ಭಾವನೆಗಳ ಅರ್ಥಮಾಡಿಸಿ ಹೋದ ಆನೆ..!

0
319

ಈ ಭೂಮಂಡಲ ಲಕ್ಷಾಂತರ ಜೀವರಾಶಿಗಳ ನಿವಾಸ. ಇಲ್ಲಿ ಮನುಷ್ಯರು ತಾವು ಮಾತ್ರ ಭಾವನಾ ಜೀವಿಗಳು ಅಂದುಕೊಳ್ಳುತ್ತಾರೆ. ಆದರೆ ಪ್ರಕೃತಿ ಪ್ರತಿಯೊಂದು ಜೀವಿಗೂ ಭಾವನೆಗಳನ್ನು ತುಂಬಿದೆ. ಮನುಷ್ಯ ತನ್ನ ಕೃತ್ಯಗಳಿಂದ ಜೀವಿಗಳ ಭಾವನೆಗಳನ್ನು ನಿರ್ಲಕ್ಷಸುತ್ತಾನೆ ಅದಕ್ಕೆ ಸೂಕ್ತ ಬೆಲೆಯನ್ನು ತೆರುತ್ತಾನೆ. ವನ್ಯಜೀವಿಗಳ ಭಾವನೆ ಕೆಲವೊಮ್ಮೆ ಮನುಷ್ಯನಿಗೆ ಪಾಠ ಹೇಳುತ್ತದೆ, ಕೇಳದಿದ್ದಾಗ ಪೆಟ್ಟುಕೊಡುತ್ತದೆ.

ಇನ್ನು ಈ ಭೂಮಿಯ ಮೇಲೆ ವಾಸವಿರುವ ಬೃಹತ್ ಜೀವಿ ಆನೆ. ಆನೆಗಳು ಸೌಮ್ಯ ಸ್ವಭಾವದವು, ಮನುಷ್ಯನಿಗಿಂತಲೂ ಚತುರ ಜೀವಿಗಳು. ಕೆಲವೊಮ್ಮೆ ಆನೆಗಳು ತಮ್ಮ ಭಾವನೆಯನ್ನು ಮನಮುಟ್ಟುವಂತೆ ತೋರ್ಪಡಿಸುತ್ತವೆ. ಆನೆಗಳು ತಮ್ಮ ಕುಟುಂಬದ ಸದಸ್ಯರು ಸತ್ತಾಗ ಭಾವುಕವಾಗುತ್ತದೆ, ಇದು ಮನುಷ್ಯನ ಕೈವಾಡದಿಂದಾಗಿದ್ದರೆ ಸಿಟ್ಟಿಗೇಳುತ್ತವೆ.

ಹೌದು, ಇತ್ತೀಚೆಗೆ ತಮಿಳುನಾಡಿನ ಚಿತ್ತೂರು ಜಿಲ್ಲೆಯಲ್ಲಿನ ಕೌಂಡಿನಿಯಾ ಅಭಯಾರಣ್ಯದ ಸಮೀಪದ ಗೊಬ್ಬಿಲ್ಲಾ ಕೋಟೂರ್ ಎಂಬ ಗ್ರಾಮದಲ್ಲಿ ಆನೆಯೊಂದು ಅರಣ್ಯಕ್ಕೆ ಹೋಗುವ ಮಾರ್ಗದಲ್ಲಿ ದಾರಿತಪ್ಪಿದೆ. ಇನ್ನು ಗ್ರಾಮದಲ್ಲಿ ಅಳವಡಿಸಿದ್ದ ವಿದ್ಯುತ್ ತಂತಿ ತಗುಲಿ ಮರಿಯಾನೆಯೊಂದು ಮೃತಪಟ್ಟಿತ್ತು. ಈ ಘಟನೆಯ ನೋವು ತಡೆಯಲಾರದ ತಾಯಿ ಆನೆ ನೆರೆಯ ಕೃಷಿ ಪ್ರದೇಶದಲ್ಲಿ ಅಳವಡಿಸಿದ್ದ ವಿದ್ಯುತ್ ಕಂಬಗಳನ್ನು ಕಿತ್ತುಹಾಕಿದೆ. ಹೀಗೆ ತನ್ನ ಮರಿಯ ಸಾವಿಗೆ ಕಾರಣವಾದರ ಮೇಲೆ ಸಿಟ್ಟು ಪ್ರದರ್ಶಿಸಿ ತಮ್ಮ ಸಹಜ ಬದುಕಿಗೆ ತೊಂದರೆ ಕೊಟ್ಟವರ ವಿರುದ್ಧ ಪ್ರತಿರೋದ ತೋರಿಸಿದೆ.

ವಿದ್ಯುತ್ ತಂತಿ ತುಳಿದು ಸತ್ತಿದ್ದ ಮರಿಯಾನೆಯನ್ನು ತಾಯಾನೆ ಎಲ್ಲಾ ಶಕ್ತಿ ನೀಡಿ ನೆಲದಿಂದ ಮೇಲಕ್ಕೆತ್ತಲು ಹರಸಾಹಸಪಟ್ಟಿತ್ತು. ಅಲ್ಲಿಗೆ ಜನಸಂದಣಿ ಹೆಚ್ಚಾದಂತೆ ತಾಯಾನೆ ವಿಧಿಯಿಲ್ಲದೆ ಮರಿಯಾನೆಯನ್ನು ಬಿಟ್ಟು ಕಾಡಿನತ್ತ ಹೆಜ್ಜೆ ಹಾಕಿತು. ಆದರೆ ಈ ಆನೆ ತನ್ನ ಮರಿಯನ್ನು ಹುಡುಕಿ ಮತ್ತೆ ಗ್ರಾಮಕ್ಕೆ ಬರಬಹುದು ಎಂದು ಅರಣ್ಯಾಧಿಕಾರಿಗಳು ಹೇಳಿದ್ದರು. ಅವರ ಮಾತಿನಂತೆ ತಾಯಾನೆ ಮರುದಿನ ಗ್ರಾಮಕ್ಕೆ ಬಂದಿದೆ, ಮರಿಯನ್ನು ಕಾಣದಿದ್ದಾಗ ಟ್ರಾನ್ಸ್‍ಫಾರ್ಮರ್ ಕಂಬವನ್ನು ಕಿತ್ತು ಬಿಸಾಡಿದೆ. ಹಿಂದಿನ ದಿನವೇ ಅರಣ್ಯಾಧಿಕಾರಿಗಳು ಸತ್ತ ಮರಿಯಾನೆಯನ್ನು ಹೂತುಹಾಕಿದ್ದರು. ಬೃಹತ್ ಜೀವಿಯ ಕರುಳಿನ ಸಂಬಂಧ ಮತ್ತು ಅದರ ಮಮಕಾರ ಕಂಡು ಅಲ್ಲಿದ್ದ ಜನರು ಕಣ್ಣೀರು ಹಾಕಿದ್ರು. ಮಾತನಾಡದ ಆನೆಯು ಜನರಿಗೆ ತನ್ನ ಭಾವನೆಯನ್ನು ಸ್ವಬಾವದ ಮೂಲಕವೇ ಜನರಿಗೆ ಅರ್ಥಮಾಡಿಸಿತ್ತು.

LEAVE A REPLY

Please enter your comment!
Please enter your name here