ಸದ್ಯ ಕನ್ನಡದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವ ಧಾರಾವಾಹಿ ಎಂದರೆ ಆರ್ಯವರ್ಧನ್ ಅವರು ನಟಿಸುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ. ವಯಸ್ಸಾದವರಿಂದ ಹಿಡಿದು ಹದಿ ಹರೆಯದ ಹುಡುಗರ ತನಕ ಈ ಧಾರಾವಾಹಿಯನ್ನು ತಪ್ಪದೇ ವೀಕ್ಷಿಸುತ್ತಾರೆ. ನಂತರ ಧಾರಾವಾಹಿ ತೆರೆಕಂಡ ಮೂರ್ನಾಲ್ಕು ತಿಂಗಳಲ್ಲೇ ಸಿಕ್ಕಾಪಟ್ಟೆ ಹೆಸರು ಮಾಡಿದ ನಟಿ ಎಂದರೆ ಅನು ಎಂಬ ಪಾತ್ರಧಾರಿ ಮೇಘನಾ ಶೆಟ್ಟಿ.
ಹೌದು, ಜೊತೆ ಜೊತೆಯಲ್ಲಿ ಧಾರಾವಾಹಿ ಪ್ರಾರಂಭವಾದಾಗ ಕೆಲವೇ ಕೆಲವು ಫಾಲೋವರ್ಸ್ ಗಳನ್ನು ಹೊಂದಿದ್ದ ನಟಿ ಮೇಘನಾ ಶೆಟ್ಟಿ. ಈಗ ಸಾಮಾಜಿಕ ಜಾಲತಾಣದಲ್ಲಿ ಲಕ್ಷಗಟ್ಟಲೆ ಫಾಲೋವರ್ಸ್ ಪಡೆದುಕೊಂಡು ಪಡ್ಡೆ ಹುಡುಗರ ಫೇವರಿಟ್ ಎನಿಸಿಕೊಂಡಿದ್ದಾರೆ. ಅನು ಪಾತ್ರದ ಮೂಲಕ ಪ್ರಖ್ಯಾತಿಯನ್ನು ಪಡೆದುಕೊಂಡಿರುವ ಇವರು ಕರುನಾಡ ಮನೆ ಮಾತಾಗಿದ್ದಾರೆ.
1998 ರಲ್ಲಿ ಬೆಂಗಳೂರಿನಲ್ಲಿ ಜನಿಸಿದ ಇವರು ನಟನೆಯಲ್ಲಿ ಅಷ್ಟು ಆಸಕ್ತಿ ಹೊಂದಿರಲಿಲ್ಲವಂತೆ. ಮಾಡೆಲಿಂಗ್ ಮಾಡುತ್ತಿದ್ದ ಮೇಘಾನ, ನಂತರ ಜೊತೆ ಜೊತೆಯಲ್ಲಿ ಧಾರಾವಾಹಿಯಲ್ಲಿ ನಟಿಸುವ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಇವರನ್ನು ಬಹಳ ಲಕ್ಕಿ ಹೀರೋಯಿನ್ ಅಂತಾನೇ ಹೇಳಬಹುದು.!ಯಾಕೆಂದರೆ ತಾನು ಅಭಿನಯಿಸಿದ ಮೊದಲ ಧಾರಾವಾಹಿಯಲ್ಲೇ ಸೂಪರ್ ಡೂಪರ್ ಹಿಟ್ ಆಗಿ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಅಲ್ಲದೆ ಸಾಕಷ್ಟು ಆಫರ್ ಗಳು ಇವರನ್ನು ಹುಡುಕಿಕೊಂಡು ಇವರ ಮನೆ ಬಾಗಿಲಿಗೆ ಬರುತ್ತಿದೆ! ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲದಲ್ಲಿದ್ದರಂತೆ ಮೇಘನಾ.
ಈಗಿನ ಯುವ ಪೀಳಿಗೆಗಳಿಗಂತೂ ಮೇಘನಾ ಶೆಟ್ಟಿ ಮೋಡಿ ಮಾಡಿದ್ದಾರೆ ಅಂತಾನೇ ಹೇಳಬಹುದು. ರಾತ್ರೋರಾತ್ರಿ ಸ್ಟಾರ್ ಆಗಿರುವ ಮೇಘನಾ ಪಡ್ಡೆ ಹೈಕಳ ನಿದ್ದೆ ಕದ್ದಿದ್ದಾಳೆ. ತೆರೆಯ ಮೇಲೆ ಮುದ್ದಾದ ಪ್ರೇಮ ಕಥೆಯುಳ್ಳ ಧಾರಾವಾಹಿಯಲ್ಲಿ ಪಾತ್ರವನ್ನು ನಿರ್ವಹಿಸುತ್ತಿರುವ ಮೇಘನಾ ಶೆಟ್ಟಿ ಅವರಿಗೆ, ನಿಜವಾಗಿಯೂ ಬಾಯ್ಫ್ರೆಂಡ್ ಇದ್ದಾನಾ ಎಂಬ ಪ್ರಶ್ನೆ ಹಲವರಲ್ಲಿದೆ ? ಇದಕ್ಕೆ ಉತ್ತರಿಸಿದ ಮೇಘನಾ ಹೌದು, ನನಗೆ ಬಾಯ್ಫ್ರೆಂಡ್ ಇದ್ದಾನೆ ಎಂದು ಹೇಳಿದ್ದಾರೆ. ಆದರೆ ಅವನು ಯಾರು ಎಂದು ತಿಳಿದುಕೊಂಡರೆ ನೀವು ಹೊಟ್ಟೆ ಹುಣ್ಣಾಗುವಂತೆ ನಗುತ್ತೀರ.
ಇಷ್ಟು ಸುಂದರವಾಗಿರುವ ಮೇಘನಾ ಶೆಟ್ಟಿ ಸಿಂಗಲ್ಲಾಗೇ ಇದ್ದಾರಾ ಎಂದು ಸಾಮಾಜಿಕ ಜಾಲತಾಣಗಳಲ್ಲಿ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದರು. ಇದಕ್ಕೆ ಉತ್ತರಿಸಿದ ಮೇಘನಾ ಹೌದು. ನನಗೆ ಬಾಯ್ ಫ್ರೆಂಡ್ ಇದ್ದಾನೆ,ಅದು ಬೇರೆ ಯಾರೂ ಅಲ್ಲ ನನ್ನ ಮನೆಯಲ್ಲಿರುವ ಮುದ್ದಾದ ನಾಯಿ ಮರಿ ಇವನೇ ನನ್ನ ಬಾಯ್ ಫ್ರೆಂಡ್, ಇವನೇ ನನ್ನ ಬೇಬಿ ಬಾಯ್ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಅಸಲಿಗೆ ಇವರಿಗೆ ಯಾವ ಲವರ್ ಮತ್ತು ಬಾಯ್ ಫ್ರೆಂಡ್ ಇಲ್ಲವಂತೆ.! ತನ್ನ ನಾಯಿಯನ್ನೇ ಹೆಚ್ಚಾಗಿ ಪ್ರೀತಿಸುತ್ತಾರೆ ಅದಕ್ಕೆ ಸಾಕ್ಷಿ ಅವರೆಲ್ಲೇ ಹೋದರೂ ಅದನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ. ಒಟ್ಟಾರೆ ಇವಳ ಬಾಯ್ ಫ್ರೆಂಡ್ ವಿಚಾರವನ್ನು ಕೇಳಿದ ಪ್ರತಿಯೊಬ್ಬರೂ ಒಂದು ಕ್ಷಣ ನಕ್ಕಿದ್ದಂತೂ ಸತ್ಯ.