ಆಸ್ಟ್ರೇಲಿಯಾ ವಿರುದ್ಧ ಹೀನಾಯವಾಗಿ ಮುಖಭಂಗ ಅನುಭವಿಸಿದ ಹಾಲಿ ಚಾಂಪಿಯನ್ ಇಂಗ್ಲೆಂಡ್ !

0
729

ಕ್ರಿಕೆಟ್ ಜನಕರಾದ ಆಂಗ್ಲರು 2019 ರ ಐಸಿಸಿ ವಿಶ್ವಕಪ್ ಟ್ರೋಫಿ ಜಯಿಸುವ ಮೂಲಕ ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದಿರುವ ಸಂಭ್ರಮವನ್ನ ಆಚರಿಸಿದ್ದರು ! ಈ ಟೂರ್ನಿ ಇಂಗ್ಲೆಂಡ್‌ ಮತ್ತು ವೇಲ್ಸ್ ನಲ್ಲಿ ನಡೆದಿತ್ತು..ಇದೇ ವಿಶ್ವ ಚಾಂಪಿಯನ್ ಇಂಗ್ಲೆಂಡ್ ತಂಡ ಟೆಸ್ಟ್ ನಲ್ಲಿ ಕೆಟ್ಟ ದಾಖಲೆಯೊಂದಕ್ಕೆ ಕಾರಣವಾಗಿದೆ ..ಲಾರ್ಡ್ಸ್ ನ ಹೆಡಿಂಗ್ ಲೀ ಇಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಆಸ್ಟ್ರೇಲಿಯಾ ನಡುವಿನ ಮೂರನೇ ಆಸೀಸ್ ಟೆಸ್ವ್, ಮೊದಲನೇ ಇನ್ನಿಂಗ್ಸ್ ನಲ್ಲಿ ಜಾಯ್ ರೂಟ್ ನಾಯಕತ್ವದ ಇಂಗ್ಲೆಂಡ್ ತಂಡ ಕೇವಲ 67 ರನ್ ಗಳಿಗೆ ಆಲೌಟ್ ಆಗಿದೆ ..ಇದರೊಂದಿಗೆ ಬೇಡದ ದಾಖಲೆಗೆ ಕಾರಣವಾಗಿದೆ ..ಸುಮಾರು ಎಪ್ಪತ್ತು ವರ್ಷಗಳಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ನಲ್ಲಿ ಅಧಿಕ ಕಡಿಮೆ ರನ್ ಎಂದರೆ ಈ 67 ರನ್ .. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ ನಲ್ಲಿ 52.1 ಒವರ್ ಗಳಲ್ಲಿ 171 ರನ್ ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಡೇವಿಡ್‌ ವಾರ್ನರ್ 61 ಮತ್ತು ಮಾರ್ನಸ್ 74 ಸೇರಿಸಿ ತಂಡದ ರನ್ ಕುಸಿತವನ್ನು ನನ್ನ ಪಾರು ಮಾಡಿದ್ದರು .. ಆದರೆ ಇಂಗ್ಲೆಂಡ್ ಪರ ವೇಗಿ ಆರ್ಚರ್ 6 ವಿಕೆಟ್ ಅನ್ನು ಕಬಳಿಸಿದರು..

ಆದರೆ ನಿಧಾನಗತಿಯ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತನ್ನೆಲ್ಲ ವಿಕೆಟ್ ಕಳೆದುಕೊಂಡು ಕೇವಲ 67 ರನ್ ಗಳಿಸುವಷ್ಟರಲ್ಲಿ ಮಾತ್ರ ಯಶಸ್ವಿಯಾಯಿತು. ಇನ್ನೂ ಈ ಕಳಪೆ ಪ್ರದರ್ಶನಕ್ಕೆ ವಿಶ್ವದಾದ್ಯಂತ ಭಾರಿ ಟ್ರಾಲ್ ಗಳು ನಡೆಯುತ್ತಿವೆ

LEAVE A REPLY

Please enter your comment!
Please enter your name here