ಬೆಂಗಳೂರಿನಲ್ಲಿ ನೆಲೆಸಿದ್ದರೂ ಉಪ್ಪಾರ್ ಪೇಟೆ ಎಲ್ಲಿ ಬರುತ್ತದೆ ಎಂಬುದು ಗೊತ್ತಿಲ್ಲ : ಸಂಜನಾ ಗಲ್ರಾನಿ !

0
302

ನಿರ್ಮಾಪಕಿ ವಂದನಾ ಅವರ ಜೊತೆ ಕೆಲವೇ ಕೆಲವು ದಿನಗಳ ಹಿಂದೆ ದೊಡ್ಡ ಕಿರಿಕ್ ಮಾಡಿಕೊಂಡು ರಾಜ್ಯಾದ್ಯಂತ ದೊಡ್ಡ ಸುದ್ಧಿಯಲ್ಲಿದ್ದ ನಟಿ ಸಂಜನಾ ನೆನ್ನೆ ಮತ್ತೊಮ್ಮೆ ಸೌಂಡ್ ಮಾಡಿದ್ದು ಟ್ರಾಫಿಕ್ ರೂಲ್ಸ್‌ ಬ್ರೆಕ್ ಮಾಡಿದ್ದಾರೆ..

 

ಹೌದು ಟ್ರಾಫಿಕ್ ರೂಲ್ಸ್‌ ಗಳನ್ನು ಉಲ್ಲೇಖಿಸಿ , ಓಪನ್ ಕಾರು ಚಾಲನೆ ವೇಳೆ ನಡುರಸ್ತೆಯಲ್ಲಿ ಮೊಬೈಲ್ ಬಳಸಿ ಸೆಲ್ಫಿ ವಿಡಿಯೋ ಮಾಡಿದ್ದ ನಟಿ ಸಂಜನಾ ಗಲ್ರಾನಿ ವಿರುದ್ಧ ನೆನ್ನೆ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಈ ವಿಚಾರವನ್ನು ತಿಳಿದ ಸಂಜನಾ ಅವರು ವಿಡಿಯೋ ಮೂಲಕ ಸ್ಪಷ್ಟನೆ ನೀಡಿದ್ದಾರೆ. ”ದೂರು ದಾಖಲಾಗಿರುವ ಬಗ್ಗೆ ನನಗೆ ಯಾವುದೇ ನೋಟೀಸ್ ಬಂದಿಲ್ಲ. ಹುಡುಗಾಟದಲ್ಲಿ ಆ ವಿಡಿಯೋ ಮಾಡಿದ್ದೆ. ಕಾನೂನು ಉಲ್ಲಂಘನೆ ಮಾಡುವ ಉದ್ದೇಶ ನನಗೆ ಇರಲಿಲ್ಲ” ಎಂದು ವಿಡಿಯೋದಲ್ಲಿ ತಿಳಿಸಿದ್ದಾರೆ.

 

ಇನ್ನೂ ಬೆಂಗಳೂರಿನಲ್ಲೇ ನೆಲೆಸಿರುವ ಸಂಜನಾ, ವಿಡಿಯೋದಲ್ಲಿ 12 ವರ್ಷಗಳಿಂದ ವಾಹನ ಚಾಲಾನೆ ಮಾಡುತ್ತಿರುವೆ ಎಂದಿದ್ದಾರೆ, ಆದರೆ ಆಕೆಗೆ ಉಪ್ಪಾರ್ ಪೇಟೆ ಎಲ್ಲಿದೆ ಎಂಬುದೇ ಗೊತ್ತಿಲ್ಲವಂತೆ! ವಿಡಿಯೋದಲ್ಲಿ ಉಪ್ಪಾರ್ ಪೇಟೆ ಎನ್ನಲು ಹೋಗಿ ಉಪನಗರ್ ಎಂದಿದ್ದಾರೆ. ಅಲ್ಲದೇ
ಜೊತೆಗೆ ”ನನ್ನ ಬಗ್ಗೆ ಚಾನೆಲ್ ಗಳಲ್ಲಿ ರೂಮರ್ಸ್ ಸ್ಪ್ರೆಡ್ ಮಾಡಬೇಡಿ. ವಿವಾದಗಳಿಂದ ನನ್ನನ್ನು ದೂರ ಇಡಿ. ಪ್ಲೀಸ್ ನನ್ನನ್ನ ಕಾಪಾಡಿ” ಎಂದು ನಟಿ ಸಂಜನಾ ವಿಡಿಯೋದಲ್ಲಿ ಬೇಡಿಕೊಂಡಿದ್ದಾರೆ.

ನೆಟ್ಟಿಗರ ಕೆಂಗಣ್ಣಿಗೆ ಸಂಜನಾ!

ವಿಡಿಯೋದಲ್ಲಿ ಮಾತನಾಡಿರುವ ಸಂಜನಾ,
”ಉಪ್ಪಾನಗರ್ ಪೊಲೀಸ್ ಸ್ಟೇಷನ್ ನಿಂದ ನನಗೆ ನೋಟೀಸ್ ಬಂದಿದೆ ಅಂತ ನ್ಯೂಸ್ ಬಂದಿದೆ. ಈ ಸುದ್ದಿ ಎಲ್ಲಿಂದ ಬಂತು ಅನ್ನೋದು ನನಗೆ ಗೊತ್ತಿಲ್ಲ. ಉಪ್ಪಾನಗರ್ ಎಲ್ಲಿದೆ ಅನ್ನೋದು ಕೂಡ ಗೊತ್ತಿಲ್ಲ. ಉಪ್ಪಾನಗರ್ ಎಲ್ಲಿದೆ ಅಂತ ಕೇಳಿದ್ರೆ ನಾಲ್ಕು ಜನ ಮೆಜೆಸ್ಟಿಕ್ ನಲ್ಲಿದೆ ಅಂತಾರೆ” ಎಂದು ಹೇಳಿದ್ದಾರೆ

ಹೊಸ ಗಾಡಿ ಓಕೆ, ಟ್ರಾಫಿಕ್ ರೂಲ್ಸ್ ಮರ್ತಿದ್ ಯಾಕೆ?

ಹೀಗೆ ವಿಡಿಯೋದಲ್ಲಿ ತನ್ನ ಅಳಲನ್ನು ತೋಡಿಕೊಂಡಿರುನ ನಟಿ ಸಂಜನಾ
”ಹೊಸ ಗಾಡಿ ತೆಗೆದುಕೊಂಡಿದ್ದೇನೆ. ಮನಸ್ಸು ತುಂಬಾ ಖುಷಿ ಖುಷಿ ಆಗಿತ್ತು. ಡೆಲಿವರಿ ಬಂತು. ನನ್ನ ಮನೆ ಹತ್ತಿರ ಇರುವ ಸರ್ವಿಸ್ ರೋಡ್ ನಲ್ಲಿ ಸಿಗ್ನಲ್ ಬಿದ್ದಿತ್ತು. ಎರಡು ನಿಮಿಷ ಸಿಗ್ನಲ್ ಇತ್ತು. 30-40 ಸೆಕೆಂಡ್ಸ್ ನಲ್ಲಿ ಒಂದು ಸಣ್ಣ ವಿಡಿಯೋ ಮಾಡಿದೆ. 12 ವರ್ಷದಿಂದ ಗಾಡಿ ಓಡಿಸುತ್ತಿದ್ದೇನೆ. ಒಂದು ಇರುವೆ ಮೇಲೂ ದೇವರ ದಯೆದಿಂದ ಗಾಡಿ ಹತ್ತಿಸಿಲ್ಲ. ಗಾಡಿ ಎದುರುಗಡೆ 10 ಅಡಿ ಜಾಗ ಇದೆ. ಹಿಂದೆ 5-8 ಅಡಿ ಜಾಗ ಇದೆ. ಆ ವಿಡಿಯೋದಲ್ಲಿ ಕಾಣಿಸುತ್ತೆ” ಎಂದು ತಮಗೆ ಅನಿಸಿದ್ದನ್ನು ಹೇಳಿದ್ದಾರೆ..

 

ಸದಾ ಸಿನಿಮಾ ವಿಚಾರಗಳಿಗಿಂತ ಬೇರೆ ವಿಚಾರಗಳಲ್ಲೇ ಸುದ್ದಿಯಲ್ಲಿರುವ ಸಂಜನಾ ಅವರು ಜೀವನದಲ್ಲಿ ನೊಂದಿದ್ದಾರೆ ಎಂದೇ ಹೇಳಲಾಗುತ್ತಿದೆ.. ”ಹುಡುಗಾಟದಲ್ಲಿ ನಾನು ಆ ವಿಡಿಯೋ ಮಾಡಿದೆ. ಆದ್ರೆ, ಯಾರಿಗೂ ಹಾನಿ ಮಾಡಿಲ್ಲ. ಹಾನಿ ಮಾಡುವ ಉದ್ದೇಶ ನನಗಿಲ್ಲ. ದಯವಿಟ್ಟು ನನ್ನನ್ನ ವಿವಾದಗಳಿಂದ ದೂರ ಇಡಿ. ನನ್ನ ಕುರಿತಾದ ರೂಮರ್ಸ್ ನ ಯಾವುದೇ ಚಾನೆಲ್ ಗೆ ಸ್ಪ್ರೆಡ್ ಮಾಡಬೇಡಿ ಅಂತ ಬೇಡಿಕೊಳ್ಳುತ್ತಿದ್ದೇನೆ” ಎಂದು ಎಲ್ಲರಲ್ಲೂ ಕೈ ಮುಗಿದು ಯಾಚಿಸಿದ್ದಾರೆ ..

 

ಇನ್ನು ೧೫ ದಿನಗಳ ಹಿಂದೆ ನಿರ್ಮಾಪಕಿ ಜೊತೆ ಆದ ವಿವಾಧದ ಬಗೆಗೂ ಯಾವುದೇ ಲೀಗಲ್ ನೋಟಿಸ್ ಬಂದಿಲ್ಲ, ಅದೇ ರೀತಿ ಈ ಘಟನೆ ಬಗ್ಗೆಯೂ ನನಗೆ ಲೀಗಲ್ ನೋಟೀಸ್ ಬಂದಿಲ್ಲ. ಚೆನ್ನಾಗಿದ್ದೀರಾ ಅಂತ ಕೇಳಿದರೂ, ಅದೂ ವಿವಾದ ಆಗುತ್ತಿದೆ. ನನಗೆ ಯಾಕೆ ಈ ತರಹ ಟಾರ್ಗೆಟ್ ಮಾಡುತ್ತಿದ್ದೀರಾ.? ನಾನು ಏನು ತಪ್ಪು ಮಾಡಿದ್ದೇನೆ.? ಏನು ಹಾನಿ ಮಾಡಿದ್ದೇನೆ.?” – ಎಂದು ತಮ್ಮ ಅಸಮಾಧಾನವಮನ್ನು ಸಂಜನಾ ಗಲ್ರಾನಿ, ವ್ಯಕ್ತಪಡಿಸಿದ್ದಾರೆ

 

”ಬರೀ ಕಷ್ಟ ಪಟ್ಟು ಜಿಮ್ ಮಾಡೋದು, ಸಿನಿಮಾ ಮಾಡೋದು, ಆರಾಮಾಗಿ ನನ್ನ ಪಾಡಿಗೆ ನಾನು ಇರೋದು. ಪ್ಲೀಸ್ ನನ್ನನ್ನ ಇದರಿಂದ ಕಾಪಾಡಿ. ಆ ಚಿಕ್ಕ ವಿಡಿಯೋ ಮಾಡಿದ್ದು ಹುಡುಗಾಟದಲ್ಲಿ. ಶೋ ಆಫ್ ಅಥವಾ ತೋರಿಸಿಕೊಳ್ಳಲು, ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳಲು ಅಲ್ಲ. ಪೊಲೀಸರ ಮೇಲೆ ನನಗೆ ಗೌರವ ಇದೆ. ಪ್ರತಿಯೊಬ್ಬರಿಗೂ ಕಾನೂನು ಒಂದೇ. ಕಾನೂನು ವಿರುದ್ಧವಾಗಿ ಹೋಗುವುದು ನನ್ನ ಉದ್ದೇಶ ಆಗಿರಲಿಲ್ಲ” ಎಂದು ವಿಡಿಯೋ ಮೂಲಕ ನಟಿ ಸಂಜನಾ ತಿಳಿಸಿದ್ದಾರೆ…

LEAVE A REPLY

Please enter your comment!
Please enter your name here