‘ಟ್ರಬಲ್ ಶೂಟರ್’ಗೆ ಇ.ಡಿ ಡ್ರಿಲ್..!

0
228

ಇಂದು ಸಮನ್ಸ್ ನೀಡಿರುವ ಸೂಚನೆ ಅನುಸಾರ ಎರಡನೆ ಸುತ್ತಿನ ವಿಚಾರಣೆಗೆ ಡಿಕೆಶಿ ಹಾಜರಾಗಬೇಕಿದೆ. ನಿನ್ನೆ ನಡೆದ ಮೊದಲ ಸುತ್ತಿನ ತನಿಖೆಯಲ್ಲಿ ಸುಮಾರು ೭೦ಕ್ಕೂ ಹೆಚ್ಚು ಪ್ರಶ್ನೆಗಳನ್ನು ತನಿಖಾಧಿಕಾರಿಗಳು ಡಿಕೆಶಿಗೆ ಸುರಿಮಳೆಗೈದಿದ್ದಾರೆ. ಡಿಕೆಶಿ ನಿನ್ನೆ ದೆಹಲಿಗೆ ೬ ಗಂಟೆಯೊಳಗೆ ಹೋದ ಬಳಿಕ ಇಡಿ ಕಚೇರಿಯಲ್ಲಿ ಡಿಕೆಶಿಯನ್ನು ಮೊದಲ ಸುತ್ತಿನ ವಿಚಾರಣೆಗೆ ಒಳಪಡಿಸಲಾಗಿತ್ತು.

ವಿಚಾರಣೆಯಲ್ಲಿ ನಾಲ್ಕು ಅಧಿಕಾರಿಗಳು ಒಂದೇ ಪ್ರಶ್ನೆಯನ್ನು ಹತ್ತಾರು ಬಾರಿ ಕೇಳಿ, ಐಟಿ ದಾಳಿಯಲ್ಲಿ ಸಿಕ್ಕ ಒಂದೊಂದು ರೂಪಾಯಿ ಮೂಲವನ್ನು ಕೆದಕಿದ್ದಾರೆ. ದೆಹಲಿಯ ಫ್ಲ್ಯಾಟ್ ನಲ್ಲಿ ಸಿಕ್ಕ ಹಣ ಯಾರದ್ದು? ಎಲ್ಲಿಂದ ಬಂತು? ಎಂಬ ಖಡಕ್ ಪ್ರಶ್ನೆಗಳನ್ನು ಡಿಕೆಶಿ ಮುಂದಿಟ್ಟಿದ್ದರು. ಇಡಿ ಅಧಿಕಾರಿಗಳು ನಡೆಸಿದ ಮೊದಲ ಸುತ್ತಿನ ವಿಚಾರಣೆ ಮುಗಿದ ಬಳಿಕ ಸದ್ಯ ಸಹೋದರ ಡಿಕೆ ಸುರೇಶ್ ನಿವಾಸದಲ್ಲಿ ಡಿಕೆಶಿ ವಾಸ್ತವ್ಯ ಹೂಡಿದ್ದಾರೆ.

ಇಂದು ಬೆಳಗ್ಗೆ ೧೧:೦೦ಕ್ಕೆ ಇ.ಡಿ ಕಚೇರಿಗೆ ಎರಡನೇ ಸುದೀರ್ಘ ವಿಚಾರಣೆಗೆ ಆಗಮಿಸಲಿರುವ ಡಿಕೆಶಿ ಸದ್ಯ ತಮ್ಮ ವಕೀಲರ ಜೊತೆ ಚರ್ಚಿಸಿ ಎಚ್ಚರಿಕೆಯ ಉತ್ತರ ನೀಡಿದ್ದಾರೆ. ಇಂದು ಕೂಡ ಇಡಿ ಕಚೇರಿಗೆ ಹೋಗುವ ಮುನ್ನ ವಕೀಲರ ಜೊತೆ ಚರ್ಚಿಸಿ ಅನಂತರ ವಿಚಾರಣೆಗೆ ತೆರಳಲಿದ್ದಾರೆ ಎಂಬುದು ತಿಳಿದು ಬಂದಿದೆ. ಇಂದು ಸಂಜೆ ೬ ಗಂಟೆಯೊಳಗೆ ಡಿಕೆಶಿ ನೀಡುವ ಉತ್ತರ ಪರಿಶೀಲಿಸಿ ಬಳಿಕ ಅವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಬೇಕು ಎಂಬುದನ್ನು ಇಡಿ ಸೂಕ್ತ ನಿರ್ಧಾರದೊಂದಿಗೆ ಮಾಹಿತಿಯನ್ನು ತಿಳಿಸಲಿದೆ.

LEAVE A REPLY

Please enter your comment!
Please enter your name here