ಈ ನೈಸರ್ಗಿಕ ಟಾನಿಕ್ ಸೇವಿಸಿದ್ರೆ ನೀವು ಫಿಟ್ ಅಂಡ್ ಫೈನ್ ..!

0
446

ಅಡುಗೆ ಮನೆಯಲ್ಲಿ ಸದಾ ಇರುವ ಕೆಲ ವಸ್ತುಗಳು ಅತ್ಯುತ್ತಮ ಮನೆ ಮದ್ದಾಗಿರುತ್ತದೆ. ಅವುಗಳ ಬಳಕೆ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ತೊಂದರೆಗಳಿಗೆ ಉಪಶಮನ ನೀಡಬಲ್ಲವು. ಅನೇಕ ಔಷದಿಯ ಗುಣಗಳನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಶುಂಠಿ ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರ. ಶುಂಠಿ ನೀಡುವ ಉತ್ತೇಜನ ದೇಹಕ್ಕೆ ಮತ್ತು ಮನಸ್ಸಿಗೆ ಅವಶ್ಯವಾಗಿದೆ ಅಂತಾರೆ ತಜ್ಞರು. ಶುಂಠಿ ಬಳಕೆ ಮಾನ್ಸೂನ್ ಸೀಸನ್‍ನಲ್ಲಿ ಹೆಚ್ಚು, ಶುಂಠಿ ಟೀ ಕುಡಿಯುವುದರಿಂದ ದೇಹಕ್ಕೆ ಅಗತ್ಯವಾದ ಪೋಷಕಾಂಶಗಳು ದೊರೆಯುತ್ತದೆ.

ಶುಂಠಿ ಮುಖ್ಯವಾಗಿ ಸ್ನಾಯ, ಕೀಲು ಯಾವುದೇ ರೀತಿಯ ಉರಿಯೂತದ ತೊಂದರೆಗಳಿದ್ದರೇ ಒಂದೇ ಒಂದು ಲೋಟ ಶುಂಠಿ ಟೀ ಮಾಡಿಕೊಂಡು ಕುಡಿಯುವುದರಿಂದ ವೇಗವಾಗಿ ಆರಾಮವಾಗುತ್ತದೆ. ಬಹುಕಾಲದ ನೋವುಗಳಿಗೆ ತಕ್ಷಣದ ಪರಿಹಾರ ನೀಡುವ ಸುಲಭ ಮನೆ ಮದ್ದು ಅಂದರೆ ಶುಂಠಿ ಟೀ.

ದೇಹದಲ್ಲಿ ಸಮತೋಲನ ತಪ್ಪಿದಾಗ ಅನಾರೋಗ್ಯ ಭಾದಿಸುತ್ತದೆ. ಹೊಟ್ಟೆ ನೊವು, ಮಲಬದ್ಧತೆ ಬಮದರೆ ಮುಗಿಯಿತು ದೇಹದಲ್ಲಿ ನಿಶ್ಯಕ್ತಿ ಹೆಚ್ಚಿ ದೇಹವನ್ನು ಕಾಡುತ್ತದೆ. ಹೀಗಿರುವಾಗ ಹೊಟ್ಟೆಯ ಆರೋಗ್ಯ ಕಾಪಾಡುವಲ್ಲಿ ಶುಂಠಿ ಹೆಚ್ಚು ಸಹಕಾರಿ. ಹೊಟ್ಟೆಯಲ್ಲಿ ಕಾಣಿಸಿಕೊಳ್ಳುವ ಜೀರ್ಣಕ್ರಿಯೆಯ ಸಮಸ್ಯೆಗಳಿಗೆ ಶೀಗ್ರದಲ್ಲೇ ಪರಿಹಾರ ಒದಗಿಸುವ ಶಕ್ತಿ ಶುಂಠಿಗಿದೆ. ಒಂದು ಲೋಟ ಶುಂಠಿ ಚಹಾ ಸೇವನೆಯಿಂದ ಹೊಟ್ಟೆಯ ಉಬ್ಬರ ಮತ್ತು ನೊವುಗಳು ಕಡಿಮೆಯಾಗುತ್ತವೆ.

ಸ್ವಲ್ಪ ತಣ್ಣನೆ ಗಾಳಿಯಲ್ಲಿ ಕಾಲ ಕಳೆದ್ರೂ ಶೀತ ಕೆಮ್ಮು ಬರುತ್ತೆ ಎನ್ನುವವರು ಸರಳವಾಗಿ ಮನೆಯಲ್ಲಿಯೇ ಶುಂಠಿ ಟೀ ಅಥವಾ ಶುಂಠಿಯನ್ನು ಸೇವಿಸುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಿ ಹೆಚ್ಚಿನ ಪ್ರಯೋಜನ ಪಡೆಯಬಹುದು. ಶುಂಠಿಯಲ್ಲಿ ಜೀವಸತ್ವ ಅಂಶಗಳಿರುವುದರಿಂದ ರಕ್ತ ಚಲನೆಯನ್ನು ಹಾಗೂ ಹೃದಯದ ಆರೋಗ್ಯವನ್ನು ಸಮತೋಲನದಲ್ಲಿ ಇಡುತ್ತದೆ. ಶುಂಠಿಯನ್ನು ಸದಾ ಆಹಾರದಲ್ಲಿ ಒಂದಿಲ್ಲೊಂದು ರೂಪದಲ್ಲಿ ಬಳಸುವುದರಿಂದ ಹೆಚ್ಚಿನ ಪ್ರಯೋಜನ ಪಡೆಯಬಹುದು, ಶುಂಠಿ ಅಥವಾ ಶುಂಠಿ ಟೀ ಅಂದರೆ ದೂರ ಹೋಗುವವರು ಸ್ವಲ್ಪ ಯೋಚಿಸಿ ಉತ್ತಮ ಆರೋಗ್ಯಕ್ಕೆ ನೆರವಾಗುವ ಶುಂಠಿಯನ್ನು ಒಪ್ಪಿಕೊಂಡರೆ ಆರೋಗ್ಯ ಭಾಗ್ಯ ಲಭಿಸುತ್ತದೆ.

ಬಿಸಿ ನೀರಿನಲ್ಲಿ ಶುಂಠಿಯನ್ನು ಕುದಿಸಿ ಸ್ವಲ್ಪ ಬೆಲ್ಲ ಸೇರಿಸಿ ಒಂದೆರಡು ದಳ ಪುದಿನ ಸೊಪ್ಪು ಸೇರಿಸಿ ಕುಡಿಯುವುದರಿಂದ ಶುಂಠಿ ದೇಹಕ್ಕೆ ನೈಸರ್ಗಿಕ ಟಾನಿಕ್ ರೀತಿ ಕೆಲಸ ಮಾಡಿ ದೇಹಕ್ಕೆ ಅಗತ್ಯವಾದ ಚೈತನ್ಯವನ್ನು ನೀಡುತ್ತದೆ.

LEAVE A REPLY

Please enter your comment!
Please enter your name here