ಮಾನವೀಯತೆಯ ಜಾಲ ಕಳಚಿದೆ ಸಿಕ್ಕಿದೆ ಸಾಕ್ಷಿ..!

0
907

ಸಾಮಾಜಿಕ ಜಾಲತಾಣಗಳು ಸಮಾಜದಲ್ಲಿ ಅಶಾಂತಿಗೆ ಕಾರಣವಾಗಿದೆ, ಇವುಗಳ ಮೇಲೆ ಹಿಡಿತ ಇರಬೇಕು ಎಂದು ಹೇಳುವವರು ಹೆಚ್ಚಾಗಿದ್ದಾರೆ. ಸಾಮಾಜಿಕ ಜಾಲತಾಣಗಳು ಬಹುಬೇಗ ಮಾಹಿತಿಯನ್ನು ಹಬ್ಬಿಸುತ್ತಿವೆ, ಇದು ಅನೇಕ ಕತೆಗಳನ್ನು ತೆರೆದಿಟ್ಟಿದೆ. ಸಾಮಾಜಿಕ ಜಾಲತಾಣಗಳು ಜನರನ್ನು ಎಚ್ಚರಿಸುವ ಮತ್ತು ಸದಾ ಒಂದಿಲ್ಲೋಂದು ವಿಚಾರದಲ್ಲಿ ಚರ್ಚೆಗೆ ಒಳಪಡಿಸುತ್ತದೆ.

ಈಗಲೂ ಒಂದು ಜಾಗತಿಕ ದಾರುಣ ಕತೆಯನ್ನು ಸಾಮಾಜಿಕ ಜಾಲತಾಣ ಬಿಚ್ಚಿಟ್ಟಿದೆ. ಇದು ಅಂತಿಂತಹ ಸುದ್ದಿಯಲ್ಲ, 70 ವರ್ಷಗಳ ಆ ಜೀವಿ ಅನುಭವಿಸಿದ ನರಕ ಜೀವನ ಮತ್ತು ಅದರ ಬಗೆಗಿನ ಅಸಹನೆ ಮಾನವೀಯತೆಯ ಜೀವಂತಿಕೆ ಪ್ರಶ್ನಿಸಿದೆ.
ದ್ವೀಪ ರಾಷ್ಟ್ರ ಶ್ರೀಲಂಕಾದ ಕ್ಯಾಂಡಿ ಎಂಬಲ್ಲಿ ನಡೆಯುವ ಬೌದ್ಧರ ಅದ್ಧೂರಿ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ್ದ ಈ ಜೀವಿ ಈಗ ವಿಶ್ವದ ಕಣ್ಣಂಚಲ್ಲಿ ನೀರು ತರಿಸಿದೆ. 70 ವರ್ಷದ ಹೆಣ್ಣಾನೆಯೊಂದು ತನ್ನ ಸ್ವರೂಪದ ಬಗ್ಗೆ ಜಗತ್ತಿಗೆ ಆನೆಯ ವಿಭಿನ್ನ ಪರಿಚಯ ಮಾಡಿಕೊಟ್ಟಿದೆ.

ಟಿಕರಿ ಎಂಬ ಹೆಸರಿನ 70 ವರ್ಷದ ಹೆಣ್ಣಾನೆ ದ್ವೀಪ ರಾಷ್ಟ್ರದ ಕ್ಯಾಂಡಿಯಲ್ಲಿನ ಪ್ರತೀ ವರ್ಷ ಜುಲೈ ತಿಂಗಳಲ್ಲಿ ನಡೆಯುವ ಹತ್ತು ದಿವಸಗಲ ಉತ್ಸವದಲ್ಲಿ ಪಾಲ್ಗೊಳ್ಳುತ್ತಿತ್ತು. ಕಿಲೋಮೀಟರ್ ಗಟ್ಟಲೇ ನಡೆದು ನಡೆದು ಸುಸ್ತಾಗಿತ್ತು. ಹಿರಿಯ ಆನೆ ಸಂಜೆಯಿಮದ ರಾತ್ರಿವರೆಗೂ ದುಡಿದ ಪರಿಗೆ ಬೃಹತ್ ಜೀವಿ ಆನೆಯೂ ಈ ರೀತೆ ಸ್ಥತಿಗೆ ತಲುಪಬಹುದು ಎಂಬುದಕ್ಕೆ ಸಾಕ್ಷಿಯಾಗಿದೆ. ಈ ಟಿಕರಿ ಅಸಲಿಯ ಸ್ವರೂಪ ಇಲ್ಲಿವರೆಗೂ ಕಂಡಿರಲಿಲ್ಲ ಏಕೆಂದರೆ ಅಲ್ಲಿನ ಉತ್ಸವ ಆಯೋಜನಕರು ಮತ್ತು ಆನೆಯ ಪಾಲಕರು ಅದಕ್ಕೆ ಬಣ್ಣ ಬಣ್ಣದ ಅಲಂಕಾರಿಕ ಬಟ್ಟೆ ಹಾಕುತ್ತಿದ್ದರು.

ಏಳು ದಶಕಗಳಿಂದ ಈ ಆನೆ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಭಾರೀ ಪ್ರಮಾಣದಲ್ಲಿ ಬೆಳಕು ಮತ್ತು ಶಬ್ಧವನ್ನು ಅಸಹವಾಗಿ ಸಹಿಸಿಕೊಂಡಿತ್ತು. ಆ ಮನುಷ್ಯರ ಕ್ರೌರ್ಯಕ್ಕೆ ಬೇಸತ್ತು ತಿವ್ರ ಅನಾರೋಗ್ಯಕ್ಕೀಡಾಗಿತ್ತು. ಟಿಕರಿ ಆನೆ ನಡೆಯಲಾಗದೆ, ಕಣ್ಣಂಚಲ್ಲಿ ಬೀಳುತ್ತಿದ್ದ ಕಣ್ಣೀರ ಹನಿಗಳು ಯಾರಿಗೂ ಕಂಡಿಲ್ಲ ಎಂದು ಜಾಲತಾಣಿಗರು ತಿಳಿಸಿದ್ದಾರೆ.
ಭೂಮಿ ಮೇಲಿನ ಬೃಹತ್ ಜೀವಿ ಗಾತ್ರದಲ್ಲಿ ಭಾರೀಯಾದ್ರೂ ಅದರ ಅಸಹಾಯಕತೆಯನ್ನು ಮಾನವ ಬಳಸಿಕೊಂಡ ಪರಿಗೆ ವಿಶ್ವವೇ ಈಗ ಕಂಗಾಲಾಗಿದೆ. ಆನೆಗಳ ರಕ್ಷಣೆಗೊಸ್ಕರ ಇರುವ ಆನೆ ರಕ್ಷಣಾ ಪ್ರತಿಷ್ಠಾನ ಈಗ ಆನೆಯ ದುಸ್ಥಿತಿ ಬಗ್ಗೆ ವರದಿ ನೀಡಿದ್ದು, ಜಾಲತಾಣದಲ್ಲಿ ಸಂಚಲನ ಹುಟ್ಟಿಸಿದೆ. ಈಗ ಎಚ್ಚತ್ತಿರುವ ಶ್ರೀಲಂಕಾ ಸಚಿವಾಲಯ ಮತ್ತು ಮಂತ್ರಿಗಳು ತನಿಖೆಗೆ ಸೂಚಿಸಿದ್ದಾರೆ.

ಈ ತನಿಖೆಗಳು, ಮೆರವಣಿಗೆ ಉತ್ಸವಗಳು ಎಲ್ಲವೂ ವೈಭವದ ಸಂಕೇತವಾಗಿದೆ, ತೋರ್ಪಡಿಕೆ ಮತ್ತು ಪ್ರಕೃತಿಯ ಮೇಲೆ ಸಾಧಿಸಿದ ಪ್ರಕೃತಿ ವಿರೋಧಿ ಸಂಕೇತವೂ ಆಗಿದೆ

LEAVE A REPLY

Please enter your comment!
Please enter your name here