ರಾಷ್ಟ್ರೀಯ ಕ್ಯಾಂಪ್‍ಗೆ ಗೈರಾಗಿದ್ದಕ್ಕೆ `ಸಾಕ್ಷಿ ಮಲಿಕ್’ ಕೊಟ್ಟ ಕಾರಣ ಏನು ಗೊತ್ತಾ..?

0
507

ಭಾರತೀಯ ಹೆಮ್ಮಯ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ ರಾಷ್ಟ್ರೀಯ ಕ್ಯಾಂಪ್‍ಗೆ ಈ ಹಿಂದೆ ಗೈರಾಗಿದ್ದರು. ಇದಕ್ಕೆ ತಾವು ಗೈರಾಗಲು ಕಾರಣವೇನು ಎಂಬುದನ್ನು ಸ್ಪಷ್ಟವಾಗಿ ತಿಳಿಸಿದ್ದಾರೆ. ರಾಷ್ಟ್ರೀಯ ಕ್ಯಾಂಪ್‍ಗೆ ಗೈರಾಗಲು ಕಾರಣವೇನು ಎಂಬುದನ್ನು ರೆಸ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಸಾಕ್ಷಿ ಅವರಿಗೆ ಪ್ರಶ್ನೆ ಮಾಡಿತ್ತು. ಸಾಕ್ಷಿ ಮಲಿಕ್ ಬಡ ಕುಟುಂಬದಲ್ಲಿ ಶ್ರಮಿಸಿ ಬಂದು, ಇಂದು ಬೇರೆ ದೇಶದವರು ಕೂಡ ನಮ್ಮ ಭಾರತವನ್ನು ತಿರುಗಿ ನೋಡುವ ಹಾಗೆ ಮಾಡಿದವರು. 2017ರ ಕಾಮನ್‍ವೆಲ್ತ್ ಚಾಂಪಿಯನ್‍ಶೀಪ್‍ನಲ್ಲಿ ಚಿನ್ನ ಗೆಲ್ಲುವ ಮೂಲಕ ಭಾರತಕ್ಕೆ ಮತ್ತಷ್ಟು ಕೀರ್ತಿಯನ್ನು ತಂದುಕೊಟ್ಟವರು.

ರೆಸ್ಲಿಂಗ್ ವಿಶ್ವ ಚಾಂಪಿಯನ್‍ಶೀಪ್‍ಗೆ ಸಾಕ್ಷಿ ಮಲಿಕ್, ಸೀಮಾ ಬಿಸ್ಲಾ ಮತ್ತು ಕಿರಣ್ ಆಯ್ಕೆಯಾಗಿದ್ದರು. ಈ ಮೂವರು ಕೂಡ ರಾಷ್ಟ್ರೀಯ ಕ್ಯಾಂಪ್‍ಗೆ ಗೈರಾಗಿದ್ದರು. ಗೈರಿಗೆ ಕಾರಣ ನೀಡಿದ ಸಾಕ್ಷಿ ಮಲಿಕ್ ತಾವು ರಕ್ಷಾ ಬಂಧನ ಹಬ್ಬಕ್ಕೆ ತೆರೆಳಿದ್ದೆ ಎಂದು ಸ್ಪಷ್ಟವಾಗಿ ತಿಳಿಸಿದರು. ಸೀಮಾ ಮತ್ತು ಕಿರಣ್ ಕೂಡ ಇದೆ ಕಾರಣವನ್ನು ಫೇಡರೇಷನ್ ಆಫ್ ಇಂಡಿಯಾಗೆ ನೀಡಿದ್ದಾರೆ. ಅವರ ಕಾರಣಗಳನ್ನು ಸಮಂಜಸವಾದ ಕಾರಣ ಎಂದು ರೆಸ್ಲಿಂಗ್ ಫೆಡರೇಷನ್ ಸಮ್ಮತಿಸಿದೆ. ಭಾರತೀಯ ಕ್ರೀಡಾ ಪಾಧಿಕಾರದ ಕ್ಯಾಂಪ್ ಲಕ್ನೋದಲ್ಲಿ ನಡೆಯುತ್ತಿದೆ.

LEAVE A REPLY

Please enter your comment!
Please enter your name here