ಈ ರಸ್ತೆಯ ವಿಚಿತ್ರ ಸಂಗತಿ ಕೇಳಿದರೆ ನೀವು ಶಾಕ್..!

0
568

ಯಾವುದೇ ಜಾಗಕ್ಕೆ ಹೋಗಲು ನೀವು ಹೆಚ್ಚಾಗಿ ರಸ್ತೆಯನ್ನು ಅವಲಂಬಿಸುತ್ತಿರಿ ಅಲ್ವಾ? ನಿಮ್ಮ ಪ್ರಯಾಣವನ್ನ ಇನಷ್ಟು ಆರಾಮದಾಯಕಗೊಳಿಸಲು ರಸ್ತೆ ಬೆಸ್ಟ್ ಮಾದರಿಯಾಗಿದೆ. ಆದರೆ ನೀವು ಎಲ್ಲಿಗೋ ಒಂದು ರಸ್ತೆಯ ಮೂಲಕ ಹೋಗುತ್ತಿದ್ದರೆ, ಸಡನ್ ಆಗಿ ಆ ರಸ್ತೆ ನೀರಿನಿಂದ ತುಂಬಿ ಹೋದರೆ ಏನಾಗುತ್ತೆ? ಕೇಳಲು ವಿಚಿತ್ರ ಅನಿಸುತ್ತೆ ಅಲ್ವಾ? ಆದರೆ ಅದೆ ನಿಜ ಇಂತಹ ರಸ್ತೆ ಪ್ರಪಂಚದಲ್ಲಿ ಇದೆ. ಇದೊಂದು ವಿಶೇಷವಾದ ರಸ್ತೆಯಾಗಿದೆ ಇದರ ಸುತ್ತಲೂ ನೀರು ಆವಾರಿಸಿದೆ.

ಈ ರಸ್ತೆ ದಿನದಲ್ಲಿ 2 ಗಂಟೆಗಳ ಕಾಲ ಮಾತ್ರ ಕಾಣಿಸುತ್ತದೆ. ಬಾಕಿ ಪೂರ್ತಿ ದಿನ ಇದು ನೀರಿನಲ್ಲಿ ಮುಳುಗಿರುತ್ತದೆ. ಈ ವಿಚಿತ್ರ ರಸ್ತೆ ‘ಫ್ರಾನ್ಸಿನಲ್ಲಿದೆ’. ಈ ರಸ್ತೆ ಮೆನ್ ಲ್ಯಾಂಡ್ ಅನ್ನು ನೋಯಿಯರ್ ಮೋಟಿಯರ್’ಗೆ ಸೇರಿಸುತ್ತದೆ. ಈ ರಸ್ತೆ 4.5 ಕಿ.ಮಿ ಉದ್ದವಾಗಿದೆ. ಈ ರಸ್ತೆಯನ್ನ ‘ದೂಗ್ ಹೋಯಿಸ್’ ಎಂದು ಸಹ ಕರೆಯಲಾಗುತ್ತದೆ. ಅದರ ಅರ್ಥ ಶೂವನ್ನು ಒದ್ದೆ ಮಾಡಿ ರಸ್ತೆ ದಾಟುವುದು. ಈ ರಸ್ತೆಯನ್ನ ಮೊದಲಿಗೆ 1701ರಲ್ಲಿ ಮ್ಯಾಪ್ ಮೂಲಕ ನೋಡಲಾಗಿತ್ತು. ಈ ರಸ್ತೆಯನ್ನ ಕ್ರಾಸ್ ಮಾಡುವುದು ಡೇಂಜರಸ್ ಎಂದು ಸಹ ಹೇಳಲಾಗುತ್ತದೆ. ದಿನದಲ್ಲಿ 2 ಬಾರಿ ಅಥವಾ ಎರಡು ಗಂಟೆಗಳ ಕಾಲ ಈ ರಸ್ತೆ ಖಾಲಿಯಾಗಿರುತ್ತದೆ.

ನಂತರ ಸಡನ್ ಆಗಿ 2 ಕಡೆಗಳಿಂದಲೂ ನೀರು ಮೇಲೆ ಬಂದು ನೋಡುನೋಡುತ್ತಿದ್ದಂತೆ ರಸ್ತೆ ಸಮುದ್ರದಲ್ಲಿ ಮುಳುಗಿ ಹೋಗುತ್ತದೆ. ಈ ಸಮಯದಲ್ಲಿ ಕೇವಲ ಬೋಟ್ ಮೂಲಕ ಜನರು ಸಂಚಾರ ನಡೆಸಬಹುದಾಗಿದೆ. ರಿರ್ಪೊಟ್ ಅನುಸಾರ 1840ರಲ್ಲಿ ಕಾರು ಹಾಗೂ ಕುದುರೆ ಮೂಲಕ ಈ ರಸ್ತೆಯಲ್ಲಿ ಜನರು ಪ್ರಯಾಣ ಮಾಡಲು ಆರಂಭಿಸಿದ್ದರು. ಈ ನೀರಿನ ಆಳ 1.3 ರಿಂದ 4 ಮೀಟರ್‌ ವರೆಗೂ ಬರುತ್ತದೆ. ಅಲ್ಲದೇ ಹಲವಾರು ಜನ ಈ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆಗಳು ಕೂಡ ವರದಿಯಾಗಿವೆ

LEAVE A REPLY

Please enter your comment!
Please enter your name here