ಟೋಲ್ ಗೇಟ್‍ ಅನ್ನು ಸಿದ್ಧಾರ್ಥ ರವರ ಚಲಿಸುತ್ತಿದ್ದ ಕಾರು ಅಂದು ಸಂಜೆ 5.28ಕ್ಕೆ ಹಾದು ಹೋಗಿದ್ದು , ಅದು ಸಿಸಿ ಟಿವಿ ಕ್ಯಾಮರಾ ಫೊಟೇಜ್ ನಲ್ಲಿ ಲಭ್ಯವಾಗಿದೆ .
ಟೋಲ್ ಗೇಟ್‍ನಿಂದ ನೇತ್ರಾವತಿ ಸೇತುವೆಗೆ ಇರುವ ಅಂತರ 25 ಕಿಲೋಮೀಟರ್ , ಆ ಮಾರ್ಗವನ್ನು ಕ್ರಮಿಸಲು ಸುಮಾರು 35- 40 ನಿಮಿಷಗಳು ಬೇಕಾಗಬಹುದು, ಆದರೆ ಸಿದ್ಧಾರ್ಥ ರವರು ಚಲಿಸುತ್ತಿದ್ದ ವಾಹನವು ಸರಿಸುಮಾರು ಒಂದೂವರೆ ಗಂಟೆಗಳ ಕಾಲ ತಗೆದುಕೊಂಡಿದೆ, 35-40 ನಿಮಿಷದಲ್ಲಿ ಸಂಚರಿಸಲು ಸಾಧ್ಯವಿರುವ ಈ ಮಾರ್ಗವನ್ನು ಕ್ರಮಿಸಲು ಇವರು ಏಕೆ ಒಂದು ಗಂಟೆ ಮುವತ್ತು ನಿಮಿಷಗಳ ಸಮಯವನ್ನು ತೆಗೆದುಕೊಂಡಿದ್ದಾರೆ ಎನ್ನುವುದೇ ಪೊಲೀಸ್ ಇಲಾಖೆಗೆ ಹೆಚ್ಚು ಅನುಮಾನ ಮುಡುವಂತೆ ಮಾಡಿದೆ.

LEAVE A REPLY

Please enter your comment!
Please enter your name here