ಡಾಲಿ’ ಧನಂಜಯ್ ಅಲ್ಲ, `ಸಾಮ್ರಾಟ್’ ಧನಂಜಯ್ !

0
295

ಧನಂಜಂಯ್,ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ವಿಶೇಷ ಅಭಿಮಾನಿಬಳಗವನ್ನು ಹೊಂದಿರುವ ಒರ್ವ ರಂಗಭೂಮಿ ಕಲಾವಿದ. 2013 ರಲ್ಲಿ ನಿರ್ದೇಶಕ ಗುರುಪ್ರಸಾದ್ ರವರ ಡೈರೆಕ್ಟರ್ ಸ್ಪೆಶಲ್ ಎಂಬುವ ಚಿತ್ರದಿಂದ,ಚಂದನವನಕ್ಕೆ ಪಾದರ್ಪಣೆ ಮಾಡಿದರು. ಇನ್ನು ಈ ಚಿತ್ರದಲ್ಲಿ ಅವರ ಅಭಿನಯಕ್ಕೆ `ಬೆಸ್ಟ್ ಡೆಬ್ಯು’ ಎಂದು SIIMA ಅವಾರ್ಡ್ ಕಾರ್ಯಕ್ರಮದಲ್ಲಿ ದೊರಕಿದೆ. ತದನಂತರ ಜಯನಗರ 4th ಬ್ಲಾಕ್ ಎಂಬುವ ಕಿರು ಚಿತ್ರದಲ್ಲಿ ಅಭಿನಯಿಸಿದ್ದರು. ಈ ಸಿನಿಮಾ,ಸಿನಿಮಾರಂಗದವರಿಗೆ ಮತ್ತು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. ನಂತರ ತೆರೆ ಕಂಡ ಚಿತ್ರಗಳಾದ,ರಾಟೆ,ಬಾಕ್ಸರ್,ಜೆಸ್ಸಿ,ಬದ್‍ಮಾಶ್,ಅಲ್ಲಮ,ಎರಡನೇಸಲ,ಹ್ಯಾಪಿ ನ್ಯೂ ಇಯರ್ ಚಿತ್ರಗಳು ಹೇಳಿಕೊಳ್ಳುವಂತಹ ಹಿಟ್ ಆಗಿರಲಿಲ್ಲ..

ಧನಂಜಯ್ ರವರ ವೃತ್ತಿ ಜೀವನವನ್ನೆ ಬದಾಲಯಿಸಿದ ಚಿತ್ರ ಶಿವಣ್ಣನ `ಟಗರು’!
ಹೌದು ಧನಂಜಯ್ ರವರು ಒಳ್ಳೆ ಕಲಾವಿದನಾಗಿದ್ದರು,ಅವರ ಪಾತ್ರವನ್ನು ತೂಕವಾಗಿ ಮಾಡಿದ್ದರು,ಆವರ ಯಾವ ಸಿನಿಮಗಳು ಅಷ್ಟು ಯಶಸ್ಸು ತಂದುಕೊಡುತ್ತಿರಲಿಲ್ಲ. ಇವರ ಅಭಿನಯನ್ನು ಗುರುತಿಸಿದ ದುನಿಯಾ ಸೂರಿ, ಟಗರು ಸಿನಿಮಾದಲ್ಲಿ ಖಳನಟಪಾತ್ರಕ್ಕೆ ಆಯ್ಕೆ ಮಾಡಿಕೊಂಡರು, ಸದ ಹೀರೋ ಪಾತ್ರದಲ್ಲಿ ಮಿಂಚುತಿದ್ದ ಧನಂಜಯ್ ಮೊದಲಬಾರಿಗೆ ಖಳನಟನಾಗಿ ಬಣ್ಣ ಹಚ್ಚಿದರು. ಈ ಸಿನಿಮಾ ದೊಡ್ಡ ಮಟ್ಟದ ಯಶ್ಶಸ್ಸು ಕಂಡಿತ್ತು. ಮತ್ತು ಧನಂಜಯ್ ಯವರ ಪಾತ್ರನ್ನು ಪ್ರೇಕ್ಷಕರು ಇನ್ನು ಮರೆತಲ್ಲ. ಹಾಗೆಯೆ ಈ ಸಿನಿಮಾದ ಮೂಲಕ ಧನಂಜಯ್,ಡಾಲಿ ಧನಂಜಯ್ ಆಗಿ ಹೊರ ಹೊಮ್ಮಿದ್ದಾರೆ!

ಇಂದು ಡಾಲಿ ಧನಂಜಯ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ, ಹಾಗೆಯೆ ಡಾಲಿ, ದುನಿಯಾ ವಿಜಯ್ ನಿರ್ದೇಶಿಸಿ ನಟಿಸುತ್ತಿರುವ ಸಲಗ' ಚಿತ್ರದಲ್ಲಿ ಪೋಲಿಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನು ಈ ಚಿತ್ರದಲ್ಲಿ ಡಾಲಿಯ ಗೆಟಪ್ ಮತ್ತು ಪೋಸ್ಟರ್‍ಗಳು ವಿಬಿನ್ನವಾಗಿದೆ. ಇನ್ನು ದುನಿಯಾ ವಿಜಯ್,ಬರ್ತಡೇ ಬಾಯ್‍ಗೆ ಹೊಸ ಬಿರುದು ನೀಡಿದ್ದಾರೆ! ಇಂದು ಸಲಗ ಚಿತ್ರದ ಒಂದು ಪೊಸ್ಟರ್ ಬಿಡುಗಡೆಮಾಡಿದ್ದು,ಡಾಲಿ ಧನಂಜಯ್ ಅವರಿಗೆಸಾಮ್ರಾಟ್’ ಧನಂಜಯ್ ಎಂದು ಸಂಭೋದಿಸಿದ್ದಾರೆ! ಇನ್ನು ಸಾಮ್ರಾಟ್ ಎನ್ನುವುದು ವಿಜಯ್‍ಯವರ ಮಗನ ಹೆಸರು ಕೂಡ!

ಇನ್ನುಳಿದಂತೆ ಸಾಮ್ರಾಟ್ ಧನಂಜಯ್,ಪೊಗರು,ಯುವರತ್ನ,ಸೂರಿಯವರ ಪಾಪ್‍ಕಾರ್ನ್ ಮಂಕಿ ಟೈಗರ್' ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ! ಅಲ್ಲದೆ ಡಾಲಿ ಪಿಕ್ಚರ್ಸ್ ಎಂಬ ಹೊಸ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿರುವ ಧನಂಜಯ್,ಬಡವ ರಾಸ್ಕಲ್’ ಎಂಬ ಸಿನಿಮಾ ಮಾಡುತ್ತಿದ್ದಾರೆ!

LEAVE A REPLY

Please enter your comment!
Please enter your name here