ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಯಶಸ್ಸು ಪಡೆದುಕೊಂಡ ಧಾರವಾಹಿ ಅಗ್ನಿಸಾಕ್ಷಿ. ಈ ಧಾರವಾಹಿಯ ಮೂಲಕ ನಟ ವಿಜಯ್ ಸೂರ್ಯ ಮತ್ತು ವೈಷ್ಣವಿ ಅಲಿಯಾಸ್ ಸಿದ್ದಾರ್ಥ ಮತ್ತು ಸನ್ನಿಧಿ ಜೋಡಿ ಬಹಳ ಹೆಸರನ್ನೇ ಮಾಡಿದರು. ಕನ್ನಡ ಕಿರುತೆರೆಯಲ್ಲಿ ಬಹಳ ಕ್ಯೂಟ್ ಜೋಡಿ ಎಂತಲೇ ಕರೆಸಿಕೊಂಡವರು.
ಕನ್ನಡ ಕಿರುತೆರೆಯಲ್ಲಿ ಇಂದಿಗೂ ಟಿಆರ್ಪಿ ಉಳಿಸಿಕೊಂಡಿರುವ ಧಾರವಾಹಿಗಳಲ್ಲಿ ಅಗ್ನಿಸಾಕ್ಷಿಯೂ ಒಂದಾಗಿದೆ. ಈ ಧಾರವಾಹಿಯಲ್ಲಿ ಸನ್ನಿಧಿ ತಂಗಿ ಪಾತ್ರದಲ್ಲಿ ತನು ಅಲಿಯಾಸ್ ಶೋಭಾ ಕಾಣಿಸಿಕೊಂಡಿದ್ದರು.

ಅವರು ಅಖಿಲ್ ಜೊತೆಗೆ ಲವ್ವಿ ಡವ್ವಿ ನಡೆಸುತ್ತಿದ್ದಾಗ, ಅವರ ಹಾವ-ಭಾವ ಮತ್ತು ನಟನೆ ಮಾಡುತ್ತಿದ್ದ ರೀತಿಗೆ ಎಲ್ಲರೂ ಫಿದಾ ಆಗಿದ್ದರು. ಅಷ್ಟರ ಮಟ್ಟಿಗೆ ಅಖಿಲ್ ಗೆ ಜೋಡಿಯಾಗಿ ಆಕೆ ನಟಿಸಿದ್ದರು. ಆದರೆ ಇದ್ದಕ್ಕಿದ್ದ ಹಾಗೆ ಆಕೆ ಆ ಪಾತ್ರದಿಂದ ನಿರ್ಗಮಿಸಿದರು. ಆ ಪಾತ್ರಕ್ಕೆ ಬೇರೋಬ್ಬ ನಟಿ ಎಂಟ್ರಿ ಕೊಟ್ಟರು. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟಿಸುತ್ತಿದ್ದ ಅಂಜನೀಪುತ್ರ ಸಿನಿಮಾದಲ್ಲಿ ನಟಿಸುತ್ತಿರುವ ಕಾರಣದಿಂದ ಈ ಧಾರವಾಹಿಯಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದವು. ಆದರೆ ಅಂಜನೀಪುತ್ರ ಸಿನಿಮಾದ ಶೂಟಿಂಗ್ ಈಗಾಗಲೇ ಮುಗಿದಿದ್ದು, ಈ ನಟಿ ಎಲ್ಲಿಗೆ ಹೋಗಿದ್ದಾರೆ ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿತ್ತು.

ಕನ್ನಡದ ಸ್ಟಾರ್ ನಟಿ ಪ್ರಸ್ತುತ ಟಾಲಿವುಡ್ ನಲ್ಲಿ ಮಿಂಚುತ್ತಿದ್ದಾರೆ. ಆಕೆ ಅಲ್ಲಿ ಡಾಪ್ ಸೀರಿಯಲ್ಗಳಲ್ಲಿ ಮಿಂಚುತ್ತಿದ್ದಾರೆ. ಅತ್ತಾರೆಂಟಿಕಿ ದಾರೆದಿ ಎಂಬ ಧಾರವಾಹಿಯಲ್ಲಿ ಈಕೆ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಷ್ಟಾ ಚಂಬಾ ಧಾರವಾಹಿಯಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ. ಈಕೆ ಟಾಲಿವುಡ್ನಲ್ಲಿ ಸ್ಥಿರವಾಗಿ ನಿಲ್ಲುವ ಎಲ್ಲಾ ಲಕ್ಷಣಗಳೂ ಕಾಣಿಸಿಕೊಳ್ಳುತ್ತಿದೆ. ಅದೇನೇ ಆದರೂ ತನು ಅಗ್ನಿಸಾಕ್ಷಿ ಧಾರವಾಹಿಯನ್ನು ಬಿಟ್ಟಿದ್ದು ಮಾತ್ರ ಕನ್ನಡ ಧಾರವಾಹಿ ಪ್ರೇಕ್ಷಕರಿಗೆ ಬೇಸರವನ್ನುಂಟು ಮಾಡಿದೆ. ಮತ್ತೆ ಕೆಲವರು ಕನ್ನಡತಿ ಕನ್ನಡದ ಹೆಮ್ಮೆಯನ್ನು ಬೆಳಗಲಿ ಎಂದು ಆಶಿಸುತ್ತಿದ್ದಾರೆ.