ಕನಸುಗಾರನ ಕನಸು ನನಸಾಗುವ ಸಂದರ್ಭ ಬಂದಿದೆಯೇ.?

0
267

ಕಿಚ್ಚ ಸುದೀಪ್, ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷಾ ಚಿತ್ರರಂಗದಲ್ಲು ಹೆಸರು ಮಾಡುತ್ತಿರುವ ಅಸಾದ್ಯ ಪ್ರತಿಭೆ. ಕನ್ನಡದಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸಾಕಷ್ಟು ಹೆಸರು ಮಾಡುತ್ತಿದೆ. ಇದಕ್ಕೆ ಮುಖ್ಯ ಕಾರಣ ಕಳೆದ ಆರು ಸೀಸನ್ನಿಂದಲು ಸುದೀಪ್ ಅವರು ನಿರೂಪಣೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿರುವುದು ಎಂದರೆ ತಪ್ಪಾಗಲಾರದು. ಸದ್ಯ ಬಿಗ್ ಬಾಸ್ 7’ರ ಪ್ರೋಮೋ ಶೂಟ್ ನಡೆಯುತ್ತಿದ್ದು, ಕಿಚ್ಚ ಅವರು ಡಿಫರೆಂಟ್ ಲುಕ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸೀಸನ್ ಅಕ್ಟೋಬರ್ ಎರಡನೇ ವಾರದಿಂದ ಪ್ರಸಾರವಾಗಲಿದೆ.

ಪೈಲ್ವಾನ್ ಕಲೆಕ್ಷನ್ ಬಗ್ಗೆ ಹೇಳೋದಾದರೆ ,ಸಾಕಷ್ಟು ನಿರೀಕ್ಷೆ ಮತ್ತು ಟ್ರೆಂಡ್ ಸೆಟ್ ಮಾಡಿದಂತಹ ಫ್ಯಾನ್ ಇಂಡಿಯಾ ಮೂವಿ ಪೈಲ್ವಾನ್ ವಿಶ್ವದಾದ್ಯಂತ ಬಿಡುಗಡೆಯಾಗಿ ದಾಖಲೆ ಬರೆಯುತ್ತಿದೆ. ಒಂದಿಷ್ಟು ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳಲ್ಲಿ ಮೂವಿ ಬಗ್ಗೆ ನೆಗೆಟಿವ್ ರಿವ್ಯೂ ಕೊಡುತ್ತಿದ್ದರೂ ಸಹ ಇದನ್ನು ಲೆಕ್ಕಿಸದ ಪ್ರೇಕ್ಷಕರು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಸದ್ಯ ಪೈಲ್ವಾನ್ ಚಿತ್ರ ಪಂಚ ಭಾಷೆಯಲ್ಲಿಯೂ ಉತ್ತಮ ಮಟ್ಟದ ಕಲೆಕ್ಷನ್ ಮಾಡುತ್ತಿದೆ. ಗುರುವಾರ ಬಿಡುಗಡೆಯಾದ ಮೊದಲ ದಿನದ ಕಲೆಕ್ಷನ್ ಕನ್ನಡದಲ್ಲಿ ಹತ್ತು ಕೋಟಿ ಮುಟ್ಟಿದೆ. ಹಾಗೆಯೇ ತೆಲುಗಿನಲ್ಲಿ ಐದು ಕೋಟಿ, ತಮಿಳಿನಲ್ಲಿ ಆರು ಕೋಟಿ,ಹಾಗೆ ಮಲಯಾಳಂನಲ್ಲಿ ನಾಲ್ಕು ಕೋಟಿ ಬಾಚುವ ಮೂಲಕ ಗಲ್ಲಾಪೆಟ್ಟಿಗೆಯಲ್ಲಿ ಹೆಸರು ಮಾಡುತ್ತಿದೆ. ಇನ್ನು ಹಿಂದಿಯಲ್ಲಿ ಸ್ಟಾರ್ ನಟರ ಸಿನಿಮಾಗಳು ಬಿಡುಗಡೆಯಾಗಿದ್ದು, ಇದರ ನಡುವೆಯು ಪೈಲ್ವಾನ್ ತಮ್ಮ ಶಕ್ತಿಯನ್ನು ತೋರಿಸುವ ಮುಖಾಂತರ ನಾಲ್ಕು ಕೋಟಿಯನ್ನು ಬಾಚಿದೆ.
ಒಟ್ಟಾರೆ ಸಿನಿಮಾದ ಮೊದಲ ದಿನದ ಕಲೆಕ್ಷನ್ ಮೂವತ್ತು ರಿಂದ ಮೂವತ್ತಾಮೂರು ಕೋಟಿ ಮು‍ಟ್ಟಿದೆಯಂತೆ.

ಇದಕ್ಕೂ ರವಿಚಂದ್ರನ್ ಅವರ ಕನಸಿಗೂ ಏನು ಕಾರಣ ಅನ್ಕೊತ್ತಿದ್ದಿರಾ? ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಯಾವಾಗಲೂ ಸುದೀಪ್ ಅವರು ನನ್ನ ಪ್ರಥಮ ಪುತ್ರ ಎಂದು ಹೇಳುತ್ತಿರುತ್ತಾರೆ.
ಹಾಗೆಯೇ ರವಿಚಂದ್ರನ್ ಅವರು ಏನೇ ಹೇಳಿದರೂ ಸುದೀಪ್ ಅವರು ಇಲ್ಲ ಎಂದು ಹೇಳುವುದಿಲ್ಲ.
ಪೈಲ್ವಾನ್ ಚಿತ್ರದ ಪ್ರಿ-ರಿಲೀಸ್ ಸಮಯದಲ್ಲಿ, ನನ್ನ ಮಗನ ಚಿತ್ರ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೂರು ಕೋಟಿ ಹಣ ಗಳಿಸುವುದರ ಮೂಲಕ ದಾಖಲೆ ಬರೆಯುತ್ತದೆ ಎಂದು ಹೇಳಿದ್ದರು.

ಅವರ ಕನಸಿನಂತೆ ಪೈಲ್ವಾನ್ ಸಿನಿಮಾ ಮೊದಲ ದಿನವೇ ಮೂವತ್ತು ಕೋಟಿಗೂ ಹೆಚ್ಚು ಹಣ ಗಳಿಸುವುದರ ಮೂಲಕ , ರವಿಚಂದ್ರನ್ ಅವರ ಕನಸನ್ನು ನನಸು ಮಾಡುವಂತೆ ಕಾಣುತ್ತಿದೆ. ಒಟ್ಟಾರೆ ಸಿನಿಮಾ ನೂರು ಕೋಟಿ ಗಳಿಸುತ್ತದೆ ಎಂದು ಕೆಲವು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ ಅದು ಶೀಘ್ರವೇ ಆಗಲಿ ಎಂಬುದು ನಮ್ಮ ಆಶಯ ಕೂಡ.

LEAVE A REPLY

Please enter your comment!
Please enter your name here