ಅನೇಕ ದುಬಾರಿ ವಸ್ತುಗಳನ್ನು ಪ್ರಪಂಚದಾದ್ಯಂತ ಹರಾಜು ಮಾಡಲಾಗುತ್ತದೆ. ಅದನ್ನು ನೀವು ಕೇಳಿರಬೇಕು, ನೋಡಿರಬೇಕು ಅಥವಾ ಓದಿರಬೇಕು. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕುರಿಗಳಿಗೆ ಸಾಮಾನ್ಯವಾಗಿ ಸಾವಿರಾರೂ ರೂ. ಬೆಲೆ ಇರುತ್ತದೆ. ಆದರೆ ಇಂದು ನಾವು ನಿಮಗೆ ಹೇಳಲು ಹೊರಟಿರುವ ಕುರಿಯ ಬೆಲೆ ಕೇಳಿದರೆ ನಂಬಲು ಕಷ್ಟವಾಗುತ್ತದೆ. ಹೌದು ಆ ಕುರಿಯನ್ನು 490,651 ಡಾಲರ್’ಗೆ ಹರಾಜು ಮಾಡಲಾಗಿದೆ. ಅಂದರೆ ಭಾರತೀಯ ಕರೆನ್ಸಿಯಲ್ಲಿ ಇದರ ಬೆಲೆ ಸುಮಾರು ಮೂರೂವರೆ ಕೋಟಿ ರೂ. ಹೌದು, ಈ ಕುರಿಯ ವಿಶೇಷತೆ ಏನು ಎಂದು ನಿಮಗೆ ಆಶ್ಚರ್ಯವಾಗುತ್ತಿರಬೇಕು. ಮೊದಲನೆಯದಾಗಿ ಇದು ವಿಶ್ವದ ಅತ್ಯಂತ ದುಬಾರಿ ಕುರಿ ಎಂದು ಹೇಳಲಾಗುತ್ತದೆ.
ಮೂಲಗಳಿಂದ ಪಡೆದ ಮಾಹಿತಿಯ ಪ್ರಕಾರ, ಈ ಕುರಿಗಳು ಟ್ಯಾಕ್ಸಲ್ ತಳಿಯಾಗಿದ್ದು, ಈ ಕಾರಣದಿಂದಾಗಿ ಅದರ ಬೆಲೆ ಕೋಟಿ ರೂ.ಆಗಿದೆ. ಹೌದು, ಇದು ಬಹಳ ಅಪರೂಪದ ಕುರಿ. ಅದರ ಬೆಲೆ ಯಾವಾಗಲೂ ಕೋಟಿ ರೂಪಾಯಿ. ಅಂದಹಾಗೆ, ಈ ಕುರಿ ತಳಿ ನೆದರ್ಲ್ಯಾಂಡ್ನ ಕರಾವಳಿಯಲ್ಲಿರುವ ಟೆಕ್ಸಲ್ ಎಂಬ ಸಣ್ಣ ದ್ವೀಪದಲ್ಲಿ ಕಂಡುಬರುತ್ತದೆ. ಇದನ್ನು ಡಬಲ್ ಡೈಮಂಡ್ ಎಂದೂ ಕರೆಯುತ್ತಾರೆ. ಇನ್ನು ಕೆಲವು ತಳಿಗಳು ಕೋಟಿ ರೂ.ಗೆ ಬೆಲೆ ಬಾಳಬಹುದು ಅಥವಾ ಅದನ್ನು ದಾಟುತ್ತದೆ.
ಇತ್ತೀಚೆಗೆ 6 ಲಕ್ಷ ರೂ.ಗೆ ಫಿಲೋಡೆಂಡ್ರಾನ್ ಮಿನಿಮಾ ಎಂಬ ಸಸ್ಯ ಮಾರಾಟವಾಗಿತ್ತು. ಇದು ಅತ್ಯಂತ ಅಪರೂಪದ ಸಸ್ಯವಾಗಿದ್ದು, ಆಗಸ್ಟ್ನಲ್ಲಿ ಇದು ದಾಖಲೆ ಬೆಲೆಗೆ ಮಾರಾಟವಾಯಿತು. ಈ ಸಸ್ಯವನ್ನು ನ್ಯೂಜಿಲೆಂಡ್ನಲ್ಲಿ 8150 ಯುಎಸ್ ಡಾಲರ್ಗೆ ಖರೀದಿಸಲಾಯಿತು. 8150 ಯುಎಸ್ ಡಾಲರ್ ಎಂದರೆ ಒಟ್ಟು ಬೆಲೆ 598,853 ರೂ. ಈ ಸಸ್ಯದ ಹೆಸರು ರಾಫಿಡೋಫೊರಾ ಟೆಟ್ರಾಸ್ಪೆರ್ಮಾ. ಇದನ್ನು ಫಿಲೋಡೆಂಡ್ರಾನ್ ಮಿನಿಮಾ ಎಂದೂ ಕರೆಯುತ್ತಾರೆ. ಈ ಸಸ್ಯವು ಹಸಿರು ಮತ್ತು ಹಳದಿ ಬಣ್ಣದ ನಾಲ್ಕು ಎಲೆಗಳನ್ನು ಹೊಂದಿದೆ. ಫಿಲೋಡೆಂಡ್ರಾನ್ ಮಿನಿಮಾ 14 ಸೆಂ.ಮೀ ಕಪ್ಪು ಕುಂಡದಲ್ಲಿ ನೆಡಲಾಗುತ್ತದೆ. ಇತ್ತೀಚೆಗೆ, ಈ ಸಸ್ಯವನ್ನು ಟ್ರೇಡ್ ಮಿ ಎಂಬ ಕಂಪನಿಯು ಮಾರಾಟ ಮಾಡಿದೆ. ಇವು ಸುಮಾರು ಮೂರು ಅಡಿ ಎತ್ತರಕ್ಕೆ ಬೆಳೆಯುತ್ತವೆ. ಆದರೆ ಅದರ ಅಗಲವು ಅದರ ಎತ್ತರಕ್ಕಿಂತ ಎರಡು ಪಟ್ಟು ಹೆಚ್ಚಾಗಬಹುದು. ಈ ಸಸ್ಯವು ಆರೈಕೆ ಮಾಡಲು ಸುಲಭವಾಗುವುದರ ಜೊತೆಗೆ, ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ.