ಹಿರಿಯ ಪತ್ರಕರ್ತ ರವಿ ಬೆಳಗೆರೆ ಮತ್ತು ದುನಿಯಾ ವಿಜಯ್ ನಡುವಿನ ವಾಗ್ವಾದ ಇದೆ ಮೊದಲೇನಲ್ಲ. ಈ ಹಿಂದೆ ದುನಿಯಾ ವಿಜಯ್ ಅಭಿನಯದ “ಭೀಮಾ ತೀರದಲ್ಲಿ” ಸಿನಿಮಾ ರಿಲೀಸ್ ಆದ ಸಮಯದಲ್ಲಿ ಇಬ್ಬರ ಜಗಳ ತಾರಕಕ್ಕೇರಿತ್ತು.
ಚಿತ್ರದ ಕಥೆ ಬೆಳಗೆರೆಯವರ “ಭೀಮಾ ತೀರದ ಹಂತಕರು” ಪುಸ್ತಕದಿಂದ ಕದ್ದಿರುವುದು ಎಂದು ರವಿ ಬೆಳಗೆರೆ ನೇರವಾಗಿ ಆರೋಪ ಮಾಡಿದ್ದರು. ಅಲ್ಲಿಂದ ಶುರವಾಗಿರುವ ಇಬ್ಬರ ವಾಗ್ವಾದ ಇನ್ನೂ ಮುಂದುವರೆದಿದೆ. ಮೊನ್ನೆ ಮೊನ್ನೆಯಷ್ಟೆ ರವಿ ಬೆಳಗೆರೆ ವಿಜಯ್ ಸಂಸಾರ ಕಲಹದ ಬಗ್ಗೆ ಟೀಕಾ ಪ್ರಹಾರ ಹರಿಸಿದ್ದರು.
ಬೆಳಗೆರೆ ಮಾತಿನಿಂದ ಸಿಟ್ಟಿಗೆದ್ದಿರು ವಿಜಯ್ ಇಂದು ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. “ಸು***ಮಗನಿಗೆ ಇದೆ ಕೊನೆಯ ವಾರ್ಗಿನಿಂಗ್” ಎಂದು ಬೆಳಗೆರೆ ವಿರುದ್ಧ ಬುಸುಗುಟ್ಟಿದ್ದಾರೆ. ಇಂದು ಬಡವ ರಾಸ್ಕಲ್ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿಜಯ್ ಬೆಳಗೆರೆ ವಿರುದ್ಧ ಫುಲ್ ಗರಂ ಆಗಿದ್ದರು.

ರವಿ ಬೆಳಗೆರೆ ಇನ್ನೂ ಬದುಕಿದ್ದಾರಾ? ಅವನಿಗೇ ಇಬ್ಬರು ಹೆಂಡತಿಯರು ನಾಲ್ಕು ಮಕ್ಕಳು ಇದ್ದಾರೆ, ಒಮ್ಮೆ ಪುಲ್ವಾಮ ಅಂತಾರೆ, ಇನ್ನೊಮ್ಮೆ ಹೆಂಡತಿ ಗಲಾಟೆ ಅಂತಾನೆ. ಆತನಿಗೆ ಪ್ರಜ್ಞೆನೇ ಇಲ್ಲ. ಏನಾಗಿದೆ ಅವನಿಗೆ. ಅವನಿಗೆ ಏನಾದ್ರು ಸಮಸ್ಯೆನಾ. ನೀವೆ ಕೇಳಿ ನೋಡಿ” ಎಂದು ಪತ್ರಕರ್ತರಿಗೆ ಹೇಳಿದ್ದಾರೆ.
“ಅವನ ವಯಸ್ಸಿಗೊಂದು ಮರಿಯಾದೆ ಇಲ್ಲವಾ? ಕುಡಿದು ಕುಡಿದು ಮಾನಸ ಆಸ್ಪತ್ರೆಯಲ್ಲಿ ಇರ್ತಾರೆ, ಪ್ರಜ್ಞೆ ಬಂದ್ಮೇಲೆ ಏನಾದ್ರು ಬರಿತ ಇರ್ತಾನೆ. ಪ್ರಜ್ಞೆ ಬಂದಾಗಲೆಲ್ಲ ದರ್ಶನ್ ಹೆಂಡತಿ, ದುನಿಯಾ ವಿಜಯ್ ಹೆಂಡತಿಯರು. ಇವನ ಹೆಂಡತಿಯರು ಇವನಿಗೆ ಕಣ್ಣಿಗೆ ಕಾಣುವುದಿಲ್ಲವಾ? ಸು**ಮಗನಿಗೆ ಇದೆ ಕೊನೆ ವಾರ್ನಿಂಗ್, ಅವನು ನೆಟ್ಟಗೆ ಇರಬೇಕು ಇನ್ನೊಬ್ಬನಿಗೆ ಹೇಳಬೇಕಾದ್ರೆ. ನೆಟ್ಟಗಿದ್ರೆ ಮಾತ್ರ ಇನ್ನೊಬ್ಬನಿಗೆ ಹೇಳಬೇಕು” ಎಂದು ಏಕವಚನದಲ್ಲಿ ಮಾತನಾಡಿದ್ದಾರೆ.
