ಬಾಲಿವುಡ್‌ ಬಾದ್‌ ಶಾ ನಿಂದ ಕಿಚ್ಚನಿಗೆ ಕೋಟಿ ಮೌಲ್ಯದ ಬಿಎಂಡಬ್ಲ್ಯೂ ಕಾರ್‌ ಉಡುಗೊರೆ ಕೊಟ್ಟಿದ್ದು ಏಕೆ ಗೊತ್ತಾ ?

0
182

ಚಂದನವನದ ನಾಯಕನಟನಿಗೆ ಬಾಲಿವುಡ್‌ ಬಾದ್‌ ಶಾ ಸಲ್ಮಾನ್ ಖಾನ್ ರು ಬಿಎಂಡಬ್ಯ್ಲೂ ಎಂ5 ಕಾರನ್ನು ಗಿಫ್ಟ್‌ ಆಗಿ ನೀಡಿದ್ದಾರೆ. ಹೌದು, ಅದು ಬೇರೆ ಯಾರು ಅಲ್ಲ. ನಮ್ಮ ಕಿಚ್ಚ ಸುದೀಪ್ ಅವರ ಮನೆಗೆ ಸ್ವತಃ ಸಲ್ಮಾನ್ ಖಾನ್ ಅವರೇ ಈ ಕಾರನ್ನು ತಂದು ಉಡುಗೊರೆ ರೂಪದಲ್ಲಿ ನೀಡಿದ್ದಾರೆ. ಅಲ್ಲದೇ ಸುದೀಪ್ ತಮ್ಮ ತಂದೆ ಹಾಗೂ ಸಲ್ಮಾನ್ ಖಾನ್ ಜೊತೆಗಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಈ ಕಾರಿನ ಶೋ ರೂಂ ಬೆಲೆ ಬರೋಬ್ಬರಿ 1.5 ಕೋಟಿ ಇದೆ ಎಂಬುದು ಅಚ್ಚರಿಯ ವಿಚಾರ.

 


ಈಗಾಗಲೇ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ಸುದೀಪ್ ಅದಕ್ಕೆ, ನಾವು ಒಳ್ಳೆಯದನ್ನು ಮಾಡಿದಾಗ ಒಳ್ಳೆಯದೇ ಆಗುತ್ತದೆ. ಸಲ್ಮಾನ್ ಖಾನ್ ಅವರು ಬಿಎಂಡಬ್ಯ್ಲೂ ಎಂ5 ಜೊತೆ ಮನೆಗೆ ಬಂದು ಸರ್ಪ್ರೈಸ್ ಕೊಡುವ ಮೂಲಕ ನನಗೆ ಈ ವಾಕ್ಯದ ಮೇಲೆ ನಂಬಿಕೆ ಬರುವಂತೆ ಮಾಡಿದ್ದಾರೆ. ನನ್ನ ಹಾಗೂ ನನ್ನ ಕುಟುಂಬಕ್ಕೆ ಇಷ್ಟು ಪ್ರೀತಿ ತೋರಿಸುತ್ತಿರುವುದಕ್ಕೆ ಧನ್ಯವಾದಗಳು ಸಲ್ಮಾನ್ ಸರ್. ನಿಮ್ಮೊಂದಿಗೆ ಕೆಲಸ ಮಾಡಿರುವುದು ಹಾಗೂ ನಿಮ್ಮನ್ನು ಭೇಟಿ ಮಾಡಿರುವುದು ನನ್ನ ಹೆಮ್ಮೆ ಎಂದು ಬರೆದುಕೊಂಡಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗಿದೆ.

2019ರ ಡಿಸೆಂಬರ್ ನಲ್ಲಿ ದಬಾಂಗ್-3 ಚಿತ್ರದ ಪ್ರಮೋಶನ್‍ಗಾಗಿ ಸಲ್ಮಾನ್ ಖಾನ್ ಬೆಂಗಳೂರಿಗೆ ಬಂದಿದ್ದರು. ಇದೇ ವೇಳೆ ಬಾಲಿವುಡ್‌ ಬಾದ್‌ ಶಾ ಸಲ್ಮಾನ್, ಸುದೀಪ್ ನನ್ನ ಸಹೋದರ ಇದ್ದಂತೆ ಎಂದಿದ್ದರು. ಮೊದಲ ಬಾರಿಗೆ ಕಿಚ್ಚ ಸುದೀಪ್ ಮತ್ತು ಸಲ್ಮಾನ್ ದಬಾಂಗ್ – 3 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಸುದೀಪ್ ಖಳನಾಯಕನ ಪಾತ್ರದಲ್ಲಿ ಮಿಂಚಿದ್ದರು. ಈ ಚಿತ್ರ ಬಾಕ್ಸ್ ಆಫೀಸ್‍ನಲ್ಲಿ ಒಟ್ಟು 200 ಕೋಟಿ ರೂ. ಕಲೆಕ್ಷನ್ ಆಗಿದೆ.

 

 

ಈ ಖುಷಿಯನ್ನು ಹಂಚಿಕೊಳ್ಳಲು ಸಲ್ಮಾನ್‌ ಖಾನ್‌ ಸುದೀಪ್‌ ಗೆ ಸರ್ಪೈಸ್‌ ರೂಪದ ಗಿಫ್ಟ್‌ ನೀಡಿದ್ದಾರೆ ಎನ್ನಲಾಗುತ್ತಿದೆ.

LEAVE A REPLY

Please enter your comment!
Please enter your name here