ಬಿಳಿ ಎಕ್ಕದ ಗಿಡದಿಂದ ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಸಕಲ ಐಶ್ವರ್ಯ ವೃದ್ಧಿಸುತ್ತದೆ.!

0
460

ಸಾಮಾನ್ಯವಾಗಿ ಬಿಳಿ ಎಕ್ಕದ ಗಿಡದ ಹೆಸರು ಕೇಳಿದರೆ ನಮಗೆ ತಕ್ಷಣ ನೆನಪಿಗೆ ಬರುವುದು ಗಣಪತಿ ಸ್ವಾಮಿ. ಹೌದು, ಯಾಕೆಂದರೆ ಬಿಳಿ ಎಕ್ಕದ ಗಿಡ ವಿನಾಯಕ ದೇವರಿಗೆ ಬಹಳ ಪ್ರಿಯವಾದದ್ದು, ಬಿಳಿ ಎಕ್ಕದ ಗಿಡವನ್ನು ನಾವು ಎಲ್ಲಾದರೂ ಕಂಡರೆ ಅದಕ್ಕೆ ನಮಸ್ಕರಿಸಿ ಅಥವಾ ಅದನ್ನು ವಿನಾಯಕರ ದೇವಾಲಯಕ್ಕೆ ಅರ್ಪಿಸುತ್ತೇವೆ. ಬಿಳಿ ಎಕ್ಕದ ಗಿಡ ಸಾಮಾನ್ಯವಾಗಿ ರಸ್ತೆ ಬದಿಗಳಲ್ಲಿ, ಉದ್ಯಾನವನದಲ್ಲಿ ಹೆಚ್ಚಾಗಿ ಬೆಳೆದಿರುತ್ತದೆ. ಬಿಳಿ ಎಕ್ಕದ ಗಿಡ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ.

 

 

ಈ ಒಂದು ಗಿಡದ ಬಗ್ಗೆ ನಮ್ಮ ಪೂರ್ವಜರು ಹೇಳುವ ಹಾಗೆ ಬಿಳಿ ಎಕ್ಕದ ಗಿಡವೊಂದು ಮನೆಯಲ್ಲಿ ಇದ್ದರೆ ಸಕಲ ಐಶ್ವರ್ಯ, ಅಂತಸ್ತು ವೃದ್ಧಿಯಾಗುತ್ತದೆ, ಹಣಕಾಸಿನ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ಮಾತಿದೆ. ಮನೆಯಲ್ಲಿ ಶಾಂತಿ, ನೆಮ್ಮದಿ, ಹಣಕಾಸಿನ ವ್ಯವಹಾರಗಳು ಇಂಥ ಎಲ್ಲಾ ತೊಂದರೆಗಳಿಗೆ ಬಿಳಿ ಎಕ್ಕದ ಗಿಡ ರಾಮಬಾಣ ಎಂದೇ ಹೇಳಬಹುದು.

 

 

ಆನೇಕ ಜನರು ತಮ್ಮ ವ್ಯವಹಾರ, ವಹಿವಾಟುಗಳಲ್ಲಿ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಜೊತೆಗೆ ಹಣಕಾಸಿನ ವಿಚಾರಗಳಲ್ಲಿ ಹಿನ್ನಡೆಯನ್ನು ಅನುಭವಿಸುತ್ತ ಸಾಲಭಾದೆಯಲ್ಲಿ ಸಿಲುಕಿ ಕಷ್ಟದ ಪರಿಸ್ಥಿತಿಯಲ್ಲಿ ಇರುತ್ತಾರೆ. ಮನೆಯಲ್ಲಿ ಈ ಒಂದು ರೀತಿ ಮಾಡುವುದರಿಂದ ನೀವು ಹಣಕಾಸಿನ ಸಮಸ್ಯೆಯಿಂದ ನೆಮ್ಮದಿ ಪಡೆಯಬಹುದು. ಇದನ್ನು ನಿಮ್ಮ ಮನೆಯಲ್ಲಿ ನೀವು ಪ್ರಯತ್ನ ಮಾಡಿದರೆ ಹಣಕಾಸಿನ ವೃದ್ಧಿಯಾಗುವುದರ ಜೊತೆಗೆ ಸಾಕಷ್ಟು ಲಾಭಗಳು ನಿಮಗೆ ದೊರೆಯಲಿದೆ.! ಅದು ಹೇಗೆ.? ಏನು ಎಂಬುದನ್ನು ಕೆಳಗೆ ತಿಳಿಸಿದ್ದೇವೆ ಓದಿ.

 

 

ಬಿಳಿ ಎಕ್ಕದ ಗಿಡ ನಮಗೆ ಸುಲಭವಾಗಿ ಸಿಗುವ ಗಿಡವಾಗಿದ್ದು, ಎಲ್ಲಾ ಪ್ರದೇಶಗಳಲ್ಲಿಯೂ ಲಭಿಸುವಂತ ಗಿಡ. ಈ ಒಂದು ಗಿಡಕ್ಕೆ ಪುರಾತನದ ವಿಶೇಷತೆ ಕೂಡ ಸಾಕಷ್ಟಿದೆ. ಬಿಳಿ ಎಕ್ಕದ ಗಿಡ 5ರಿಂದ 6 ಅಡಿ ಎತ್ತರಕ್ಕೆ ಬೆಳೆಯುತ್ತದೆ ಹಾಗೂ ಬಿಳಿ, ನೀಲಿ ಮಿಶ್ರಿತವಾದ ಬಣ್ಣದಲ್ಲಿ ಹೂವನ್ನು ಅರಳಿಸುತ್ತದೆ. ಬಿಳಿ ಎಕ್ಕದ ಗಿಡದ ಪ್ರತಿಯೊಂದು ಭಾಗವು ಔಷಧ ಗುಣಗಳನ್ನು ಹೊಂದಿದೆ. ಬಿಳಿ ಎಕ್ಕದ ಗಿಡದ ಹಾಲು ವಿಷಪೂರಿತವಾದದ್ದು, ಅದನ್ನು ಹೊರೆತುಪಡಿಸಿದರೆ ಎಕ್ಕದ ಗಿಡ ಸರಿ ಸುಮಾರು 64 ಔಷಧೀಯ ಗುಣಗಳನ್ನು ಒಳಗೊಂಡಿರುತ್ತದೆ.

 

 

ಬಿಳಿ ಎಕ್ಕದ ಗಿಡವನ್ನು ಸೂರ್ಯ ದೈವಕ್ಕೆ ನಮಸ್ಕರಿಸಿ ಅದರ ಎಲೆಯಿಂದ ರವಿ ಗ್ರಹವನ್ನು ಭಕ್ತಿಯಿಂದ ಪೂಜೆ ಸಲ್ಲಿಸಿದರೆ ಸೂರ್ಯ ದೋಷಗಳು ಸಂಪೂರ್ಣವಾಗಿ ನಿವಾರಣೆಯಾಗುತ್ತದೆ. ನೀವು ಪೂಜೆ ಮಾಡುವಾಗ ಲಕ್ಷ್ಮಿ, ಆಂಜನೇಯ, ಗಣಪತಿ, ಶನಿ ಮಹಾತ್ಮರಿಗೆ ಬಿಳಿ ಎಕ್ಕದ ಹೂವನ್ನು ಇಟ್ಟು ಪೂಜೆ ಸಲ್ಲಿಸಿ ಹಲವು ದೋಷಗಳಿಂದ ಮುಕ್ತರಾಗುತ್ತೀರಿ.

 

 

ಶನಿ ದೋಷವಿದ್ದರೆ ಪ್ರತಿ ಮಂಗಳವಾರ ಮತ್ತು ಶನಿವಾರ ಬಿಳಿ ಎಕ್ಕದ ಹೂವಿನಿಂದ ಹಾರವನ್ನು ತಯಾರಿಸಿ ಅದನ್ನು ಆಂಜನೇಯ ಅಥವಾ ಶನಿದೇವರಿಗೆ ಅರ್ಪಿಸಿ ಬಹಳ ಒಳ್ಳೆಯದು. ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಬೆಳೆಸಿದರೆ ಯಾವುದೇ ರೀತಿಯ ಮಾಟ, ಮಂತ್ರ, ತಂತ್ರಗಳು ಸುಳಿಯುವುದಿಲ್ಲ. ಅದರಲ್ಲೂ ಮನೆಯ ಬಲ ಭಾಗದಲ್ಲಿ ಬೆಳೆಸಿದರೆ ವಾಸ್ತು ದೋಷ ನಿವಾರಣೆಯಾಗುತ್ತದೆ.

 

 

ಬಿಳಿ ಎಕ್ಕದ ಗಿಡವನ್ನು ನಿಮ್ಮ ಮನೆಯಲ್ಲಿ ಇಟ್ಟು ಪೂಜೆ ಮಾಡುವುದರಿಂದ ಹಲವು ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಸರಿಯಾಗುತ್ತದೆ. ನೀವು ಮನೆಯಲ್ಲಿ ಈ ರೀತಿಯ ಪೂಜೆಯನ್ನು ಮಾಡಿಕೊಳ್ಳಿ ಸಕಲ ಕಷ್ಟಗಳು ಪರಿಹಾರವಾಗುವುದರ ಜೊತೆಗೆ ಮನೆಯಲ್ಲಿ ಧನ ಪ್ರಾಪ್ತಿಯಾಗುತ್ತದೆ ಮಾಡಿಕೊಳ್ಳಿ.

LEAVE A REPLY

Please enter your comment!
Please enter your name here