ಸುಟ್ಟ ಗಾಯಗಳಿಗೆ ಇಲ್ಲಿದೆ ಸುಲಭ ಮನೆಮದ್ದು

0
212

ಸಾಮಾನ್ಯವಾಗಿ ನೀರು ಕಾಯಿಸುವಾಗ, ಒಲೆ ಮುಂದೆ ಕುಳಿತು ಅಡಿಗೆ ಮಾಡುವಾಗ, ಬಟ್ಟೆಗಳನ್ನು ಇಸ್ತ್ರಿ ಮಾಡುವಾಗ ಹೀಗೆ ಹಲವಾರು ಸಂದರ್ಭದಲ್ಲಿ ನಮ್ಮ ಕೈ ಅಥವಾ ದೇಹದ ಇತರೆ ಭಾಗಗಳನ್ನು ಸುಟ್ಟುಕೊಳ್ಳುವುದು ಸಾಮಾನ್ಯ. ಆದರೆ ಈ ಗಾಯಗಳು ಕೆಲವೊಮ್ಮೆ ಕಲೆಗಳಾಗಿ ಹಾಗೆಯೇ ಉಳಿದುಕೊಳ್ಳುತ್ತವೆ. ಹೀಗಾಗಿ ಸುಟ್ಟ ಗಾಯಗಳಾದ ಕೂಡಲೇ ಈ ಕೆಳಗಿನ ಕ್ರಮಗಳನ್ನು ಅನುಸರಿಸಿ.

• ಗಾಯ ಆದ ಕೂಡಲೇ ಕೆಲವರು ರೆಫ್ರಿಜರೇಟರ್ ನಲ್ಲಿರುವ ಐಸ್ ತೆಗೆದು ಗಾಯದ ಮೇಲೆ ಇಡುತ್ತಾರೆ. ಹೀಗೆ ಮಾಡುವುದು ಸರಿಯಲ್ಲ. ಇದು ರಕ್ತ ಸಂಚಾರಕ್ಕೆ ಅಡ್ಡಿ ಮಾಡುತ್ತದೆ. ಇದರ ಬದಲಿಗೆ ತಂಪಾದ ಹರಿಯುವ ನೀರಿಗೆ ಗಾಯ ಒಡ್ಡುವುದು ಒಳ್ಳೆಯದು.

• ಸುಟ್ಟ ಗಾಯಕ್ಕೆ ಅಲೋವೆರಾ ಹಚ್ಚಬಹುದು. ಇದರಿಂದ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ.

• ಇನ್ನೂ ಬಾಳೆಹಣ್ಣಿನ ಸಿಪ್ಪೆಯನ್ನು ಸುಟ್ಟ ಚರ್ಮದ ಭಾಗದ ಮೇಲಿಟ್ಟರೆ ಊತ ಮತ್ತು ನೋವು ಕಡಿಮೆಯಾಗಲಿದೆ.

• ಮತ್ತೆ ಕೆಲವರು ಬೆಣ್ಣೆ ಸವರುತ್ತಾರೆ. ಇದು ಕೂಡ ಒಳ್ಳೆಯದಲ್ಲ. ಬೆಣ್ಣೆ ಹಚ್ಚುವುದರಿಂದ ಗಾಯದ ಮೇಲೆ ಬ್ಯಾಕ್ಟೀರಿಯಾಗಳು ಉಂಟಾಗಿ ಸೋಂಕು ಹೆಚ್ಚಾಗುತ್ತದೆ.

• ಸುಟ್ಟ ಗಾಯದ ಉರಿ ಕಡಿಮೆ ಮಾಡಲು ನಿಂಬೆಯನ್ನು ಬಳಸುವವರು ಇದ್ದಾರೆ. ಇದರಿಂದ ಗಾಯ ಉಲ್ಬಣಗೊಳ್ಳುವುದು ಹಾಗೂ ಚರ್ಮಕ್ಕೆ ಹಾನಿಯಾಗುವ ಸಾಧ್ಯತೆ ಇದೆ.

• ಇನ್ನು ಕೆಲವರು ಟೂತ್ ಪೇಸ್ಟ್ ಹಚ್ಚುತ್ತಾರೆ. ಇದು ಸಹ ಒಳ್ಳೆಯ ಅಭ್ಯಾಸವಲ್ಲ. ಇದರಿಂದ ಕೆಲಹೊತ್ತು ಹಿತಾನುಭವ ಆಗಬಹುದೇ ವಿನಃ ಗಾಯ ವಾಸಿಯಾಗುವುದಿಲ್ಲ.

• ಜೇನುತುಪ್ಪ ನಂಜು ನಿರೋಧಕ ಹಾಗೂ ಚಿಕಿತ್ಸಾ ಗುಣಗಳನ್ನು ಹೊಂದಿದೆ. ಇದರಿಂದ ಗಾಯದ ಕಲೆಯು ಕಡಿಮೆಯಾಗಲಿದೆ.

LEAVE A REPLY

Please enter your comment!
Please enter your name here