ಬಡವರ ಪಾಲಿನ ಸಂಜೀವಿನಿ ಡಾ.ಬಿ.ಎಫ್.ದಂಡಿನ ಅವರು

0
238

ಉತ್ತರ ಕರ್ನಾಟಕದ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ಆಶೋತ್ತರಗಳನ್ನು ಈಡೇರಿಸಿದ ಏಕೈಕ ಸಂಸ್ಥೆ ಗದುಗಿನ ಕನಕದಾಸ ಶಿಕ್ಷಣ ಸಮಿತಿ.

ಡಾ.ಬಿ.ಎಫ್.ದಂಡಿನ ಅವರು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿ ವೈಯಕ್ತಿಕ ರಿಸ್ಕ್ ತೆಗೆದುಕೊಂಡು ಹುಟ್ಟು ಹಾಕಿದ ಸಂಸ್ಥೆಯನ್ನು ಹಗಲಿರುಳು ಹೋರಾಟ ಮಾಡಿ ಉಳಿಸಿ ಬೆಳೆಸಿದರು.

ಎಂಬತ್ತೈದರ ಹರೆಯದಲ್ಲೂ ಬತ್ತದ ಉತ್ಸಾಹ. ಅದ್ಭುತ ಆರೋಗ್ಯ, ಮಾತುಕತೆ, ಆಡಳಿತ ಎಲ್ಲದರಲ್ಲೂ ತಮ್ಮದೇ ಲೆಕ್ಕಾಚಾರ.ಪಟ್ಟು ಹಿಡಿದು ಕೆಲಸ ಮಾಡುವ ಜಾಣತನ.

ನಾನು ಉಪನ್ಯಾಸಕನಾಗಿ ಕಾಲೇಜು ಸೇರಿದ ದಿನಗಳಲ್ಲಿ ನಮ್ಮ ಜಿಲ್ಲೆಯ ಸಾವಿರಾರು ವಿದ್ಯಾರ್ಥಿಗಳು ಕೆವಿಎಸ್ಆರ್ ಮೂಲಕ Education ಓದಿ ಶಿಕ್ಷಕರಾಗಿ ಸೇವೆಯಲ್ಲಿದ್ದಾರೆ.

ಡಿ.ಎಡ್. ಸೀಟ್ ಸಿಗದ ವಿದ್ಯಾರ್ಥಿಗಳಿಗೆ ಈ ಕೋರ್ಸ್ ಮೆಡಿಕಲ್ ಸೀಟಿಗಿಂತಲೂ ಮಹತ್ವದ್ದಾಗಿತ್ತು.
ಬಿ.ಎಡ್. ಕಾಲೇಜು ಸ್ಥಾಪಿಸುವದರ ಮೂಲಕ ಅನೇಕ ಕೋರ್ಸುಗಳನ್ನು ನಂತರ ಆರಂಭಿಸಿದರು.

ಏನಿದ್ದರೂ ಅವರದು ಏಕಾಂಗಿ ಹೋರಾಟ. ಹಗಲು ರಾತ್ರಿ ಸಂಸ್ಥೆ ಬೆಳೆಸುವ ಚಿಂತನೆ ಚಿಂತೆ.
ಗೆಳೆಯರು, ಹವ್ಯಾಸಗಳೇ ಇಲ್ಲದ ಸಂತನ ಬದುಕು.
ರಾಜಕಾರಣದ ನಂಟಿದ್ದರೂ ಸಕ್ರಿಯ ರಾಜಕಾರಣದ ಸಹವಾಸದಿಂದ ಅಂತರ ಕಾಪಾಡಿಕೊಳ್ಳುವ ಸೂಕ್ಷ್ಮತೆ.

ಪ್ರತಿಯೊಂದು ವಿಷಯದಲ್ಲಿ ನಿಗಾ ಇಟ್ಟುಕೊಂಡು ಕೆಲಸ ಮಾಡುತ್ತಾರೆ. ಪ್ರತಿಭೆಗಳನ್ನು ಗುರುತಿಸಿ ಬೆಳೆಸಿದರೂ ಹದ್ದು ಮೀರಿ ವರ್ತಿಸದಂತೆ ಲಗಾಮು ಹಾಕುವ ಸಾಮರ್ಥ ಮೆಚ್ಚುವಂತಹದು.
ಸಂಸ್ಥೆಯ ಉದ್ಯೋಗಿಗಳ ವೈಯಕ್ತಿಕ ನಡೆಯ ಬಗ್ಗೆ ಸಮಗ್ರ,ಸೂಕ್ಷ್ಮ ಗ್ರಹಿಕೆ ಇರುತ್ತದೆ.

ಸಂಸ್ಥೆಯಲ್ಲಿ ನಾನೊಬ್ಬ ಸಾಮಾನ್ಯ ಉದ್ಯೋಗಿ ಆದರೂ ನನ್ನ ಶಕ್ತಿ ಸಾಮರ್ಥ್ಯದ ನಿಷ್ಟುರ ವಿಮರ್ಶೆ ಮಾಡುತ್ತಾರೆ. ನೇರವಾಗಿ ಮಾತನಾಡುವ ವ್ಯಕ್ತಿಗಳನ್ನು ಗುರುತಿಸಿ ಗೌರವಿಸುತ್ತಾರೆ. ಇವರ ಜಾತ್ಯಾತೀತ ಧೋರಣೆಯ ಸ್ವಭಾವ ನನಗೆ ಹೆಚ್ಚು ಆಕರ್ಷಕ.

ಅವರ ಮುಂದೆ ಸುಳ್ಳು ಹೇಳಿ ಪಾರಾಗುವುದು ಅಸಾಧ್ಯ.
ಹೇಳುವ ಸುಳ್ಳುಗಳನ್ನು ಅಷ್ಟೇ ನಿಧಾನವಾಗಿ ಕೇಳಿಸಿಕೊಂಡು ಸತ್ಯ ಹೊರ ಹಾಕಿಸುವ ವಿಶೇಷ ಜಾಣ್ಮೆ ಇವರ ವಿಶೇಷತೆ
.

ಹಣ,ಅಧಿಕಾರ, ಆರೋಗ್ಯ ಎಲ್ಲಾ ಹೇರಳವಾಗಿ ಇದೆಯಾದರೂ ಸರಳವಾಗಿ ಬದುಕುತ್ತಾರೆ.
ಊಟ ಹಾಗೂ ಹಣದ ವಿಷಯದಲ್ಲಿ ತುಂಬ ಕಟ್ಟುನಿಟ್ಟು‌. ಪ್ರತಿಯೊಂದನ್ನು ಅಳೆದು ತೂಗುವ ಲೆಕ್ಕಾಚಾರ.
ಯಾವುದೇ ವಿಷಯಕ್ಕು ಉದ್ವೇಗಕ್ಕೆ ಒಳಗಾಗದ ಶಾಂತ, ನಿರ್ಲಿಪ್ತ ಮನಸ್ಥಿತಿ.

ಎಂಬತ್ತೈದರ ಈ ವಯಸ್ಸಿನಲ್ಲಿ ಕನ್ನಡಕ ಇಲ್ಲದೆ ಓದುತ್ತಾರೆ, ಕ್ಯಾಲ್ಕುಲೇಟರ್ ಇಲ್ಲದೆ ಲೆಕ್ಕ ಮಾಡುತ್ತಾರೆ. ಲಿಫ್ಟ್ ಇಲ್ಲದೆ ಬಹು ಮಹಡಿ ಕಟ್ಟಡಗಳ ಏರುತ್ತಾರೆ. ಇದಕ್ಕಿಂತ ಪುಣ್ಯ ಇನ್ನೇನು ಬೇಕು.

ಹಣವನ್ನು ನೀರಿನಂತೆ ಗಳಿಸಿದರೂ ತೀರ್ಥದಂತೆ ಬಳಸಬೇಕು ಎಂಬ ಡಾ.ಎಂ.ಎಂ.ಕಲಬುರ್ಗಿ ಅವರ ಮಾತಿಗೆ ಅನ್ವರ್ಥಕ ಡಾ.ದಂಡಿನ ಅವರು.

ಈಗ ಸಂಸ್ಥೆ ತನ್ನ ಬಳ್ಳಿಯನ್ನು ಇಡೀ ರಾಜ್ಯದ ತುಂಬಾ ವ್ಯಾಪಿಸಿದೆ.
ಹುಬ್ಬಳ್ಳಿ, ಬೆಳಗಾವಿ ಹಾಗೂ ಗದುಗಿನ ಗ್ರಾಮೀಣ ಪ್ರದೇಶಗಳ ತುಂಬ ಕನಕದಾಸ ಶಿಕ್ಷಣ ಸಂಸ್ಥೆಯ ಕಂಪಿನ ಇಂಪು.
ಸಾವಿರಾರು ಉದ್ಯೋಗಿಗಳು, ಲಕ್ಷಾಂತರ ವಿದ್ಯಾರ್ಥಿಗಳ ಜನ ಮಾನಸದಲ್ಲಿ ದಂಡಿನ ಸರ್ ಅವರ ಶ್ರಮದ ಹೊಳಪಿದೆ.

ಕಳೆದ ವರ್ಷ ಅನೇಕ ಸಲ ಸಾವಿರಾರು ಮೈಲುಗಳು ಇವರೊಂದಿಗೆ ಪಯಣಿಸಿದ ಅದೃಷ್ಟ ನನ್ನದು.
ಅಗಾಧ ಸ್ಮರಣ ಶಕ್ತಿ. ಅನೇಕ ಹಳೆಯ ಅನುಭವಗಳನ್ನು ರಸವತ್ತಾಗಿ ವಿವರಿಸಿದ್ದು ನನಗೆ ಈಗಲೂ ನೆನಪಿದೆ.

ಸಂಸ್ಥೆಯ ಸಾಕ್ಷ್ಯಚಿತ್ರಕ್ಕೆ ಕಂಠದಾನ ಮಾಡಿದ ಸುದೈವ ನನ್ನದು.
ಬೆಂಗಳೂರು ದೂರದರ್ಶನ ಚಂದನ ವಾಹಿನಿಯ ಬೆಳಗು ಕಾರ್ಯಕ್ರಮದ ಸಂದರ್ಶನ ಒಂದು ಅವಿಸ್ಮರಣೀಯ ದಾಖಲೆ.

ನನ್ನ ಮೂರು ದಶಕದ ವೃತ್ತಿ ಬದುಕಿನಲ್ಲಿ ಅನೇಕರನ್ನು ಕಂಡಿದ್ದೇನೆ, ಮಾತನಾಡಿಸಿ ಒಡನಾಟ ಇಟ್ಟುಕೊಂಡಿದ್ದೇನೆ.
ಆದರೆ Dr.B.F.Dandin sir is always special inspiration for me to move ahead…

#ಸಿದ್ದು_ಯಾಪಲಪರವಿ

LEAVE A REPLY

Please enter your comment!
Please enter your name here