ದರ್ಶನ್ ಸಿನಿಮಾಗಳ ಹಾಗೆ ದರ್ಶನ್ ಸಿನಿಮಾ ಬರುತ್ತಿದೆ ಎಂದರೆ ಅಭಿಮಾನಿಗಳು ಹುಚ್ಚೆದ್ದು ಕಾಯುವುದಂತು ಸತ್ಯ.. ಇನ್ನು ದರ್ಶನ್ ಅವರ ಕುರುಕ್ಷೇತ್ರ ಸಿನಿಮಾ ನೂರು ಕೋಟಿ ಗಳಿಸಿರುವುದು ಅಭಿಮಾನಿಗಳ ಮನಸ್ಸಲ್ಲಿ ಸಂತಸ ಮೂಡಿಸಿದೆ .. ಇನ್ನು ಅವರ ‘ಒಡೆಯ’ ಸಿನಿಮಾ ಬಿಡುಗಡೆಗೆ ತುದಿಗಾಲಲ್ಲಿ ನಿಂತಿದೆ..
ಸದ್ಯ ಸಾಕಷ್ಟು ನಿರೀಕ್ಷೆ ಹುಟ್ಟಿಸುತ್ತಿರುವ ಚಿತ್ರ ‘ರಾಬರ್ಟ್’ ಚಿತ್ರದ ಮೊದಲ ಪೋಸ್ಟರ್ ಭಾರೀ ವೈರಲ್ ಆಗಿತ್ತು.ಇನ್ನು ಚಿತ್ರಕ್ಕೆ ಉಮಾಪತಿ ಶ್ರೀನಿವಾಸ್ 50 ರಿಂದ 60 ಕೋಟಿ ಬಂಡವಾಳ ಹೂಡಲು ರೆಡಿಯಾಗಿದ್ದಾರೆ..
ಪ್ರೇಕ್ಷಕರ ಮನ ಸೆಳೆಯಲು ನಿರ್ದೇಶಕ ತರುಣ್ ಸುಧೀರ್ ಹೊಸ ಹೊಸ ಪ್ರಯತ್ನ ಮಾಡುತ್ತಲೇ ಇರುತ್ತಾರೆ…

ಇನ್ನು ಚಿತ್ರದ ನಾಯಕಿ ಯಾರು ಎಂಬುವುದರ ಬಗ್ಗೆ ಚಿತ್ರತಂಡ ಒಂದು ಸುಳಿವು ಸಹ ಬಿಟ್ಟುಕೊಟ್ಟಿರಲಿಲ್ಲ .. ನಾಯಕಿಯ ಹುಡುಕಾಟದಲ್ಲಿದ್ದೇವೆ. ಎಂದು ಸುದ್ದಿಗೋಷ್ಠಿಯೊಂದಿಗೆ ಹೇಳುತ್ತಿದ್ದರು.. ಮತ್ತು ಚಿತ್ರದ ನಾಯಕಿ ಯಾರಿರಬಹುದು ಎಂದು ಡಿ. ಬಾಸ್ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದರು.. ಇದೀಗ ಅವರ ಕುತೂಹಲಕ್ಕೆ ತೆರೆಬಿದ್ದಿದೆ..

ದರ್ಶನ್ಗೆ ಜೋಡಿಯಾಗಿ ಟಾಲಿವುಡ್ ಬೆಡಗಿ ಆಯ್ಕೆಯಾಗಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಮೆಹರಿನ್ ಪಿರ್ಜಾದಾ ಅವರು ರಾಬರ್ಟ್ ಸಿನಿಮಾದಲ್ಲಿ ದರ್ಶನ್ಗೆ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹೊರಬಂದಿದೆ.. ಈ ಹಿಂದೆ ಈ ಸಿನಿಮಾಗೆ ನಾಯಕಿಯಾಗಿ ಬಾಲಿವುಡ್ ಬ್ಯೂಟಿ, ಐಶ್ವರ್ಯ ರೈ ಬಚ್ಚನ್ ಅವರು ಕಾಣಿಸಿಕೊಳ್ಳುತ್ತಾರೆ ಎಂಬ ಸುದ್ದಿಗೆ ಹರಿದಾಡುತ್ತಿತ್ತು..
ಆದರೇ ಇದೀಗ ಮೆಹರಿನ್ ನಾಯಕಿಯಾಗಿ ಬರುವುದು ಬಹುತೇಕ ಖಚಿತವಾಗಿದೆ..ಸದ್ಯ ಚಿತ್ರದ ಎರಡನೇ ಹಂತದ ಚಿತ್ರೀಕರಣ ಮುಂದಿನ ತಿಂಗಳಿಂದ ಪ್ರಾರಂಭವಾಗಲಿದೆ ..