ಮನೆ ಎಂಬುದು ಪ್ರತಿ ವ್ಯಕ್ತಿಯ ಕನಸು. ಮನೆ ಎಂದ ಮೇಲೆ ಹೊಸ್ತಿಲು ಇದ್ದೇ ಇರುತ್ತದೆ. ಹೊಸ್ತಿಲು ಇರುವುದು ಸರ್ವೇ ಸಾಮಾನ್ಯ. ಆದರೆ ನಾವು ಕೆಲವು ಸಂಪ್ರದಾಯಗಳನ್ನು ಆಲಸ್ಯ ಮಾಡುವುದನ್ನು ಕಾಣುತ್ತೇವೆ. ಮನೆ ಹೊಸ್ತಿಲ ಬಳಿ ಹೀಗೆ ಮಾಡುತ್ತಿದ್ದರೆ, ಕಠಿಣಾತಿ ಕಠಿಣ ಶಿಕ್ಷೆ ಕಟ್ಟಿಟ್ಟ ಬುತ್ತಿ ಎನ್ನಲಾಗುತ್ತದೆ. ಜನ್ಮಜನ್ಮಾಂತರದಲ್ಲೂ ಆ ಕರ್ಮ ನಮ್ಮ ಬೆನ್ನು ಹತ್ತದೇ ಬಿಡುವುದಿಲ್ಲ ಎನ್ನಲಾಗುತ್ತದೆ.
ಪಾದರಕ್ಷೆಗಳನ್ನು ಹೊಸ್ತಿಲ ಬಳಿ ಬಿಡುವುದು, ಪಾದರಕ್ಷೆಗಳಿಂದ ಹೊಸ್ತಿಲನ್ನು ತುಳಿಯುವುದು, ಪಾದರಕ್ಷೆಗಳಲ್ಲಿರುವ ಮಣ್ಣನ್ನು ಒರೆಸುವುದು, ಹೀಗೆ ಪಾದರಕ್ಷೆಗಳನ್ನು ತಾಕಿಸುತ್ತಾ ಹೊಸ್ತಿಲನ್ನು ದಾಟುವುದನ್ನು ನೋಡುತ್ತೇವೆ. ಇದು ಸಾಮಾನ್ಯವಾಗಿಯೇ ಜರುಗುತ್ತಲೇ ಇರುತ್ತದೆ. ಆದರೆ ಇದು ಬಹಳ ತೊಂದರೆಯನ್ನುಂಟು ಮಾಡುತ್ತದೆ ಎನ್ನಲಾಗುತ್ತದೆ.
ಮನೆಯ ಹೊಸ್ತಿಲಿನ ಕೆಳ ಭಾಗದಲ್ಲಿ ಸಾಕ್ಷಾತ್ ಲಕ್ಷ್ಮಿದೇವಿ, ಮೇಲಿನ ಭಾಗದಲ್ಲಿ ಗೌರಿ ನೆಲೆಸಿರುತ್ತಾಳೆ. ಅಲ್ಲದೇ, ಆ ದೇವತೆಗಳನ್ನು ಆಹ್ವಾನಿಸಲ್ಪಟ್ಟಿರುತ್ತಾರೆ. ಹೊಸ್ತಿಲ ಹೊರಗೆ ಅಥವಾ ಹೊಸ್ತಿಲ ಬಳಿ ಹತ್ತಿ ಅಥವಾ ಪಾದರಕ್ಷೆಗಳನ್ನು ಬಿಡುವುದು ನೇರವಾಗಿ ನರಕಕ್ಕೆ ದಾರಿ ಮಾಡಿಕೊಡುತ್ತದೆ. ಅಲ್ಲದೇ, ಪರಮ ದಾರಿದ್ಯ್ರದ ಕೆಲಸವಾಗಿದೆ. ಆದ್ದರಿಂದ ಯಾವುದೇ ಸಂದರ್ಭದಲ್ಲೂ ಹೊಸ್ತಿಲನ್ನು ತುಳಿಯಬಾರದು ಮತ್ತು ಕಾಲನ್ನು ಹೊಸ್ತಿಲಿಗೆ ತಾಕಿಸಬಾರದು. ಒಂದು ವೇಳೆ ಹಾಗೆ ಮಾಡಿದರೆ ಎಷ್ಟೇ ಜನ್ಮದ ಪುಣ್ಯವಿದ್ದರೂ ನಾಶವಾಗಿ ಬಿಡುತ್ತದೆಯಂತೆ.
ಹೊಸ್ತಿಲ ಬಳಿ ಕಸಪೊರಕೆಯಿಂದ ತಾಕಿಸಬಾರದು. ಕಸದ ಪೊರಕೆಯನ್ನು ಹಿಡಿದು ಆ ಕಡೆಯಿಂದ ಈ ಕಡೆಗೆ ರಭಸವಾಗಿ ಗುಡಿಸಿದರೆ ಲಕ್ಷ್ಮಿ ಅಲ್ಲಿ ನೆಲೆಸುವುದಾದರೂ ಹೇಗೆ ಸಾಧ್ಯ? ಹಾಗಾಗಿ ಹೊಸ್ತಿಲನ್ನು ಕಸದ ಪೊರಕೆಯಿಂದ ಗುಡಿಸಬಾರದು ಮತ್ತು ತಾಕಿಸಬಾರದು. ಅದು ಮಹಾಪಾಪ ಮತ್ತು ಮಹಾದೋಷವಾಗಿದೆ. ಕಸದ ಪೊರಕೆಯನ್ನು ಬಳಸುವ ಬದಲು ಕೈಯಿಂದ ಅಥವಾ ಬಟ್ಟೆಯಿಂದ ಒರೆಸಿ ಶುಭ್ರಗೊಳಿಸಿ ಅರಿಸಿನ, ಕುಂಕುಮ ಇಟ್ಟು ರಂಗೋಲಿ ಇಟ್ಟರೆ ಅಷ್ಟೇ ಸಾಕು.
ಹೊಸ್ತಿಲನ್ನು ಪ್ರತಿನಿತ್ಯ ಪ್ರಾಥಃಕಾಲದಲ್ಲಿ ನೀರು ಅಥವಾ ಗೋಮಯದಿಂದ ತೊಳೆದು ಅರಿಶಿನ, ಕುಂಕುಮದಿಂದ ಅಲಂಕರಿಸಬೇಕು. ಇದರ ಬದಲಾಗಿ ಅರಿಶಿನ ಬಣ್ಣ ಬಳಿದು, ಅದಕ್ಕೆ ಬಿಳಿ ಮತ್ತು ಕುಂಕುಮ ಬಣ್ಣದ ಪೈಂಟ್ ಬಳಿದರೆ ಸಾಕು ಎಂದು ಯೋಚನೆ ಮಾಡಿದರೆ ಅದು ಶುದ್ಧ ಕೆಟ್ಟ ಸಂಪ್ರದಾಯವಾಗಿದೆ. ಅಲ್ಲದೇ, ಇದರಿಂದ ಯಾವುದೇ ಪ್ರಯೋಜನವಾಗುವುದಿಲ್ಲ. ಇವೆಲ್ಲವೂ ನಮ್ಮ ಪುರಾತನ ಕಾಲದಿಂದಲೂ ನಡೆದು ಬಂದ ಸಂಸ್ಕೃತಿ ಸಂಪ್ರದಾಯಗಳು.
ಇವು ಕೇವಲ ಸಂಸ್ಕೃತಿ, ಸಂಪ್ರದಾಯಗಳಷ್ಟೇ ಅಲ್ಲದೇ, ನಮ್ಮ ಆರೋಗ್ಯಕ್ಕೂ ಒಳಿತನ್ನೇ ಮಾಡುತ್ತವೆ. ಪಾದರಕ್ಷೆಯನ್ನು ತಗುಲಿಸುವುದು, ಕಸ ಪೊರಕೆಯನ್ನು ತಾಗಿಸುವುದು ಕೂಡ ಮಹಾದೋಷವೇ ಆಗಿದೆ. ಹಾಗಾಗಿ ಈ ರೀತಿಯ ಆಚರಣೆಗಳನ್ನು ಬಿಟ್ಟು ಬಿಡುವುದು ಒಳಿತು. ಹಾಗಾದಾಗ ಮಾತ್ರ ಲಕ್ಷ್ಮಿ ನಮ್ಮ ಮನೆಗಳಲ್ಲಿ ಬಂದು ನೆಲೆಸುವುದೇ ಅಲ್ಲದೇ, ಮನೆಯಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕರುಣಿಸುತ್ತಾಳೆ.