ದೀಪಿಕಾ ಪಡುಕೋಣೆ ಅಭಿನಯದ ಬಾಲಿವುಡ್ ಬಹುನಿರೀಕ್ಷಿತ ‘ಚಪಾಕ್’ ಟ್ರೇಲರ್ ಬಿಡುಗಡೆಯಾಗಿದೆ. 2005 ರಲ್ಲಿ ದೆಹಲಿಯಲ್ಲಿ ಲಕ್ಷ್ಮಿ ಅಗರ್ವಾಲ್ ಎಂಬ ಯುವತಿ ಮೇಲೆ ಆಕೆಗೆ ತಿಳಿದವರೇ ಆ್ಯಸಿಡ್ ದಾಳಿ ಮಾಡಿದ್ದರು. ಈ ಘಟನೆಯನ್ನು ಆಧಾರವಾಗಿರಿಸಿಕೊಂಡು ಮೇಘನಾ ಗುಲ್ಜಾರ್ ‘ಚಪಾಕ್’ ಸಿನಿಮಾವನ್ನು ನಿರ್ದೇಶಿಸಿದ್ದಾರೆ.
ಚಿತ್ರದಲ್ಲಿ ದೀಪಿಕಾ ಪಡುಕೋಣೆ ಮಾಲತಿ ಎಂಬ ಆ್ಯಸಿಡ್ ದಾಳಿಗೆ ಒಳಗಾದ ಯುವತಿಯ ಪಾತ್ರದಲ್ಲಿ ನಟಿಸಿದ್ದಾರೆ. 2.19 ನಿಮಿಷದ ಈ ಟ್ರೇಲರ್ನಲ್ಲಿ ದೀಪಿಕಾ ಪಾತ್ರ ನಿಜಕ್ಕೂ ಕಟ್ಟಿಗೆ ಕಟ್ಟುವಂತಿದೆ. ಆ್ಯಸಿಡ್ ದಾಳಿಗೆ ಒಳಗಾದ ಯುವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು, ಬದಲಾದ ಮುಖವನ್ನು ಕನ್ನಡಿಯಲ್ಲಿ ನೋಡಿದಾಗ ದು:ಖದಲ್ಲಿ ಅರಚುವುದು, ಕಿವಿ ಸುಟ್ಟುಹೋಗಿದೆ ಓಲೆ ಹೇಗೆ ಹಾಕಿಕೊಳ್ಳುವುದು ಎಂದು ನೋವಿನಿಂದ ಹೇಳುವುದು, ನ್ಯಾಯಕ್ಕಾಗಿ ಹೋರಾಟ ಮಾಡುವುದು ಇವೆಲ್ಲಾ ಅಂಶಗಳು ಟ್ರೇಲರ್ನಲ್ಲಿವೆ.
ಮುಂದಿನ ವರ್ಷ ಜನವರಿ 10 ರಂದು ಸಿನಿಮಾ ತೆರೆ ಕಾಣಲಿದೆ. ಇನ್ನು ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ದೀಪಿಕಾ ಪಡುಕೋಣೆ ಪಾತ್ರ, ಕಥೆಯ ಬಗ್ಗೆ ನೆನದು ಭಾವುಕರಾಗಿದ್ದಾರೆ. ಸಿನಿಮಾ ಬಗ್ಗೆ ಮಾತನಾಡುತ್ತಾ ಅವರು ಕಣ್ಣಂಚು ಒದ್ದೆಯಾಗಿತ್ತು.