ಸದ್ಯ ಹೀರೋ ಲುಕ್ ನಿಂದ, ವಿಲನ್ ಲುಕ್ ನಲ್ಲೇ ಹೆಚ್ಚು ಸದ್ದು ಮಾಡುತ್ತಿರುವ ಡಾಲಿ ಧನಂಜಯ,ಸದ್ಯ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ !
ಟಗರು ಚಿತ್ರದ ನಂತರ ಅಪಾರ ಅಭಿಮಾನಿ ಬಳಗವನ್ನು ಪಡೆದುಕೊಂಡಿರುವ ಡಾಲಿ, ಡಿ ಬಾಸ್ ದರ್ಶನ್ ರವರ ಯಜಮಾನ ಚಿತ್ರದ ಮುಖಾಂತರ ಪಟಾಸು ಸೂರಿಯಾಗಿ ಪ್ರೇಕ್ಷಕರ ಮನ ಗೆದ್ದಿದ್ದರು ..
ಸದ್ಯ ಟಗರು ಸೂರಿ ನಿರ್ದೇಶನದ ‘ಪಾಪ್ ಕಾರ್ನ್ ಮಂಕಿ ಟೈಗರ್’, ‘ತೋತಾಪುರಿ’, ‘ಡಾಲಿ’, ಧ್ರುವ ಸರ್ಜಾ ಅಭಿನಯದ ‘ಪೊಗರು’,ಹಾಗೂ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರ ‘ಯುವರತ್ನ’ ಚಿತ್ರಗಳಲ್ಲಿ ನಟಿಸುತ್ತಿದ್ದು,ಇದೀಗ ಇನ್ನೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ ಎಂಬ ಮಾಹಿತಿ ಹೊರಬಂದಿದೆ ..
ಇದೇ ತಿಂಗಳು 23 ರಂದು ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದ್ದು, ಚಿತ್ರಕ್ಕೆ ‘ಬಡವ ರಾಸ್ಕಲ್’ ಎಂದು ಟೈಟಲ್ ಫಿಕ್ಸ್ ಮಾಡಿದ್ದಾರೆ !

ವಿಶೇಷವೇನೆಂದರೆ ಡಾಲಿ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ಮೂಡಿ ಬರುತ್ತಿದ್ದು, ಡಾಲಿ ಧನಂಜಯ್ ಅವರು ಸಹಿತ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ!
ಇನ್ನು ಈ ಚಿತ್ರದ ಟೈಟಲ್ ಕೇಳಿದ ಕೂಡಲೆ ನಮಗೆ ನೆನಪಾಗುವುದು ನಟಸಾರ್ವಭೌಮ ಡಾ ರಾಜ್ ಕುಮಾರ್ ರವರು !
‘ಬಡವ ರಾಸ್ಕಲ್’ ಎಂಬ ಡೈಲಾಗ್ ಅನ್ನು ಡಾಕ್ಟರ್ ರಾಜ್ ಕುಮಾರ್ ರವರು ಸುಮಾರು ಸಿನಿಮಾಗಳಲ್ಲಿ ಹೇಳಿದ್ದಾರೆ!
ಈ ಡೈಲಾಗ್ ಅಭಿಮಾನಿಗಳಿಗೆ ಇನ್ನೂ ಸಹಿತ ಅಚ್ಚುಮೆಚ್ಚು ! ಸದ್ಯ ಬಡವ ರಾಸ್ಕಲ್ ಎಂಬ ಟೈಟಲ್ ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ !
ಚಿತ್ರಕ್ಕೆ ಅಮೃತಾ ನಾಯಕಿಯಾಗಿದ್ದು, ವಾಸುಕಿ ವೈಭವ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ.. ಇನ್ನು ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸುತ್ತಿದ್ದಾರೆ ಎಂಬುದನ್ನು ಚಿತ್ರತಂಡ ಸದ್ಯದಲ್ಲೇ ಹೇಳಾಲಿದೆ