ಈ ಸಣ್ಣ ಎಲೆಯಲ್ಲಿ ಅದೆಂಥಾ ಅದ್ಭುತ ಗುಣ ಇದೆ ಗೊತ್ತಾ..?

0
298

ಮಾತು ಬಲ್ಲವನಿಗೆ ಜಗಳವಿಲ್ಲ ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವ ಗಾದೆ ಮಾತನ್ನ ನೀವು ಕೇಳಿದ್ದೀರಿ. ಆ ಮಾತು ಅಕ್ಷರಶಃ ಸತ್ಯ. ನಾವು ಮಾಡುವ ಊಟ ನಮ್ಮ ದೇಹದ ಹಾಗೂ ಮನಸ್ಸಿನ ಆರೋಗ್ಯವನ್ನ ಕಾಪಾಡುತ್ತದೆ ಅನ್ನುವುದು ಸಾಕಷ್ಟು ಸಂಶೋಧನೆಗಳಿಂದಲೂ ದೃಢ ಪಟ್ಟಿದೆ. ಅದರಲ್ಲೂ ಸೊಪ್ಪು, ತರಕಾರಿಗಳು ನಮ್ಮ ದೇಹಕ್ಕೆ ಬೇಕಿರುವ ಅಗತ್ಯ ಪ್ರಮಾಣದ ಪೌಷ್ಟಿಕಾಂಶಗಳನ್ನು ಆಂಟಿ ಆಕ್ಸಿಡೆಂಟ್ಸ್, ಆಂಟಿಸೆಪ್ಟಿಕ್ ಹಾಗೂ ಆಂಟಿ ಬ್ಯಾಕ್ಟೀರಿಯಲ್ ಗುಣಗಳನ್ನ ಹೆಚ್ಚಿಸುತ್ತವೆ. ಅದರಲ್ಲೂ ನಾನು ಈಗ ಹೇಳುತ್ತಿರುವ ಆ ಸಂಜೀವಿನಿ ನಿಮ್ಮೆಲ್ಲರಿಗೂ ತಿಳಿದಿರಬಹುದು. ಆದರೆ ಅದರ ಉಪಯೋಗವನ್ನ ಪಡೆಯುತ್ತಿರುವವರು ಮಾತ್ರ ಕೆಲವೇ ಕೆಲವು ಮಂದಿ. ಒಂದು ವೇಳೆ ನೀವೇನಾದರೂ ಆ ಸೊಪ್ಪನ್ನ ಅಗತ್ಯ ಪ್ರಮಾಣದಲ್ಲಿ ಬಳಸಿದ್ದೇ ಆದರೆ ನೀವು ಸಹ ಹಲವು ರೋಗಗಳಿಂದ ಮುಕ್ತರಾಗುವುದರಲ್ಲಿ ಎರಡು ಮಾತಿಲ್ಲ‌. ಆ ಸಂಜೀವಿನಿ ಪತ್ರೆ ಯಾವುದು ಗೊತ್ತಾ..?

ಇದನ್ನ ದೊಡ್ಡ ಪತ್ರೆ ಅಂತ ಕರೆಯುತ್ತಾರೆ. ಕರ್ಪೂರದ ಬಿಳಿ, ದೊಡ್ಡಪತ್ರೆ, ಸಾಂಬಾರು ಎಲೆ ಅಂತ ಎಲ್ಲಾ ಕರೆಸಿಕೊಳ್ಳುವ ಈ ಸಸ್ಯ ಬಹು ಉಪಯೋಗಿ. ಅದರಲ್ಲೂ ಮಳೆಗಾಲದ ಪ್ರಾರಂಭದಲ್ಲಿ ಹಾಗೂ ಇತರೆ ಸಂದರ್ಭಗಳಲ್ಲಿ ಮನುಷ್ಯನ ದೇಹಕ್ಕೆ ಅಂಟುವ ಕೆಮ್ಮು, ನೆಗಡಿ ಹಾಗೂ ಗಂಟಲಿಗೆ ಸಂಬಂಧಿಸಿದಂತಹ ಹಲವು ಕಾಯಿಲೆಗಳಿಗೆ ಈ ದೊಡ್ಡಪತ್ರೆ ರಾಮಬಾಣ. ಇದರ ಎಲೆಯನ್ನ ತಿನ್ನುವುದರಿಂದ ಹಲವು ಕಾಯಿಲೆಗಳು ವಾಸಿಯಾಗುವುದಲ್ಲದೇ ನಿಮ್ಮ ದೇಹದಲ್ಲಿನ ರೋಗನಿರೋಧಕ ಶಕ್ತಿ ಕೂಡ ಹೆಚ್ಚಾಗುತ್ತದೆ.
ಅಷ್ಟೇ ಅಲ್ಲದೆ ಜೀರ್ಣಶಕ್ತಿ ಕೂಡ ಹೆಚ್ಚಿಸುವ ಗುಣ ಕೂಡ ಈ ದೊಡ್ಡಪತ್ರೆಯಲ್ಲಿದೆ. ಶೀತಕಾರಕವಾದ ಈ ಸಸ್ಯ ಜ್ವರ ಹಾಗೂ ವಾತವನ್ನು ಕಡಿಮೆ ಮಾಡುತ್ತೆ. ಈ ಸಸ್ಯದ ಎಲೆಗಳನ್ನ ಹಾಗೆ ತಿನ್ನಬಹುದು. ಅದರೊಟ್ಟಿಗೆ ರುಚಿ-ರುಚಿಯಾದ ಆಹಾರವಾಗಿ ಕೂಡ ಇದನ್ನ ಬಳಸಿಕೊಳ್ಳಬಹುದು. ನೋಡುವುದಕ್ಕೆ ಅಲಂಕಾರಿಕ ಸಸ್ಯದಂತೆ ಕಾಣುವ ಈ ಗಿಡ ನಿಜಕ್ಕೂ ಮನೆಯಲ್ಲಿರುವ ಸಂಜೀವಿನಿ ಅಂದರೆ ತಪ್ಪಾಗುವುದಿಲ್ಲ. ಈ ಸಸ್ಯವನ್ನ ಯಾರು ಬೇಕಾದರೂ ಬಳಸಬಹುದು. ಅದಕ್ಕೆ ಬೇಕಿರುವುದು ಅಂಗೈ ಅಗಲ ಜಾಗ ಅಷ್ಟೇ.

ನಿಮ್ಮ ಮನೆ ಮುಂದೆಯೊ ಅಥವಾ ಮಹಡಿ ಮೇಲೋ ಒಂದು ಪಾಟ್ ನಲ್ಲಿ ಹಾಕಿದರೂ ಸಹ ಈ ಗಿಡ ಬೆಳೆದು ನಿಲ್ಲುತ್ತೆ. ದಕ್ಷಿಣ ಭಾರತದಲ್ಲಿ ಅದರಲ್ಲೂ ಮಲಬಾರ್ ಪ್ರದೇಶ ಹಾಗೂ ಕರ್ನಾಟಕದಲ್ಲಿ ಈ ಸಸ್ಯ ಹೆಚ್ಚು ಕಂಡು ಬರುತ್ತದೆ. ದೊಡ್ಡಪತ್ರೆಯ ಗುಣಗಳನ್ನು ತಿಳಿದುಕೊಂಡಿರಲ್ಪ..? ಇನ್ನು ಮೇಲಾದರೂ ದೊಡ್ಡಪತ್ರೆಯನ್ನು ಆಗಾಗ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಅದಕ್ಕಿಂತ ಮೊದಲು ಅದನ್ನ ಬೆಳೆಸುವುದನ್ನ ಅಭ್ಯಾಸ ಮಾಡಿಕೊಳ್ಳಿ. ಆರೋಗ್ಯವಾಗಿರಿ, ಆರೋಗ್ಯವಂತ ಭಾರತ ನಿರ್ಮಾಣಕ್ಕೆ ಕೈಜೋಡಿಸಿ.

– ಸುಷ್ಮಿತಾ

LEAVE A REPLY

Please enter your comment!
Please enter your name here