ಸಾಮಾನ್ಯವಾಗಿ ನಾವು ಬಾಳೆಹಣ್ಣು ಯಾವಾಗಲೂ ಸಿಗುವ ಹಣ್ಣು. ಅತಿ ಕಡಿಮೆ ಬೆಲೆಗೆ ಸಾವರ್ಕಾಲಿಕವಾಗಿ ಸಿಗುವ ಬಾಳೆಹಣ್ಣು ಎಲ್ಲರೂ ಸುಲಭವಾಗಿ ಆಯ್ಕೆ ಮಾಡುತ್ತಾರೆ. ಮಾಡುವ ಪ್ರತಿ ಡಿಶ್ ಗಳಲ್ಲೂ ಈ ಹಣ್ಣನ್ನು ರಾಜನಂತೆ ಆಯ್ಕೆ ಮಾಡುತ್ತೇವೆ. ಬಾಳೆ ಹಣ್ಣುಗಳನ್ನು ಪ್ರಯೋಜನ ಹೇಗಿದೆಯೋ ದುಷ್ಪರಿಣಾಮವೂ ಹಾಗೆ ಇದೆ. ಬಾಳೆ ಹಣ್ಣುಗಳ ಸೇವನೆ ಮಾಡುವುದು ಮಲಬದ್ಧತೆಯ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು.
ಮಾಗಿದ ಬಾಳೆ ಹಣ್ಣುಗಳ ಸೇವನೆ ಮನುಷ್ಯನಿಗೆ ಮಲಬದ್ಧತೆಯನ್ನು ದೂರ ಮಾಡುತ್ತದೆ. ಆದರೆ ಇನ್ನೂ ಮಾಗದ ಅರ್ಧಂಬರ್ಧ ಹಣ್ಣಾದ ಬಾಳೆ ಹಣ್ಣುಗಳು ತಮ್ಮಲ್ಲಿ ಸ್ಟಾರ್ಚ್ ಅಂಶವನ್ನು ಯಥೇಚ್ಛವಾಗಿ ಹೊಂದಿರುತ್ತವೆ. ಈ ಅಂಶ ಮನುಷ್ಯನ ಜೀರ್ಣಾಂಗಕ್ಕೆ ವಿರುದ್ಧವಾಗಿರುತ್ತದೆ. ಬಾಳೆ ಹಣ್ಣುಗಳು ಕ್ಯಾಲೋರಿಗಳು ತುಂಬಿರುವ ಆಹಾರವೆಂದು ನಮಗೆ ಗೊತ್ತು. 2 ದೊಡ್ಡ ಗಾತ್ರದ ಬಾಳೆ ಹಣ್ಣುಗಳ ಸೇವನೆ ಮನುಷ್ಯನ ದೇಹದಲ್ಲಿ ಸುಮಾರು 300 ಕ್ಯಾಲೋರಿಗಳಷ್ಟು ಅಂಶ ಸೇರಿಕೊಳ್ಳುತ್ತದೆ.
ಬಾಳೆ ಹಣ್ಣುಗಳಲ್ಲಿ ಕೊಬ್ಬಿನ ಅಂಶ ಸ್ವಲ್ಪವೂ ಇರುವುದಿಲ್ಲ.. ಸಕ್ಕರೆ ಅಂಶದ ವಿಪರೀತ ಸೇವನೆ ಹಲ್ಲುಗಳ ವಿನಾಶಕ್ಕೆ ದಾರಿ ಮಾಡಿ ಕೊಡುತ್ತದೆ. ಬಾಳೆ ಹಣ್ಣಿನಲ್ಲಿ ನೈಸರ್ಗಿಕವಾಗಿ ಸಕ್ಕರೆ ಅಂಶ ಸೇರಿರುವ ಕಾರಣ ಹಲ್ಲುಗಳಿಗೆ ಹಾನಿ ಉಂಟು ಮಾಡುತ್ತದೆ. ಏಕೆಂದರೆ ಬಾಳೆ ಹಣ್ಣು ಗಳಲ್ಲಿರುವ ಸಕ್ಕರೆ ಅಂಶದಲ್ಲಿರುವ ಆಮ್ಲದ ಅಂಶ ಹಲ್ಲುಗಳ ಮೇಲೆ ಎನಾಮಲ್ ಪದರವನ್ನು ತಿಂದು ಹಾಕಿ ಹಲ್ಲುಗಳ ಆರೋಗ್ಯಕ್ಕೆ ಧಕ್ಕೆ ತರುವಲ್ಲಿ ಸಂಶಯವಿಲ್ಲ.
ಹೀಗೆ ಹೇಗೆ ಒಂದು ಬಾಳೆಹಣ್ಣು ನಮಗೆ ಉಪಯುಕ್ತವೋ ಅದರ ಹೆಚ್ಚು ಸೇವನೆಯಿಂದ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರಬಹುದು ಎಂಬುದನ್ನು ಸಹ ನಾವು ತಿಳಿದುಕೊಳ್ಳಬೇಕಿದೆ.