ಭಾರತಕ್ಕೆ ಚಿನ್ನದ ಕಿರೀಟವನ್ನು ತಂದ `ಇಲಾವೇನಿಲ್ ವಲಾರಿವನ್’..!

0
586

ಬ್ರೆಜಿಲ್‍ನಲ್ಲಿ ನಡೆಯುತ್ತಿರುವ ವಿಶ್ವಕಪ್ ರೈಫಲ್ ಶೂಟಿಂಗ್‍ನಲ್ಲಿ ಭಾರತ ಚಿನ್ನದ ಪದಕವನ್ನು ಬೇಟೆಯಾಡುವತ್ತ ತನ್ನ ಚಿತ್ತ ಮೂಡಿಸಿದೆ ಎಂದು ಹೇಳಬಹುದು. ಹೌದು, ಶೂಟಿಂಗ್ ವಿಭಾಗದಲ್ಲಿ ಭಾರತದ ಅಭಿಷೇಕ್ ವರ್ಮ ಚಿನ್ನದ ಪದಕವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಈ ಹಿಂದೆ ಏಷ್ಯನ್ಸ್ ಗೇಮ್ಸ್ ನಲ್ಲಿ ಪದಕ ಗೆದ್ದು ಭಾರತವನ್ನು ಪ್ರತಿನಿಧಿಸುವ ಮೂಲಕ ಭಾರತಕ್ಕೆ ಮತ್ತಷ್ಟು ಕೀರ್ತಿ ತಂದಿದ್ದರು.

ಈ ಭಾರಿ ಬ್ರೆಜಿಲ್‍ನ ರಿಯೋ ಡಿ ಜನೈರೊ'ದಲ್ಲಿ ನಡೆಯುತ್ತಿರುವ ಶೂಟಿಂಗ್‍ನಲ್ಲಿ ಚಿನ್ನ ಗೆದ್ದು, ದೇಶದ ಕೀರ್ತಿ ಪತಾಕೆಯನ್ನು ಎತ್ತರಕ್ಕೆ ಏರಿಸಿದ್ದಾರೆ. ಐಎಸ್‍ಎಸ್‍ಎಫ್ ರೈಫಲ್ ಸ್ಪರ್ಧೆಯಲ್ಲಿ ಏರ್ ಪಿಸ್ತೂಲ್ ವಿಭಾಗದಲ್ಲಿ ಪುರುಷರ 10 ಮೀಟರ್‍ನ ಅಂತಿಮ ಹಣಾಹಣಿಯಲ್ಲಿ ಚಿನ್ನವನ್ನು ಮುಟ್ಟಿದ್ದಾರೆ. ತಮ್ಮ 8 ಸಹಾ ಸ್ಪರ್ಧಿಗಳನ್ನು ಹಿಂದಿಕ್ಕಿ 244.2 ಪಾಯಿಂಟ್‍ನ ಸರಾಸರಿಯಲ್ಲಿ ಗೆದ್ದು ಚಿನ್ನಕೆ ಮುತ್ತಿಟ್ಟಿದ್ದಾರೆ. ಈ ಪಂದ್ಯದಲ್ಲಿ ಭಾಗವಹಿಸಿದ್ದ ಮತೊಬ್ಬ ಭಾರತೀಯ 17 ವಯಸ್ಸಿನ ಸೌರಭ್ ಕೂಡ ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಭಾರತದ ಶಾಪ್ ಶೂಟರ್ ಎಂದೇ ಕರೆಯಲ್ಪಡುವ ಕಿಶೋರ್ ಅವರಿಗೆ ಆರನೇ ಸ್ಥಾನ ಲಭಿಸಿದೆ.

ಇದರೊಂದಿಗೆ ನಿನ್ನೆ ರಾಷ್ಟ್ರೀಯ ಕ್ರೀಡಾ ದಿನವಾದ ಹಿನ್ನೆಲೆಯಲ್ಲೇ ಗುಜರಾತ್‍ನಇಲಾವೇನಿಲ್ ವಲಾರಿವನ್’ ಅವರು ಮಹಿಳಾ 10 ಮೀಟರ್ ರೈಫಲ್‍ನ ವಿಭಾಗದಲ್ಲಿ ಚಿನ್ನ ಗೆದ್ದು, ಅಗ್ರ ಸ್ಥಾನಕ್ಕೆ ಏರಿದ್ದಾರೆ. ವಿಶೇಷ ಎಂದರೆ ಇದು ಅವರ ಚೊಚ್ಚಲ ವಿಶ್ವಕಪ್ ಚಿನ್ನದ ಪದಕವಾಗಿದೆ. ಮೊದಲ ಭರ್ಜರಿ ಗೆಲ್ಲುವನ್ನು ಸಾಧಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಒಟ್ಟಾರೆ ಐಎಸ್‍ಎಸ್‍ಎಫ್ ವಿಶ್ವಕಪ್ ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಿಯರದ್ದೇ ಮೇಲುಗೈ. ಎರಡು ಚಿನ್ನ, ಒಂದು ಬೆಳ್ಳಿ ಮತ್ತು ಒಂದು ಕಂಚು ಗೆಲ್ಲುವ ಮೂಲಕ ಭಾರತವನ್ನ ಅಗ್ರಸ್ಥಾನದಲ್ಲಿ ಕುರಿಸಿದ್ದಾರೆ. ಭಾರತಿಯರನ್ನು ಹೆಮ್ಮೆ ಪಡುವ ಹಾಗೆ ಮಾಡಿರುವ ಈ ಕ್ರೀಡಾಪಟುಗಳಿಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದೆ

LEAVE A REPLY

Please enter your comment!
Please enter your name here