ಉಪಚುನಾವಣೆಗೆ ಮುಹೂರ್ತ ಫಿಕ್ಸ್…! ದಿನಾಂಕ ಘೋಷಿಸಿದ ಚುನಾವಣಾ ಆಯೋಗ

0
487

ಅನರ್ಹ ಶಾಸಕ ವಿಚಾರ ಹೈಕೋರ್ಟ್ ನಲ್ಲಿರುವಾಗಲೇ ಕೇಂದ್ರ ಚುನಾವಣಾ ಆಯೋಗ ರಾಜ್ಯದ ೧೫ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಅಖಾಡ ಸಿದ್ದಗೊಳಿಸಿದೆ. ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಅಕ್ಟೋಬರ್ 21ರಂದು ಅನರ್ಹ ಶಾಸಕರ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲಾಗುವುದು ಎಂದು ಘೋಷಿಸಿದೆ.

ಇನ್ನು ಇಂದು ನವದೆಹಲಿಯಲ್ಲಿ ನಡೆದ ಮಾದ್ಯಮಗೋಷ್ಠಿಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಈ ಮಾಹಿತಿಯನ್ನು ತಿಳಿಸಿದ್ದು, ಸೆ.23ರಂದು ಉಪಚುನಾವಣೆಗೆ ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಕೆಗೆ ಸೆ.30 ಕೊನೇ ದಿನ. ನಾಮಪತ್ರ ಪರಿಶೀಲನೆ ಅಕ್ಟೋಬರ್​ 1ಕ್ಕೆ ನಡೆಯಲಿದೆ. ನಾಮಪತ್ರ ವಾಪಸು ಪಡೆಯಲು ಅಕ್ಟೋಬರ್​ 3 ಕೊನೇ ದಿನವಾಗಿದೆ. ಅಕ್ಟೋಬರ್​ 21ಕ್ಕೆ ಮತದಾನ ನಡೆಯಲಿದ್ದು, ಅಕ್ಟೋಬರ್​ 23ಕ್ಕೆ ಫಲಿತಾಂಶ ಘೋಷಿಸಲಾಗುವುದು ಎಂದು ತಿಳಿಸಿದ್ದಾರೆ.

ಉಪ ಚುನಾವಣೆ ನಡೆಯಲಿರುವ ಕ್ಷೇತ್ರಗಳು
ಗೋಕಾಕ್, ಅಥಣಿ, ಕಾಗವಾಡ, ಹಿರೆಕೆರೂರು, ಯಲ್ಲಾಪುರ, ಯಶವಂತಪುರ್,ವಿಜಯನಗರ, ಶಿವಾಜಿನಗರ, ಹೊಸಕೋಟೆ, ಹುಣಸೂರು, ಕೆಆರ್ ಪೇಟೆ, ಮಹಾಲಕ್ಷ್ಮಿ ಲೇಔಟ್, ಕೆಆರ್ ಪುರ, ರಾಣೇಬೆನ್ನೂರು, ಚಿಕ್ಕಬಳ್ಳಾಪುರದಲ್ಲಿ ಉಪಚುನಾವಣೆ ನಡೆದರೆ ಇನ್ನು ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ರಾಯಚೂರಿನ ಮಸ್ಕಿ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯುದಿಲ್ಲ ಎನ್ನಲಾಗಿದೆ.

ಇನ್ನು ಕರ್ನಾಟಕದ ಉಪಚುನಾವಣೆಯೊಂದಿಗೆ ಇತರ ರಾಜ್ಯಗಳ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಂದಾಗಿದ್ದು, ಅರುಣಾಚಲ ಪ್ರದೇಶ ೧ , ಅಸ್ಸಾಂ ೪, ಬಿಹಾರ ೫, ಛತ್ತೀಸ್ಗಢ ೧, ಗುಜರಾತ್ ೪, ಹರಿಯಾಣ ೩, ಕೇರಳ ೫, ಮೇಘಾಲಯ ೧, ಒಡಿಶಾ ೧, ಪಾಂಡಿಚೇರಿ ೧, ಪಂಜಾಬ್ ೪, ರಾಜಸ್ಥಾನ ೨, ಸಿಕ್ಕಿಂ೩, ತೆಲಂಗಾಣ ೨, ಉತ್ತರ ಪ್ರದೇಶ ೧೧ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

LEAVE A REPLY

Please enter your comment!
Please enter your name here