`ನಿನ್ನ ಮಕ್ಕಳ ತರನೇ ನನ್ನ ಮಗ ಬಂದಿದ್ದಾನೆ ನೋಡ್ಕೋ’ ಎಂದು ರಾಜ್ ಕುಮಾರ್ ಅವರಿಗೆ ಅಡ್ಡಬಿದ್ದ ಡಾಲಿಯ ಅಜ್ಜಿ !

0
1062

ಈಗ ಡಾಲಿಯಾಗಿ ಮೆರೆಯುತ್ತಿರುವ ಧನಂಜಯ್, ಒಂದು ಕಾಲದಲ್ಲಿ ಇವನ ಜೊತೆ ಸಿನಿಮಾ ಮಾಡಿದರೆ ಫ್ಲಾಪ್, ಇವನನ್ನು ನೋಡೋಕೆ ಜನ ಬರಲ್ಲ, ಐರನ್ ಲೆಗ್, ಹೀಗೆ ಅವಮಾನಗಳನ್ನು ಅನುಭವಿಸಿತ್ತಾ ಸಿನಿ ಪಯಣವನ್ನು ಸಾಗಿಸುತ್ತಿದ್ದರು.! ಇಂದಿಗೂ ಸಹ ಆ ಮಾತುಗಳು ಧನಂಜಯ್ ಅವರಿಗೆ ಕಾಡುತ್ತಿದೆ ಮತ್ತು ಆ ವಿಚಾರಗಳನ್ನು ನೆನೆದಾಗಲೆಲ್ಲಾ ಅವರಿಗೆ ತುಂಬ ನೋವು ಕೊಡುತ್ತಿದೆಯಂತೆ..!

 

ಹಾಗೆ ನೋಡುವುದಾದರೆ ಧನಂಜಯ್ ಅವರು ಬಹಳ ಅದೃಷ್ಟವಂತರು. ಯಾಕೆಂದರೆ ಯುವ ನಿರ್ದೇಶಕ, ರಂಗಭೂಮಿ ಮತ್ತು ಸ್ಯಾಂಡಲ್ ವುಡ್ ನ ಭರವಸೆ ನಿರ್ದೇಶಕರಿಂದ ಹಿಡಿದು ರಾಮ್ ಗೋಪಲ್ ವರ್ಮ ಅವರ ತನಕ ಕೆಲಸ ಮಾಡಿದ್ದಾರೆ. ಒಬ್ಬೊಬ್ಬ ನಿರ್ದೇಶಕನ ಬಳಿ ಒಂದೊಂದನ್ನು ಕಲಿತಿದ್ದಾರೆ. ಮತ್ತು ಒಳ್ಳೆಯ ಅನುಭವಗಳನ್ನು ಕಂಡಿದ್ದಾರೆ.. ಎಲ್ಲಾ ರೀತಿಯಾ ಅನುಭವಗಳು ಎಲ್ಲರಿಗೂ ಹೇಗೆ ಸಿಗುತ್ತೆ ಹೇಳಿ? ಅಂತಹದರಲ್ಲಿ ಇವರು ಅದೃಷ್ಟವಂತರೇ ತಾನೆ?

 

ಆದರೇ ಅದೇಕೋ ಏನೋ, ಸತತವಾಗಿ ಧನಂಜಯ ಅವರ ಸಿನಿಮಾಗಳು ಸೋಲನ್ನೇ ಅನುಭವಿಸುತ್ತಾ ಬಂದವು. ಅವರ ಅಭಿನಯ ಚೆನ್ನಾಗಿಯೇ ಇತ್ತು, ನೀಡಿರುವ ಪಾತ್ರಕ್ಕೆ ನ್ಯಾಯ ಓದಗಿಸಿ ಕೊಡುತ್ತಿದ್ದರು. ಆದರೂ ಕೂಡ ಅವರ ಸಿನಿಮಾಗಳು ಹೇಳಿಕೊಳ್ಳುವ ಯಶಸ್ಸು ತಂದು ಕೊಡುತ್ತಿರುಲಿಲ್ಲ. ಅಲ್ಲದೇ ಗಾಂಧಿ ನಗರದಲ್ಲಿ ಅಷ್ಟಾಗಿ ಗೌರವವನ್ನು ಕೂಡ ಕೊಡುತ್ತಿರಲಿಲ್ಲ. ಯಾವುದೋ ಚಿತ್ರೀಕರಣದಲ್ಲಿ ಒಬ್ಬ ನಿರ್ದೇಶಕರು ಧನಂಜಯ ಅವರನ್ನು ಬೋಳಿಮಗ ಎಂದು ಕರೆದಿದ್ದು ಉಂಟು. ಇವೆಲ್ಲಾ ವಿಚಾರಗಳಿಗೆ ಅವರು ಬಹಳ ನೊಂದು ಕೊಂಡಿದ್ದರು.!

 

ಧನಂಜಯ್ ಅವರು ಇಂಜಿನಿರಿಂಗ್ ಮುಗಿಸಿ ಇನ್ಫೋಸಿಸ್ ಅಲ್ಲಿ ಕೂಡ ಕೆಲಸ ಮಾಡುತ್ತಿದ್ದರು. ಆದರೆ ಅವರ ಮನಸ್ಸಿನಲ್ಲಿ ತಾನೊಬ್ಬ ನಟನಾಗಬೇಕೆಂಬ ಹಂಬಲ ಹಾಗೆಯೇ ಉಳಿದಿತ್ತು. 1 ವರುಷಗಳ ಕಾಲ ಇನ್ಫೋಸಿಸ್ ನಲ್ಲಿ ಕೆಲಸ ಮಾಡಿ ನಂತರ ರಿಸೈನ್ ಮಾಡಿ ಸಿನಿಮಾ ರಂಗದ ಕಡೆ ಮುಖ ಮಾಡಿದರು. ನಂತರ ನಾಟಕಗಳಲ್ಲಿ ಅಭಿನಯಿಸಲು ಮುಂದಾದರು, ಇದಾದ ಮೇಲೆ ನಿರ್ದೇಶಕ ಗುರುಪ್ರಸಾದ್ ಅವರ ಪರಿಚಯವಾಗುತ್ತದೆ. ಅವರಿಂದ ಧನಂಜಯ್ ಬಹಳ ವಿಚಾರವನ್ನು ಕಲಿತ್ತಿದ್ದಾರೆ.

 

ಮೂರು ವರ್ಷಗಳ ಕಾಲ ಗುರುಪ್ರಸಾದ್ ಅವರ ಗರಡಿಯಲ್ಲಿ ಬೆಳೆದರು. ಅವಾಗ ಮೂಡಿ ಬಂದಿದ್ದೆ ಡೈರೆಕ್ಟರ್ ಸ್ಫೆಶಲ್ ಸಿನಿಮಾ.. ಸಿನಿಮಾ ಬಿಡುಗಡೆಗಾಗಿ ಎದುರು ನೋಡುತ್ತಾ ಕುಳಿತಿದ್ದರು. ನಂತರ ಮೂರು ವರ್ಷಗಳ ಕಾಲ ಹತಾಶೆಗೆ ಒಳಗಾಗಿದ್ದರು. ಅ ಸಮಯದಲ್ಲಿ ಬರೆದು ನಟಿಸಿದ್ದೆ ಜಯನಗರ ಫೋರ್ತ್ ಬ್ಲಾಕ್ ಎಂಬ ಕಿರು ಸಿನಿಮಾ, ಈ ಕಥೆಯನ್ನು ಗುರುತಿಸಿದ ರಾಮ ರಾಮರೇ ಚಿತ್ರದ ನಿರ್ದೇಶಕ ಸತ್ಯ ಪ್ರಕಾಶ್ ಅವರು, ಧನಂಜಯ್ ಅವರ ಜಯನಗರ ಫೋರ್ತ್ ಬ್ಲಾಕ್ ಕಿರುಚಿತ್ರವನ್ನು ನಿರ್ದೇಶುತ್ತಾರೆ.! ಮತ್ತು ಯೂಟ್ಯೂಬ್ ನಲ್ಲಿ ಈ ಚಿತ್ರ ದೊಡ್ಡದೊಂದು ಸಂಚಲನವನ್ನು ಮೂಡಿಸುತ್ತದೆ.!

 

ಸತತ ಸೋಲುಗಳನ್ನು ಕಂಡಿದ್ದ ಧನಂಜಯ ಮತ್ತೆ ಜಿಮ್ ಶುರು ಮಾಡುತ್ತಾರೆ. ನಾನೇ ಏನಾದರು ಬರೆಯಬೇಕು, ನಾನೇ ಏನಾದರು ಮಾಡಬೇಕು ಅಂದುಕೊಂಡು ಕೆಲಸವನ್ನು ಪ್ರಾರಂಭಿಸುತ್ತಾರೆ. ಆ ಸಂಧರ್ಭದಲ್ಲಿ ಬಂದಿದ್ದೆ ಟಗರು ಚಿತ್ರದ ಆಫರ್ ! ಸೂರಿ ಅವರ ಜೊತೆ ಯಾವಗಲು ಸಿನಿಮಾ ವಿಚಾರವಾಗಿ ಮಾತು ಕಥೆಗಳನ್ನು ನಡೆಸುತ್ತಿದ್ದರು. ಒಮ್ಮೆ ನಿರ್ದೇಶಕ ಸೂರಿ ಅವರು ಧನಂಜಯ ಅವರಿಗೆ ನೆಗೆಟೀವ್ ರೋಲ್ ಮಾಡುತ್ತೀಯ? ಎಂದು ಕೇಳಿದ್ದಾರೆ.. ಒಂದು ಕ್ಷಣ ಯೋಚನೆ ಮಾಡದ ಧನಂಜಯ್, ಮಾಡ್ತೀನಿ ಸಾರ್
ಎಂದಿದ್ದಾರೆ ! ಯಾಕೆಂದರೆ ಎಲ್ಲಾ ಪಾತ್ರಗಳನ್ನು ಪ್ರಯತ್ನಿಸಿದ್ದರು, ಯಾವುದೂ ವರ್ಕ್‍ಔಟ್ ಆಗಿಲ್ಲಾ.. ಇದರಲ್ಲಿ ಏನಾದರು ಅಗುತ್ತದೆಯೇನೋ ಎಂಬ ನಂಬಿಕೆ ಅವರದ್ದು.

 

ಸಿನಿಮಾ ಬಿಡುಗಡೆಯಾಗುತ್ತದೆ. ಸಿನಿಮಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತದೆ. ತನಗೆ ಗೊತ್ತಿಲ್ಲದೆ, ಧನಂಜಯ ಅವರು ಡಾಲಿಯಾಗಿ ದೊಡ್ಡ ಮಟ್ಟದ ಹೆಸರನ್ನು ಸಂಪಾಧಿಸುತ್ತಾರೆ. ಅವರ ನಿರೀಕ್ಷೆಗೂ ಮೀರಿದ ಹೆಸರು ಟಗರು ತಂದು ಕೊಡುತ್ತದೆ. ಟಗರು ಸಿನಿಮಾ ದೊಡ್ಡ ಮಟ್ಟದ ಹೆಸರನ್ನು ತಂದಕೊಡಲು ಡಾಲಿ ಪಾತ್ರವೇ ಮೂಖ್ಯ ಕಾರಣ ಎಂದರೇ ತಪ್ಪಾಗಲಾರದು..! ಸಿನಿಮಾದ ಪಾತ್ರಕ್ಕೆ ಸೈಮಾ ಅವಾರ್ಡ್ ಕೂಡ ಲಬಿಸುತ್ತದೆ. ಅಷ್ಟು ಸೋಲನ್ನು ಕಂಡಿದ್ದರು, ತಾಳ್ಮೆಯನ್ನು ಕಳೆದುಕೊಳ್ಳದ ಡಾಲಿ ಧನಂಜಯ್ ಇಂದು ಗೆಲುವಿನ ನಗೆ ಬೀರಿ ಉನ್ನತ ಶಿಖರದೆತ್ತರಕ್ಕೇರಿದ್ದಾರೆ.!

 

ಟಗರು ಸಿನಿಮಾ ಮುಗಿದ ಬಳಿಕ ಶಿವಣ್ಣ ಮತ್ತು ಡಾಲಿ ಅವರ ನಡುವೇ ವಿಶೇಷವಾದ ಸಂಬಂಧ ಬೆಳೆಯುತ್ತದೆ. ಶಿವಣ್ಣ ಯಾವುದೇ ರಾಲಿಗೆ ಹೋದರು ಕೂಡ ಡಾಲಿಯನ್ನು ಕರೆದುಕೊಂಡು ಹೋಗುತ್ತಿರುತ್ತಾರೆ. ಟಗರು ಸಿನಿಮಾದ 100 ನೇ ದಿನದ ಸಮಾರಂಭದಲ್ಲಿ ಶಿವಣ್ಣ, ಧನಂಜಯ್ ನನ್ನ ತಮ್ಮ, ನಾವು ಮೂರು ಜನ ಮಕ್ಕಳಲ್ಲ ನಾಲ್ಕು ಜನ ಎಂದು ಹೇಳಿದರು. ಈ ಮಾತುಗಳನ್ನು ಕೇಳಿ ಡಾಲಿ ಧನಂಜಯ್ ಅವರು ಬಹಳ ಭಾವುಕರಾಗುತ್ತಾರೆ.!

 

ಒಮ್ಮೆ ಧನಂಜಯ್ ಅವರ ಅಜ್ಜಿ ರಾಜ್‍ಕುಮಾರ್ ಅವರ ಸಮಾಧಿಗೆ ಹೋಗಿರುತ್ತಾರೆ. ಅಂದು ಅಪ್ಪಾಜಿ ಅವರ ಕಾರ್ಯ, ಪಾರ್ವತಮ್ಮ ರಾಜುಕುಮಾರ್ ಸೇರಿದಂತೆ ಕುಟುಂಬಸ್ಥರೆಲ್ಲ ಸೇರಿರುತ್ತಾರೆ. ಜನಸಾಮಾನ್ಯರನ್ನು ಒಳಗೆ ಬಿಡುತ್ತಿರಲಿಲ್ಲ.. ಧನಂಜಯ ಅವರ ಅಜ್ಜಿ ಒಳಗೆ ಹೋಗಬೇಕೆಂದು ಅಂದುಕೊಂಡಿರುತ್ತಾರೆ. ಆದರೆ ಪೋಲಿಸ್ ಬಿಡುವುದಿಲ್ಲ. ತಕ್ಷಣ ಅಜ್ಜಿ ಜೊತೆಗಿದ್ದ ಧನಂಜಯ್ ಅವರ ಭಾವ, ಇದೊಂದು ಸಲ ಇಲ್ಲಿಗೆ ಬಂದಿದ್ದಾರೆ ಮತ್ತೆ ಬರೋತ್ತಾರೋ ಇಲ್ವೋ ಗೊತ್ತಿಲ್ಲ ದಯವಿಟ್ಟು ಬಿಡಿ ಎಂದು ಕೇಳುತ್ತಾರೆ.

 

ಪೋಲಿಸ್ ಅನುಮತಿ ಪಡೆದು ಒಳಗೆ ಹೋದ ಅಜ್ಜಿ ರಾಜ್ ಕುಮಾರ್ ಅವರ ಸಮಾಧಿ ಬಳಿ ಹೋಗಿ ಪೂಜೆ ಮಾಡಿ `ನಿನ್ನ ಮಕ್ಕಳ ತರನೇ ನನ್ನ ಮಗ ಬಂದಿದ್ದಾನೆ ಕಾಪಾಡಿಕೋ’ ಎಂದು ಹೇಳಿ ನಮಸ್ಕಾರಿಸುತ್ತಾರೆ. ಅಂದು ಅಪ್ಪಾಜಿ ಧನಂಜಯ ಅವರ ಅಜ್ಜಿಗೆ ದೇವರಾಗುತ್ತಾರೆ. ಧನಂಜಯ ಅವರ ಪ್ರಕಾರ ಅಪ್ಪಾಜಿ ಅವರ ಆಶೀರ್ವಾದದಿಂದಲೇ ಟಗರು ಸಿನಿಮಾ ಸಿಕ್ಕಿರಬಹುದು ಎಂದು ಹೇಳಿ ಒಂದು ಸಂದರ್ಶನ ಒಂದರಲ್ಲಿ ಭಾವುಕರಾಗಿದ್ದಾರೆ.!

LEAVE A REPLY

Please enter your comment!
Please enter your name here