ನಾಯಿ ಕಡಿದ ಕೂಡಲೇ ಏನು ಮಾಡಬೇಕು ಗೊತ್ತಾ ?

0
228

ಸುಮ್ಮನೆ ದಾರಿಯಲ್ಲಿ ನಡೆದು ಹೋಗುತ್ತಿರುತ್ತೇವೆ. ಆಗ ಏಕಾಏಕಿ ನಾಯಿಯೊಂದು ನಮ್ಮ ಮೇಲೆ ದಾಳಿ ಮಾಡುತ್ತದೆ. ಆಗ ಏನು ಮಾಡಬಹುದೆಂದು ತಿಳಿಯುವುದಿಲ್ಲ. ಹಾಗಾದರೆ ನಾಯಿ ಕಚ್ಚಿದ ಕೂಡಲೇ ಏನು ಮಾಡಬೇಕೆಂಬುದರ ಮಾಹಿತಿಯನ್ನು ನೀಡುತ್ತಿದ್ದೇವೆ. ಇನ್ನು ಮುಂದೆ ಪ್ರಥಮ ಚಿಕಿತ್ಸೆ ರೂಪದಲ್ಲಿ ಹೀಗೆ ಮಾಡಿದರೆ ಒಳಿತು.

 

ನಾಯಿ ಕಚ್ಚಿದ ತಕ್ಷಣ ಮೊದಲು ಬೇಗ ಚಿಕಿತ್ಸೆ ತೆಗೆದುಕೊಳ್ಳಬೇಕು. ನಾಯಿ ಕಚ್ಚಿದ ಕೂಡಲೇ ತರಚು ಗಾಯದ ರೀತಿ ಉಂಟಾಗಿದ್ದರೆ ಸೋಪು ಹಚ್ಚಿ, ಬಿಸಿ ನೀರಿನಿಂದ ತೊಳೆದು ಬ್ಯಾಕ್ಟಿರಿಯಾ ಫ್ರೀ ಲೋಷನ್ ಹಚ್ಚಬೇಕು. ಗಾಯದಿಂದ ರಕ್ತ ತುಂಬಾ ಸೋರುತ್ತಿದ್ದರೆ, ಆ್ಯಂಟಿ ಬ್ಯಾಕ್ಟಿರಿಯಾ ಲೋಷನ್ ಇದ್ದರೆ ಹಚ್ಚಿ ಬ್ಯಾಂಡೆಡ್ ಬಟ್ಟೆ ಅಥವಾ ಶುದ್ಧವಾದ ಬಟ್ಟೆಯನ್ನು ಗಾಯಕ್ಕೆ ಸುತ್ತಿ, ರಕ್ತ ಸೋರದಂತೆ ಮೆಲ್ಲನೆ ಒತ್ತಿ ಹಿಡಿಯಬೇಕು.

 

ಇನ್ನು ಮೊದಲಿಗೆ ತರಚು ಗಾಯವಾಗಿದ್ದರೂ ನಂತರ ಗಾಯವಾದ ಭಾಗದಲ್ಲಿ ಕೆಂಪಗಾಗುವುದು, ಊತ ಉಂಟಾದರೆ ಕೂಡಲೇ ವೈದ್ಯರನ್ನು ಕಾಣಿ. ನಾಯಿ ಕಚ್ಚಿದ ತಕ್ಷಣ ಮೊದಲು ಮಾಡಬೇಕಾಗಿರುವುದು ಆದಷ್ಟು ಬೇಗ ಚಿಕಿತ್ಸೆ ತೆಗೆದುಕೊಳ್ಳುವುದು. ಗಾಯ ಚಿಕ್ಕದಾಗಿರಲಿ, ದೊಡ್ಡದಾಗಿರಲಿ ಒಮ್ಮೆ ನಾಯಿಯ ಹಲ್ಲು ಸೋಕಿ ಗಾಯವಾಯಿತು ಎಂದಾದರೆ ಕೂಡಲೇ ಹೋಗಿ ಚುಚ್ಚುಮದ್ದು ತೆಗೆದುಕೊಳ್ಳಬೇಕು.

 

ಅಕಸ್ಮಾತ್ ನಾಯಿ ಕಡಿದು ನೋವು ಉಂಟಾಗುತ್ತಿದ್ದರೆ ಒಂದು ವೇಳೆ ನಿಮಗೆ ಕಚ್ಚಿದ ನಾಯಿಗೆ ರೇಬಿಸ್ ಚುಚ್ಚುಮದ್ದು ನಾಯಿ ಕಚ್ಚಿದ ಬಳಿಕ ರೇಬಿಸ್ ಚುಚ್ಚುಮದ್ದು ಹಾಕಿಸಿಕೊಳ್ಳಿ. ರೇಬೀಸ್ ಎನ್ನುವುದು ಮಾರಾಣಾಂತಿಕವಾದ ಕಾಯಿಲೆಯಾಗಿದ್ದು, ಈ ಕಾಯಿಲೆ ನಿಧಾನಕ್ಕೆ ಉಲ್ಭಣವಾಗುವುದರಿಂದ ರೇಬಿಸ್ ವೈರಸ್ ಗಳನ್ನು ನಾಶ ಪಡಿಸಲು ಇದು ಕ್ಷೇಮ. ನಾಯಿ ಬಾಯಲ್ಲಿ ಟ್ಯಾಫಿಲೋಕೊಕಸ್, ಪಾಶ್ಚುರೆಲ್ಲಾ ಮತ್ತು ಕ್ಯಾಪ್ನೋಸೈಟೋಫಾಗಾ ಎಂಬ ಅನೇಕ ಬಗೆಯ ಬ್ಯಾಕ್ಟಿರಿಯಾಗಳಿರುತ್ತದೆ.

 

 

ಈ ಬ್ಯಾಕ್ಟಿರಿಯಾಗಳು ನಮ್ಮ ದೇಹವನ್ನು ಸೇರಿದರೆ ಅನೇಕ ತೊಂದರೆಗಳು ಉಂಟಾಗಬಹುದು. ಹಾಗಾಗಿ ಏನಕ್ಕೂ ವೈದ್ಯರನ್ನು ಭೇಟಿ ಮಾಡಿ

LEAVE A REPLY

Please enter your comment!
Please enter your name here