‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ವನ್ನು ಮೆಚ್ಚಿಕೊಂಡ ; ಡಾಲಿ, ರಿಷಬ್.!

0
125

ಆಗಸ್ಟ್‌ 15, ಒಂದೆಡೆ ಸ್ವಾತಂತ್ರ್ಯ ದಿನೋತ್ಸವವಾದರೆ ಇನ್ನೊಂದೆಡೆ ಕನ್ನಡ ಸಿನಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲು ರಾಜ್ ಬಿ ಶೆಟ್ಟಿ ಅಭಿನಯದ ‘ಗುಬ್ಬಿ ಮೇಲೆ ಬ್ರಹ್ಮಾಸ್ತ್ರ’ ಸಿನಿಮಾ ಬಿಡುಗಡೆಯಾಗುತ್ತಿದೆ !
ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಟಿ. ಆರ್ ಚಂದ್ರಶೇಖರ್ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸುಜಯ್ ಶಾಸ್ತ್ರಿ ಅವರು ಆಕ್ಷನ್ ಕಟ್ ಹೇಳಿದ್ದಾರೆ!

ಇನ್ನು ಚಿತ್ರದ ಮುಖ್ಯಭೂಮಿಕೆಯಲ್ಲಿ ಒಂದು ಮೊಟ್ಟೆಯ ಕಥೆ ಖ್ಯಾತಿಯ ರಾಜ್. ಬಿ ಶೆಟ್ಟಿ ಮತ್ತು ಬಿಗ್ ಬಾಸ್ ನ ಕವಿತಾ ಗೌಡ ಅಭಿನಯಿಸಿದ್ದಾರೆ. ಉಳಿದಂತೆ ಮಣಿಕಾಂತ್ ಕದ್ರಿ ಸಂಗೀತ ಸಂಯೋಜನೆ ಮಾಡಿದ್ದರೆ. ಸುನೀಲ್ ಹಲ್ಲೇರಿ ಮಠ್ ಛಾಯಾಗ್ರಹಣ ಮಾಡಿದ್ದಾರೆ. ಇದೊಂದು ಕಾಮಿಡಿ ಎಂಟರ್ಟೈನ್ಮೆಂಟ್ ಸಿನಿಮಾವಾಗಿದ್ದು ,ಚಿತ್ರದ ಟ್ರೇಲರ್ ಹಾಗೂ ಹಾಡುಗಳಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಇನ್ನು ಈ ಚಿತ್ರ `ಆಗಸ್ಟ್ 15 ರಂದು ವಿಶ್ವಾದ್ಯಂತ’ ಬಿಡುಗಡೆಯಾಗುತ್ತಿದ್ದು, ಚಿತ್ರದ ಟ್ರೈಲರ್ ಅನ್ನು ಡಾಲಿ ಧನಂಜಯ್ ಮತ್ತು ರಿಷಬ್ ಶೆಟ್ಟಿ ಬಹಳ ಇಷ್ಟಪಟ್ಟಿದ್ದಾರೆ..

ಚಿತ್ರದ ಟ್ರೈಲರ್ ನೋಡಿದ ಡಾಲಿ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸಿನಿಮಾ ದೊಡ್ಡ ಮಟ್ಟದ ಯಶಸ್ಸು ಕಾಣಲಿದೆ. ಟ್ರೈಲರ್ನಲ್ಲೇ ಇಷ್ಟು ಕಾಮಿಡಿ ಇದೆ,ಅಂದ ಮೇಲೆ ಇನ್ನು ಸಿನಿಮಾದಲ್ಲಿ ಇನ್ನು ಎಷ್ಟು ಕಾಮಿಡಿ ಇದೆಯೋ. ? ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದೇನೆ ಎಂದು ಹೇಳುವ ಮೂಲಕ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ ..

ಇನ್ನು ನಟ, ನಿರ್ದೇಶಕರಾದ ರಿಷಬ್ ಶೆಟ್ಟಿ, ನನ್ನ ಗೆಳೆಯರಾದ ಸಗಣಿ ಪಿಂಟು ಅಲಿಯಾಸ್ ಸುಜಯ್ ಶಾಸ್ತ್ರಿ, ರಾಜ್ ಬಿ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಮೂವರು ಒಟ್ಟಿಗೆ ಸೇರಿ ಮಾಡಿರುವ ಚಿತ್ರದ ಟ್ರೈಲರ್ ತುಂಬಾನೇ ಮಜವಾಗಿದೆ.. ಕವಿತಾ, ಕಾರುಣ್ಯ ರಾಮ್ ಸೇರಿದಂತೆ ಬಹುತೇಕ ಸ್ಟಾರ್ ಗಳು ಚಿತ್ರದಲ್ಲಿ ನಟಿಸಿದ್ದಾರೆ. ಇದೊಂದು ಒಳ್ಳೆಯ ಕಥೆಯ ಸಿನಿಮಾವಾಗಿದ್ದು, ಚಿತ್ರವನ್ನು ನೋಡಿ ಹರಿಸಿ ಅಂತ ಕೇಳಿಕೊಂಡಿದ್ದಾರೆ.
ಇನ್ನು ಚಿತ್ರದ ಪೋಷಕ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ, ಶೋಭರಾಜ್, ಬಾಬು ಹಿರಣ್ಯ ಮಂಜುನಾಥ್ ಹೆಗ್ಡೆ, ಅರುಣ್ ಅಭಿನಯಿಸಿದ್ದಾರೆ.

LEAVE A REPLY

Please enter your comment!
Please enter your name here