ನಿಮಗೆ ಕಷ್ಟವಾದರೆ ಈ ನಾಲ್ಕು ಕಡೆ ಇರಬೇಡ

0
119

ಆಚಾರ್ಯ ಚಾಣಕ್ಯ ಅವರು ಹೇಳಿದ ಮಾತುಗಳು ಇಂದಿಗೂ ನಮ್ಮ ಬದುಕಿನಲ್ಲಿ ಹೆಚ್ಚು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಚಾಣುಕ್ಯರ ಒಂದೊಂದು ಮಾತು ಕೂಡ ನಮ್ಮ ಬದುಕಿನಲ್ಲಿ ಬೆಳಕು ತೋರುತ್ತದೆ. ಮನುಷ್ಯ ಎಂದಿಗೂ ಈ ನಾಲ್ಕು ಜಾಗದಲ್ಲಿ ನಿಲ್ಲಬಾರದು ಎಂದಿದ್ದಾರೆ. ಅಷ್ಟೇ ಅಲ್ಲದೇ, ಅದರ ಪರಿಣಾಮ ಮತ್ತು ಕಾರಣಗಳನ್ನು ತಿಳಿಸಿದ್ದಾರೆ.
ಮನುಷ್ಯ ಯಶಸ್ಸು ಕಾಣಲು ಅಥವಾ ಆನಂದದಿಂದ ಇರಬೇಕು ಅಂದರೆ ಈ ನಾಲ್ಕು ಜಾಗದಲ್ಲಿ ಇರಬಾರದು ಎಂದಿದ್ದಾರೆ. ಯಾವೊಬ್ಬ ವ್ಯಕ್ತಿಗೂ ಗೌರವ ಸಿಗದ ಜಾಗದಲ್ಲಿ ಎಂದಿಗೂ ವ್ಯಕ್ತಿ ನಿಲ್ಲಬಾರದು. ವ್ಯಕ್ತಿ ಸಮಾಜದಲ್ಲಿ ಎತ್ತರಕ್ಕೆ ಬೆಳೆಯಬೇಕಾದರೆ ಅಥವಾ ಯಶಸ್ವಿಯುತವಾದ ಬದುಕನ್ನು ನಡೆಸಬೇಕಾದರೆ, ಗೌರವದಿಂದ ಬದುಕುವುದು ಮುಖ್ಯವಾಗುತ್ತದೆ. ಎಲ್ಲಿ ವ್ಯಕ್ತಿಗೆ ಗೌರವ ಮತ್ತು ಪ್ರೀತಿ ಸಿಗುತ್ತದೆಯೋ ಅಲ್ಲಿ ತನ್ನ ಅಸ್ಥಿತ್ವವನ್ನು ಕಂಡುಕೊಳ್ಳಬೇಕು.
ಎಲ್ಲಿ ನಿಮಗೆ ಹೊಸ ವಿಚಾರಗಳನ್ನು ಕಲಿಯಲು ವ್ಯಕ್ತಿಗೆ ಅವಕಾಶವಿಲ್ಲವೋ ಅಲ್ಲಿ ಒಂದು ಕ್ಷಣವೂ ನಿಲ್ಲಬಾರದು. ವ್ಯಕ್ತಿ ಯಾವಾಗಲೂ ಏನಾದರೂ ಹೊಸ ವಿಷಯವನ್ನು ಕಲಿಯುತ್ತಿರಬೇಕು. ಇದು ಕೇವಲ ನೀವು ಯಶಸ್ಸು ಗಳಿಸಲು ಮಾತ್ರವಲ್ಲದೇ, ನಿಮ್ಮ ಜೀವನವನ್ನು ನವೀನವಾಗಿ ಮತ್ತು ಸುಂದರವಾಗಿರಲು ಕಾರಣವಾಗುತ್ತದೆ. ಯಾವ ಜಾಗದಲ್ಲಿ ನಿಮಗೆಹೊಸದನ್ನು ಕಲಿಯಲು ಎಲ್ಲಿ ನಿಮಗೆ ಅವಕಾಶವಿಲ್ಲವೋ ಅಲ್ಲಿ ನಿಲ್ಲಬಾರದು. ಕಲಿಯಬೇಕು, ಉಳಿದವರಿಗೂ ಕಲಿಸಬೇಕು. ಇದರಿಂದ ನಿಮ್ಮ ಹೊಸ ಪೀಳಿಗೆಗೂ ಉತ್ತಮ ಭವಿಷ್ಯ ಸಿಗುತ್ತದೆ.
ಮನುಷ್ಯ ಸುಖ-ಶಾಂತಿಯಿಂದ ಬದುಕಲು ತನ್ನ ಭಾವನೆಗಳನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಬೇಕು. ಆಗ ಮಾತ್ರವೇ ಮನುಷ್ಯ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ. ತನ್ನವರು ವ್ಯಕ್ತಿಯನ್ನು ಅರ್ಥ ಮಾಡಿಕೊಂಡು ಬದುಕು ನಡೆಸದೇ ಇದ್ದ ಪಕ್ಷದಲ್ಲಿ ವ್ಯಕ್ತಿ ಕುಗ್ಗಿ ಹೋಗುವುದು ಸರ್ವೇ ಸಾಮಾನ್ಯ. ಮನುಷ್ಯ ತನ್ನ ಮಾತನ್ನು ಕೇಳುವವರು ಇಲ್ಲವಾದರೆ ಅಥವಾ ಅದಕ್ಕೆ ಪ್ರತಿಸ್ಪಂದಿಸದೇ ಇರುವ ಸ್ಥಳದಲ್ಲಿ ಎಂದಿಗೂ ಅಲ್ಲಿ ನಿಲ್ಲಬಾರದು.
ನೀವು ಮಾಡುವ ಕೆಲಸದಲ್ಲಿ ಖುಷಿ ಸಿಗದೇ ಹೋದರೆ ಅಥವಾ ನೀವು ಮಾಡುವ ಕೆಲಸದಲ್ಲಿ ನಿಮಗೆ ತೃಪ್ತಿ ಇಲ್ಲದಿದ್ದರೆ ಅಥವಾ ಆನಂದ ಕೊಡುತ್ತಿಲ್ಲ ಎಂದಾದರೆ ಅಲ್ಲಿ ನಿಲ್ಲುವುದು ಸರಿಯಲ್ಲ. ಯಾವುದೇ ಕೆಲಸವನ್ನು ಪ್ರೀತಿಯಿಂದ ಮಾಡಿದರೆ ಮಾತ್ರವೇ ಯಶಸ್ವಿ ಸಿಗುತ್ತದೆ. ಆದರೆ ಇತ್ತೀಚೆಗೆ ವ್ಯಕ್ತಿ ಬಯಸುವ ಕೆಲಸ ಸಿಗುವುದು ಕಷ್ಟ. ಆದರೆ ಸಿಕ್ಕ ಕೆಲಸವನ್ನು ಶ್ರದ್ದೆ ಮತ್ತು ಶ್ರಮವಹಿಸಿ ನಿರ್ವಹಿಸಿದರೆ ಮಾತ್ರವೇ ಯಶಸ್ಸು ಸಿಗುತ್ತದೆ. ನೀವು ಮಾಡುವ ಕೆಲಸದಲ್ಲೇ ತೃಪ್ತಿ ಪಡೆಯಲು ಪ್ರಯತ್ನಿಸಿ.
ಈ ನಾಲ್ಕು ಜಾಗದಲ್ಲಿ ಎಂದಿಗೂ ನಿಲ್ಲುವುದು ಒಳಿತಲ್ಲ. ಜೀವನದಲ್ಲಿ ಸುಖ-ಶಾಂತಿಯನ್ನು ಕಾಣಬೇಕಾದರೆ ಮೇಲೆ ಹೇಳಿದ ಜಾಗಗಳಲ್ಲಿ ನಿಲ್ಲದಿರುವುದೇ ಸೂಕ್ತ.

LEAVE A REPLY

Please enter your comment!
Please enter your name here