ಈ ಹಣ್ಣನ್ನು ತಿನ್ನುತ್ತಿದ್ದೀರಾ, ಒಂದು ಬಾರಿ ಇದನ್ನು ತಿಳಿದುಕೊಳ್ಳಿ.!

0
289

ಕಿವಿ ಹಣ್ಣು ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ತನ್ನ ಆಕರ್ಷಣಿಯ ಬಣ್ಣದಿಂದ ಸಹ ತುಂಬಾ ಜನರ ಗಮನವನ್ನ ಸೆಳೆಯುತ್ತದೆ. ಸ್ವಲ್ಪ ಸಿಹಿ ಜೊತೆಗೆ ಹುಳಿ ಹುಳಿಯಾದ ರುಚಿಯಿಂದ ಎಂತಹವರ ಬಾಯಲ್ಲಿ ನಿರೂರುವಂತೆ ಮಾಡುತ್ತದೆ. ಈ ಕಿವಿ ಹಣ್ಣಿನ ಸೇವನೆಯಿಂದ ನಮ್ಮ ದೇಹಕ್ಕೆ ಅನೇಕ ರೀತಿಯ ಉಪಯೋಗಗಳಿವೆ. ನಮ್ಮ ಶರೀರದ ಆರೋಗ್ಯಕ್ಕೆ ಇದು ರಾಮಬಾಣವಿದಂತೆ. ದಿನಕ್ಕೆ ಒಂದು ಕಿವಿ ಹಣ್ಣನ್ನು ತಿನ್ನುವುದರಿಂದ ನಮ್ಮ ಜಿರ್ಣಾಶಕ್ತಿಯನ್ನು ಹೆಚ್ಚಿಸುತ್ತದೆ. ನಮ್ಮಲ್ಲಿ ತುಂಬಾ ಜನ ರಕ್ತದೊತ್ತಡದಿಂದ ನರಳುತ್ತಾರೆ.

ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವವರು ಕಿವಿ ಹಣ್ಣನ್ನು ತಿನ್ನುವುದರಿಂದ ರಕ್ತದೊತ್ತಡಕ್ಕೆ ಕಾರಣವಾಗುವಂತಹ ಪೋಟ್ಯಾಷಿಯಂ, ಸೋಡಿಯಂನನ್ನು, ನಿಯಂತ್ರಿಸುತ್ತದೆ. ನಮ್ಮ ಶರೀರದಲ್ಲಿ ಅನಾರೋಗ್ಯದ ಸಮಸ್ಯೆ ಇದೆಯಂತ ನಮ್ಮಗೆ ಗೊತ್ತಾಗೊದು DNA ಇಂದ. ಅಂತಹ DNA ನಮ್ಮ ಶರೀರದಲ್ಲಿ ಡ್ಯಾಮೇಜ್ ಆಗದಂತೆ ಈ ಕಿವಿ ಹಣ್ಣು ಕಾಪಾಡುತ್ತದೆ.ಅಷ್ಟೇ ಅಲ್ಲದೇ, ಕೆಲವು ರೀತಿಯ ಕ್ಯಾನ್ಸರ್ ಗಳು ಬರದಂತೆ ನಮ್ಮನ್ನು ಕಾಪಾಡುತ್ತದೆ.

ದೇಹಕ್ಕೆ ನಾವು ಎಷ್ಟೇ ಆಹಾರ ಸೇವಿಸಿದರೂ ಸಹ ನಮ್ಮ ದೇಹಕ್ಕೆ ರೋಗ, ನಿರೋಧಕ ಶಕ್ತಿ ತುಂಬಾನೇ ಮುಖ್ಯ. ಈ ಕಿವಿ ಹಣ್ಣಿನ ಸೇವನೆಯಿಂದ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಮ್ಮಲ್ಲಿ ತುಂಬಾ ಜನರಿಗೆ ಬೊಜ್ಜು ಸಮಸ್ಯೆ, ಅಂದರೆ ತೂಕ ಜಾಸ್ತಿ ಇರುವ ಸಮಸ್ಯೆ ತುಂಬಾ ಜನರಲ್ಲಿ ಕಾಡ್ತಾಯಿದೆ. ಈ ಒಂದು ಕಿವಿ ಹಣ್ಣನ್ನು ತಿನ್ನುವುದರಿಂದ, ನಾವು ಅತೀ ಬೇಗ ನಮ್ಮ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದರಲ್ಲಿರುವ ಫೈಬರ್, ಮಲಬದ್ದತೆ ಮತ್ತು ಕರುಳಿನ ಸಮಸ್ಯೆಗಳನ್ನು ಹೊಗಲಾಡಿಸುತ್ತದೆ. ನಮ್ಮ ಹೃದಯ ಆರೋಗ್ಯವಾಗಿರಬೇಕೆಂದರೆ ರಕ್ತಸಂಚಾರ ಚೆನ್ನಾಗಿ ಆಗಬೇಕು ಆದರಿಂದ ಪ್ರತಿದಿನ 2 ರಿಂದ 3 ಕಿವಿ ಹಣ್ಣನ್ನು ತಿನ್ನುವುದರಿಂದ ರಕ್ತ ಎಪ್ಪುಗಟ್ಟದ ಹಾಗೆ ತಡೆಯುತ್ತದೆ.

ಸಕ್ಕರೆ ಖಾಯಿಲೆ ಇರುವವರಿಗೆ ಇದು ರಾಮಬಾಣವಿದಂತೆ. ದೇಹದಲ್ಲಿರುವ ಶುಗರ್ ಲೆವಲ್ ಅನ್ನು ಇದು ಕಡಿಮೆ ಮಾಡುತ್ತದೆ.
೧.ಈ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ದೃಷ್ಟಿಯು ಚುರುಕಾಗುತ್ತದೆ.
೨.ಕಿವಿ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಬೇಕಾದ ಖನಿಜಾಂಶಗಳು ಹೇರಳವಾಗಿ ಸಿಗುತ್ತದೆ.
೩.ಇದರಲ್ಲಿರುವಂತಹ ವಿಟಮಿನ್ ‘ಎ’ ನಮ್ಮನ್ನು ಚರ್ಮ ರೋಗಗಳಿಂದ ಕಾಪಾಡುತ್ತದೆ.ಚರ್ಮವನ್ನು ಸುಂದರವನ್ನಾಗಿಸುತ್ತದೆ.
೪.೨೦೧೬ರಲ್ಲಿ ಸುರಕ್ಷಿತ ಆಹಾರಗಳ ಪಟ್ಟಿಯಲ್ಲಿ ಕಿವಿ ಹಣ್ಣು ಸಹ ಒಂದು ಎಂದು ಹೇಳಲಾಗಿದೆ.

LEAVE A REPLY

Please enter your comment!
Please enter your name here