ಇಲ್ಲಿಯವರೆಗೆ ಹತ್ತು ಸಾವಿರ ಅಥವಾ ಇಪ್ಪತ್ತು ಸಾವಿರ ವೆಚ್ಚದ ವೈನ್ ಬಾಟಲಿಗಳನ್ನು ನೀವು ನೋಡಿರಬೇಕು. ಆದರೆ ವಿಶ್ವದ ಅತ್ಯಂತ ದುಬಾರಿ ವೈನ್’ಗೆ ಏಷ್ಟು ವೆಚ್ಚವಾಗಬಹುದು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಇದೀಗ ಯುರೋಪಿಯನ್ ದೇಶ ಹಂಗೇರಿಯ ಪ್ರಮುಖ ಪ್ರವಾಸಿ ಗಮ್ಯಸ್ಥಾನ ಟೋಕಾಜ್’ನ ವೈನ್ ಉತ್ಪಾದಕರು ಒಂದು ವೈನ್ ಅನ್ನು ಪ್ರಸ್ತುತಪಡಿಸಿದ್ದಾರೆ. ಒಂದೂವರೆ ಲೀಟರ್ ವೈನ್ ಹೊಂದಿರುವ ಈ ಬಾಟಲಿಯ ಬೆಲೆ ಸುಮಾರು 28.41 ಲಕ್ಷ ರೂಪಾಯಿಗಳು. ಹಾಗಾಗಿ ಇದನ್ನು ವಿಶ್ವದ ಅತ್ಯಂತ ದುಬಾರಿ ವೈನ್ ಎಂದೂ ಕರೆಯುತ್ತಾರೆ.
ಈ ವೈನ್ನ ಹೆಸರು ಐಸೆನ್ಸಿಯಾ 2008 ಡಿಸೆಂಟರ್. ‘ಐಸೆನ್ಸಿಯಾ 2008 ಡಿಸೆಂಟರ್’ ಬಗ್ಗೆ ಅತ್ಯಂತ ವಿಶೇಷವಾದ ವಿಷಯವೆಂದರೆ ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ತಯಾರಿಸಲಾಗುತ್ತದೆ. ಇಲ್ಲಿಯವರೆಗೆ, ಈ ವೈನ್ನ ಕೇವಲ 20 ಬಾಟಲಿಗಳನ್ನು ಮಾತ್ರ ತಯಾರಿಸಲಾಗಿದ್ದು, ಅದರಲ್ಲಿ 11 ಬಾಟಲಿಗಳನ್ನು ಮಾರಾಟ ಮಾಡಲಾಗಿದೆ. ‘ಐಸೆನ್ಸಿಯಾ 2008 ಡಿಸೆಂಟರ್’ ನ ಪ್ಯಾಕಿಂಗ್ ಕೂಡ ಬಹಳ ಆಕರ್ಷಕವಾಗಿದೆ. ಈ ವೈನ್ನ ಪ್ರತಿಯೊಂದು ಬಾಟಲಿಯನ್ನು ವಿಶಿಷ್ಟವಾದ ಕಪ್ಪು ಬಣ್ಣದ ಪೆಟ್ಟಿಗೆಯಲ್ಲಿ ಇರಿಸಲಾಗುತ್ತದೆ. ಅದು ಸ್ವಿಚ್ ಹೊಂದಿದ್ದು, ಇದು ಬಾಟಲಿಯನ್ನು ಇನ್ನಷ್ಟು ವಿಶೇಷವಾಗಿ ಕಾಣುವಂತೆ ಮಾಡಿದೆ. ಇದರ ಮತ್ತೊಂದು ವಿಶೇಷವೆಂದರೆ ಯಾವುದೇ ಬಾಟಲಿಯು ಒಂದೇ ರೀತಿ ಇರುವುದಿಲ್ಲ, ಪ್ರತಿ ಬಾಟಲಿಯನ್ನು ವಿಶೇಷ ರೀತಿಯಲ್ಲಿ ತಯಾರಿಸಲಾಗುತ್ತದೆ.
ಈ ವೈನ್ ಅನ್ನು 2008 ರಲ್ಲಿ ತಯಾರಿಸಲಾಯಿತು, ಇದನ್ನು ಹಲವು ವರ್ಷಗಳ ನಂತರ ಬಾಟಲಿಯಲ್ಲಿ ತುಂಬಿಸಲಾಯಿತು. ಕಂಪನಿಯ ಜನರಲ್ ಮ್ಯಾನೇಜರ್ ಜೊಲ್ಟನ್ ಕೊವಾಕ್ಸ್ ಪ್ರಕಾರ, ‘ಐಸೆನ್ಸಿಯಾ 2008 ಡಿಸೆಂಟರ್’ ಅನ್ನು ವೈನ್ ಸಿದ್ಧವಾದ ಎಂಟು ವರ್ಷಗಳ ನಂತರ ಬಾಟಲಿಯಲ್ಲಿ ಪ್ಯಾಕ್ ಮಾಡಲು ಸೂಕ್ತವೆಂದು ಪರಿಗಣಿಸಲಾಗಿದೆ. ‘ಐಸೆನ್ಸಿಯಾ 2008 ಡಿಸೆಂಟರ್’ ನ ಮುಕ್ತಾಯ ದಿನಾಂಕ 2300. ಅಂದರೆ ಜನರು ಬಯಸಿದರೆ ಅದನ್ನು 80 ವರ್ಷಗಳವರೆಗೆ ಇರಿಸಿಕೊಳ್ಳಬಹುದು. ಹಂಗೇರಿಯ ಟೋಕಾಜ್ ವೈನ್ ಪ್ರದೇಶದಲ್ಲಿ ಈ ಮದ್ಯವನ್ನು ಉತ್ಪಾದಿಸಲಾಗುತ್ತದೆ. ಇದು ಬುಡಾಪೆಸ್ಟ್ನ ಈಶಾನ್ಯದಲ್ಲಿದ್ದು, ಇದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿದೆ. ವೈನ್ ವಿಶೇಷತೆಯೆಂದರೆ ಕೇವಲ ಒಂದು ಟೀ ಚಮಚ ವೈನ್ ಉತ್ಪಾದಿಸಲು ಒಂದು ಕಿಲೋಗ್ರಾಂ ಮಾಗಿದ ಅಸ್ಜು ದ್ರಾಕ್ಷಿಯನ್ನು ಬಳಸಲಾಗುತ್ತದೆ. 28.41 ಲಕ್ಷ ರೂ. ಮೌಲ್ಯದ ಈ ವೈನ್ ಬಗ್ಗೆ ನಿಮ್ಮ ಅಭಿಪ್ರಾಯವೇನು? ಈ ಕೆಳಗಿನ ಕಾಮೆಂಟ್ ವಿಭಾಗದಲ್ಲಿ ನಮಗೆ ತಿಳಿಸಿ.