ಡಿಎಲ್ ಇಲ್ಲದಿದ್ರೆ ಮನೆಯಲ್ಲಿಯೇ ಕುಳಿತು ಅಪ್ಲೈ ಮಾಡಲು ಹೀಗೆ ಮಾಡಿ

0
442

ದೇಶಾದ್ಯಂತ ಕೇಂದ್ರ ಸರ್ಕಾರ ರೂಪಿಸಿರುವ ನೂತನ ಮೋಟಾರು ವಾಹನ ಕಾಯ್ದೆ ಜಾರಿಯಾದನಂತರ ಡಿಎಲ್ ಪಡೆದುಕೊಳ್ಳಲು ಜನರು ಪರದಾಡುತ್ತಿದ್ದಾರೆ. ಚಾಲನಾ ಪರವಾನಿಗೆ ಇಲ್ಲದೆ ವಾಹನ ಚಲಾಯಿಸುವಂತಿಲ್ಲ ಎನ್ನುವ ಈ ಹಿಂದಿನ ನಿಯಮಕ್ಕೆ ಈಗ ಐದು ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಹೀಗಾಗಿ ದಂಡ ತೆರುವ ಬದಲು ಡಿಎಲ್ ಮಾಡಿಕೊಳ್ಳಬೇಕೆಂದು ಜನರು ಆರ್.ಟಿ.ಓ. ಕಚೇರಿಗಳಲ್ಲಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ಇದರ ಜೊತೆಗೆ ಏಜೆಂಟ್‍ಗಳಿಗೂ ಸಾವಿರಾರೂ ರೂಪಾಯಿ ಕೊಡಬೇಕಾದ ಅನಿವಾರ್ಯತೆ ಎದುರಾಗಿದೆ.

ಹೀಗಾಗಿ ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಮನೆಯಲ್ಲಿ ಕುಳಿತೆ ಸುಲಭವಾಗಿ ಡಿಎಲ್ ಪಡೆದುಕೊಳ್ಳಲು ಕೂಡಾ ಕೇಂದ್ರ ಸರ್ಕಾರ ಯೋಜನೆಯೊಂದನ್ನು ಸಾಕಷ್ಟು ಹಿಂದೆಯೇ ಪರಿಚಯಿಸಿದೆ. ಆದರೆ ಆ ಯೋಜನೆಯ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಇಲ್ಲ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಯೋಜನೆಯ ಪ್ರಕಾರ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಡಿಎಲ್ ಗೆ ಅಪ್ಲೈ ಮಾಡಬಹುದು. ಮೋದಿ ಸರ್ಕಾರದ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ “ಸಾರಥಿ” ಪೋರ್ಟಲ್ ಪ್ರಾರಂಭಿಸಿದೆ.

ಈ ಪೋರ್ಟಲ್ ಮೂಲಕ ಆನ್ಲೈನ್ ಚಾಲನಾ ಪರವಾನಗಿ ಅರ್ಜಿ ಸಲ್ಲಿಸಬಹುದು. ದಾಖಲೆಗಳನ್ನು ಕೂಡಾ ಅಲ್ಲಿಯೇ ಸಲ್ಲಿಸಬಹುದು. ಅದೇ ರೀತಿ ಶುಲ್ಕವನ್ನು ಕೂಡ ನೀವು ಆನ್ಲೈನ್‍ನಲ್ಲಿಯೇ ಪಾವತಿ ಮಾಡಬಹುದು. ಆದ್ರೆ ಚಾಲನಾ ಪರೀಕ್ಷೆಗೆ ಮಾತ್ರ ನೀವು ಆರ್.ಟಿ.ಒ. ಕಚೇರಿಗೆ ಹೋಗಬೇಕಾಗುತ್ತದೆ.
https://sarathi.parivahan.gov.in/sarathiservice4/stateSelection.do ನಲ್ಲಿ ನಿಮಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

LEAVE A REPLY

Please enter your comment!
Please enter your name here