ನಾವು ನೀವು ಗಮನಿಸಿರುವ ಹಾಗೆ ಹೆಚ್ಚಾಗಿ ಫಾನ್ಸಿ ಅಂಗಡಿಯಲ್ಲಿ ಅಥವಾ ಅಸ್ಪತ್ರೆಯಲ್ಲಿ ಲಾಫಿಂಗ್ ಬುದ್ಧನ ಮೂರ್ತಿಯನ್ನು ಇಟ್ಟಿರುತ್ತಾರೆ. ಮೊದಲನೆಯದಾಗಿ ನಗುವ ಬುದ್ಧನನ್ನು ಯಾಕೆ ಹಲವರು ಮನೆಗೆ ತಂದಿಡಬೇಕು ಎಂದು ಹೇಳುತ್ತಾರೆ ನಿಮಗೆ ಗೊತ್ತೇ.? ಈ ಒಂದು ನಗುವ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಇಟ್ಟರೆ ಸಾಕಷ್ಟು ಲಾಭಗಳು ದೊರೆಯಲಿದೆ ಎಂಬುದು ತಿಳಿದುಬಂದಿದೆ.
ಅದರಲ್ಲೂ ವಿಧ ವಿಧವಾದ ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆ, ಕೆಲಸ ಮಾಡುವ ಕಛೇರಿ ಸೇರಿದಂತೆ ಬೇರೆ ಬೇರೆ ದಿಕ್ಕುಗಳಲ್ಲಿ ಇಡುವುದರಿಂದ ನಿಮಗೆ ಇರುವ ಆನೇಕ ದೋಷಗಳನ್ನು ನಿವಾರಿಸಿಕೊಳ್ಳಬಹುದು. ಲಾಫಿಂಗ್ ಬುದ್ಧನ ಮೂರ್ತಿಯನ್ನು ಮನೆಯಲ್ಲಿ ಇಡುವುದರಿಂದ ವಾಸ್ತುವಿನ ತೊಂದರೆಯನ್ನು ನಿವಾರಿಸಬಹುದು. ಜೊತೆಗೆ ಶುಭ ಸಂದರ್ಭಗಳು ಒದಗಿ ಬರುತ್ತದೆ ಎಂಬುದು ಒಂದು ನಂಬಿಕೆಯಾಗಿದೆ.
ನಗುವಿನ ಮೂರ್ತಿಯನ್ನು ಮನೆಯಲ್ಲಿ ಮತ್ತು ಅಂಗಡಿ, ವ್ಯಾಪಾರ, ವಹಿವಾಟುಗಳ ಸ್ಥಳಗಳಲ್ಲಿ ಇಡುವುದರಿಂದ ಸಕಾರಾತ್ಮಕತೆ ಹೆಚ್ಚಾಗುತ್ತದೆ ಮತ್ತು ಲಾಸ್ ಆಗುವ ಪರಿಣಾಮಗಳನ್ನು ನಿಯಂತ್ರಿಸುತ್ತದೆ. ಲಾಫಿಂಗ್ ಬುದ್ಧನನ್ನು ನೋಡಿದರೆ ಮೊದಲು ನೆನೆಪಾಗುವುದು ನಗುವಿನ ಸಂಕೇತ ಹಾಗೂ ಈ ಒಂದು ಮೂರ್ತಿಯ ಹಿಂದಿರುವ ಮಹತ್ವ ಕೂಡ ಸದಾ ನಗು ನಗುತ ಇರುವುದನ್ನು ಅರಿತುಕೊಳ್ಳಬೇಕು ಎಂಬುದು. ಈ ಒಂದು ಲಾಫಿಂಗ್ ಬುದ್ಧನನ್ನು ಮನೆಗೆ ತಂದು ಯಾವ ದಿಕ್ಕಿನಲ್ಲಿ ಇಟ್ಟರೆ ಏನು ಲಾಭ.? ಮತ್ತು ಯಾವ ರೀತಿಯ ಮೂರ್ತಿಯನ್ನು ಯಾವ ಮೂಲೆಯಲ್ಲಿ ಇಟ್ಟರೆ ಎಷ್ಟು ಲಾಭ ಎಂಬುದನ್ನು ತಿಳಿದುಕೊಳ್ಳಿ.
ಎರಡೂ ಕೈಗಳನ್ನು ಮೇಲಕ್ಕೆ ಏತ್ತಿರುವ ಲಾಫಿಂಗ್ ಬುದ್ಧನ ಮೂರ್ತಿಯನ್ನು ಹೆಚ್ಚಾಗಿ ವ್ಯವಹಾರ, ವ್ಯಾಪಾರ ಸ್ಥಳದಲ್ಲಿ ತಂದಿಡಬೇಕು. ಇದನ್ನು ಇಡುವುದರಿಂದ ವ್ಯಾಪಾರದಲ್ಲಿ ನಷ್ಟ ಅನುಭವಿಸುತ್ತಿದ್ದರೆ ಅದರಿಂದ ಹೋರಬರುತ್ತಿರಿ. ಜೊತೆಗೆ ಲಾಭದ ಹಾದಿಯನ್ನು ನೋಡುತ್ತೀರಿ.
ಚೀಲವನ್ನು ಇಟ್ಟುಕೊಂಡಿರುವ ಬುದ್ಧನನ್ನು ನೀವು ಕೆಲಸ ಮಾಡುವ ಕಛೇರಿಯಲ್ಲಿ ಅಥವಾ ಮನೆಯಲ್ಲಿ ಇಟ್ಟುಕೊಳ್ಳವುದರಿಂದ ನಿಮಗೆ ಇರುವ ಕಷ್ಟದ ಮೂಟೆಯನ್ನು ತನ್ನ ಚೀಲದೊಳಗೆ ಸೇರಿಸಿಕೊಳ್ಳಲಿದ್ದಾನೆ ಎಂದು ಹೇಳಲಾಗುತ್ತದೆ.
ಕುಟುಂಬದ ಜೊತೆಗೆ ಇರುವ ನಗುವಿನ ಬುದ್ಧನನ್ನು ಮನೆಗೆ ತಂದಿಡುವುದರಿಂದ ಕುಟುಂಬದವರು ಖುಷಿಯಿಂದ ಇರುವ ಬಾವವನ್ನು ಸಂಕೇತಿಸುತ್ತದೆ. ಜೊತೆಗೆ ಅದೃಷ್ಟವನ್ನು ತಂದುಕೊಡುತ್ತದೆ. ಮನೆಯ ಸಮಸ್ಯೆಗಳನ್ನು ಈ ಒಂದು ಮೂರ್ತಿ ತೊಳೆದು ಹಾಕುತ್ತದೆ ಎಂಬ ಕಾರಣಕ್ಕೆ ಇದನ್ನು ಮನೆಯಲ್ಲಿ ತಂದಿಡುತ್ತಾರೆ.
ಧ್ಯಾನದಲ್ಲಿ ಕುಳಿತಿರುವ ಬುದ್ಧನನ್ನು ಇಟ್ಟುಕೊಳ್ಳಲು ಕಾರಣ, ಮನೆಯಲ್ಲಿ ಬೇಸರದ ವಾತಾವರಣ, ಆಶಾಂತಿಯಿಂದ ಕೂಡಿದ್ದರೆ ಮನೆಯಲ್ಲಿ ನೆಮ್ಮದಿ, ಸಮಾಧಾನದ ಚಿತ್ತವನ್ನು ಮೂಡಿಸುತ್ತದೆ.