ಸತ್ತ ಮಗುವಿಗೆ ಚಿಕಿತ್ಸೆ ನೀಡಿದ ಡಾಕ್ಟರ್!

0
431

ಕೊಪ್ಪಳ ಜಿಲ್ಲೆಯ ಕಾರಟಗಿ ಸರ್ಕಾರಿ ಆಸ್ಪತ್ರೆಯ ವೈದ್ಯರ ಎಡವಟ್ಟಿಗೆ,ಗ್ರಾಮಸ್ತರು ಆಕ್ರೋಶ ವ್ಯಕ್ತ ಪಡಿಸಿದ್ದು, ಆಸ್ಪತ್ರೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದ ಘಟನೆ ನಡೆದಿದೆ. ಮಲ್ಲಾನ ಹಳ್ಳಿ ಗ್ರಾಮದ ನಾಲ್ಕು ವರ್ಷದ ಶಿವು ಎಂಬುವ ಮಗು ಆಟವಾಡುತ್ತ ಕಾಲುವೆಯಲ್ಲಿ ಬದ್ದಿತ್ತು. ಈ ವೇಳೆ ತೀವ್ರ ಅಸ್ವಸ್ತಗೊಂಡ ಮಗುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಮಗು ಸತ್ತು ಹೋಗಿದ್ದರು ಕೂಡ ಬದುಕಿದೆ ಎಂದು ಹೇಳಿ ಗಂಗಾವತಿ ಆಸ್ಪತ್ರೆಗೆ ಮಗುವನ್ನು ದಾಖಲಿದುವಂತೆ ವೈದ್ಯರು ಸೂಚಿಸಿದ್ದರು ಎನ್ನಲಾಗಿದೆ. ಆದರೆ ಮಗು ಸತ್ತು ಎರಡು ಗಂಟೆ ಕಳೆದಿದೆ ಎಂದು ಪೋಷಕರಿಗೆ ತಿಳಿದ ಕೂಡಲೆ ರೊಚ್ಚಿಗೆದ್ದ ಪೋಷಕರು ಗ್ರಾಮಸ್ತರೊಂದಿಗೆ ಮುತ್ತಿಗೆ ಹಾಕಲು ಎತ್ನಿಸಿದ್ದಾರೆ.ಅಲ್ಲದೇ ಸುಳ್ಳು ಮಾಹಿತಿಯನ್ನು ನೀಡಿದ ವೈದ್ಯೆ ಶಕುಂತಲಾ ಪಾಟೇಲ್ ವಿರುದ್ದ ಗ್ರಾಮಸ್ತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

ಇನ್ನು ಕೂಡಲೆ ಸ್ತಳಕ್ಕೆ ಕಾರಟಗಿ ಪೋಲೀಸರು ಡೌಡಾಯಿಸಿದ್ದು ಉದ್ವಿಕ್ತ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ

LEAVE A REPLY

Please enter your comment!
Please enter your name here