ಇಬ್ಬರು ಪ್ರಯಾಣಿಕರನ್ನು ಬಸ್ನಿಂದ ದಿಢೀರ್ ಕೆಳಗಿಳಿಸಿದ್ದಾರೆ ಬಸ್ ಚಾಲಕ. ಇದಕ್ಕೆ ಕಾರಣ ಏನು ಎಂದು ತಿಳಿದರೆ ನೀವು ಆಶ್ಚರ್ಯ ಪಡುತ್ತೀರಿ!! ಹೌದು, ಬಸ್’ನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಪ್ರೇಮಿಗಳು ಲವ್ವಿ-ಡವ್ವಿ ನಡೆಸುತ್ತಿದ್ದು, ತುಂಬಿದ ಬಸ್ನಲ್ಲಿ ಪ್ರೇಮಿಗಳು ಪರಸ್ಪರ ಚುಂಬಿಸುತ್ತಿದ್ದರು ಎನ್ನಲಾಗಿದೆ. ಇದನ್ನು ವೀಕ್ಷಿಸಿದ ಸಹ-ಪ್ರಯಾಣಿಕರು ಮುಜುಗರಕ್ಕೆ ಒಳಗಾಗಿದ್ದಾರೆ. ಶುಕ್ರವಾರ ಕೋಲಾರಕ್ಕೆ ಹೋಗುತ್ತಿದ್ದ ಸರ್ಕಾರಿ ಬಸ್’ನಲ್ಲಿ ಈ ಘಟನೆ ಸಂಭವಿಸಿದೆ. ಪ್ರೇಮಿಗಳಿಬ್ಬರು ಸಾರ್ವಜನಿಕರ ಮಧ್ಯೆ ಅಸಭ್ಯ ರೀತಿಯಲ್ಲಿ ವರ್ತಿಸಿದ ಪರಿಣಾಮ ಇಬ್ಬರನ್ನು ಕೂಡ ಸ್ಥಳದಲ್ಲಿ ಇಳಿಸಿದ್ದಾರೆ ಬಸ್’ನ ನಿರ್ವಾಹಕ ಮತ್ತು ಚಾಲಕ.
ಪ್ರೇಮಿಗಳು ಬಂಗಾರಪೇಟೆ ನಿವಾಸಿಗಳು ಎಂದು ತಿಳಿಸಲಾಗಿದೆ, ಕೋಲಾರದಿಂದ ಬಂಗಾರಪೇಟೆಗೆ ಹೋಗಲು ಸರ್ಕಾರಿ ಬಸ್ ಹತ್ತಿದ ಪ್ರೇಮಿಗಳು ಸ್ವಲ್ಪ ಸಮಯದ ನಂತರ ಪರಸ್ಪರ ಚುಂಬಿಸಿದ್ದಾರೆ. ಇದು ಬಸ್ನಲ್ಲಿದ್ದ ಪ್ರಯಾಣಿಕರಿಗೆ ಸಾಕಷ್ಟು ಮುಜುಗರ ಉಂಟು ಮಾಡಿದೆ. ಕೆಲ ಪ್ರಯಾಣಿಕರು ಪ್ರೇಮಿಗಳು ಚುಂಬಿಸುತ್ತಿದ್ದ ದೃಶ್ಯವನ್ನು ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಆ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಗೊಂಡಿದೆ. ಜೊತೆಗೆ ಪ್ರೇಮಿಗಳಿಬ್ಬರು ಸಾರ್ವಜನಿಕರು ಪ್ರಯಾಣಿಸುವ ಬಸ್ ನಲ್ಲಿ ಮೈಮರೆತು ಅಸಭ್ಯವಾಗಿ ವರ್ತಿಸಿದ್ದನ್ನು ಹಲವರು ತೀವ್ರ ಆಕ್ರೋಶ ವ್ಯಕ್ತಪಡಿಸಿ ಬಸ್’ನಿಂದ ಹೊರದಬ್ಬಿದ್ದಾರೆ ಎನ್ನಲಾಗಿದೆ.