ಸಿನಿಮಾಗಳಲ್ಲಿ ಬಳಸುವ ಬಟ್ಟೆಗಳನ್ನ ಶೂಟಿಂಗ್ ಮುಗಿದ ನಂತರ ಏನು ಮಾಡುತ್ತಾರೆ ಗೊತ್ತಾ..?

0
815

ಚಿತ್ರರಂಗ ಈಗ ಒಂದು ಉದ್ಯಮವಾಗಿ ಮಾರ್ಪಾಡು ಆಗಿದೆ ಎಂದು ಹೇಳಿದರೆ ತಪ್ಪಾಗಲ್ಲ, ಇನ್ನು ಸಿನಿಮಾಗಳಲ್ಲಿ ನಟ ನಟಿಯರು ಮಾತ್ರವಲ್ಲದೆ ಅದೆಷ್ಟೋ ಜನರು ನಟನೆಯನ್ನ ಮಾಡುತ್ತಾರೆ. ಇನ್ನು ಕೆಲವರಿಗೆ ಈಗಲೂ ಕಾಡುವ ಪ್ರಶ್ನೆ ಏನು ಅಂದರೆ ಸಿನಿಮಾಗಳಲ್ಲಿ ನಟ ನಟಿಯರು, ಹಾಗೆ ಉಳಿದವರು ಉಪಯೋಗಿವ ಬಟ್ಟೆಯನ್ನ ಸಿನಿಮಾ ಶೂಟಿಂಗ್ ಮುಗಿದ ನಂತರ ಏನು ಮಾಡುತ್ತಾರೆ ಅನ್ನುವುದು. ಹಾಗಾದರೆ ಸಿನಿಮಾಗಳಲ್ಲಿ ಶೂಟಿಂಗ್ ನಲ್ಲಿ ಬಳಸುವ ಬಟ್ಟೆಗಳನ್ನ ಏನು ಮಾಡುತ್ತಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ.

 

ಇನ್ನು ಒಂದು ಸಿನಿಮಾ ಮಾಡಬೇಕು ಅಂದರೆ ಆ ಸಿನಿಮಾದಲ್ಲಿ ನಟನೆ ಮಾಡುವ ನಟ ಮತ್ತು ನಟಿಯರ ಬಟ್ಟೆಗೆ ಸುಮಾರು 25 -30 ಲಕ್ಷ ರೂಪಾಯಿಯನ್ನ ಖರ್ಚು ಮಾಡಬೇಕಾಗುತ್ತದೆ ಮತ್ತು ನಟ ನಟಿಯರು ಧರಿಸುವ ಬಟ್ಟೆಗಳು ಬ್ರಾಂಡೆಡ್ ಆಗಿರುತ್ತದೆ. ಇನ್ನು ಸ್ಟಾರ್ ನಟ ನಟಿಯರ ಚಿತ್ರ ಅಂದರೆ ಅವರಿಬ್ಬರ ಬಟ್ಟೆಗೆ ಸುಮಾರು 30 ಲಕ್ಷ ಖರ್ಚಾಗುತ್ತದೆ. ಇನ್ನು ಸಿನೆಮಾಗಳ ಶೂಟಿಂಗ್ ಮುಗಿದ ಮೇಲೆ ಈ ದುಭಾರಿ ಬಟ್ಟೆಗಳನ್ನ ನಿರ್ಮಾಪಕರು ಏನು ಮಾಡುತ್ತಾರೆ ಅನ್ನುವ ಸಾಮಾನ್ಯ ಪ್ರಶ್ನೆ ಎಲ್ಲರಿಗೂ ಕಾಡುತ್ತದೆ. ಹೌದು, ಕೆಲವು ನಿರ್ಮಾಪಕರು ಸಿನಿಮಾಗಳಲ್ಲಿ ಬಳಸಿದ ದುಭಾರಿ ಬಟ್ಟೆಗಳನ್ನ ತಮ್ಮ ಗೋಡನ್ ನಲ್ಲಿ ಇರಿಸುತ್ತಾರೆ ಮತ್ತು ಇನ್ನು ಕೆಲವು ಆ ಬಟ್ಟೆಗಳನ್ನ ಸ್ವಲ್ಪ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಾರೆ, ಇನ್ನು ಕೆಲವು ಭಾರಿ ಹತ್ತು ಲಕ್ಷದ ಬಟ್ಟೆ ಒಂದು ಲಕ್ಷಕ್ಕೆ ಮಾರಾಟ ಆಗುತ್ತದೆ.

 

ಇನ್ನು ಕೆಲವು ಜನರು ಸಿನಿಮಾಗಳಲ್ಲಿ ಬಳಸಿದ ಬಟ್ಟೆಗಳನ್ನ ನಿರ್ಮಾಪಕರಿಂದ ಸ್ವಲ್ಪ ಕಡಿಮೆ ಬೆಲೆ ಖರೀದಿ ಮಾಡಿ ಅದನ್ನ ಮದುವೆ ಇತರೆ ಸಮಾರಂಭಗಳಿಗೆ ಜನರಿಗೆ ಬಾಡಿಗೆಗೆ ಕೊಡುತ್ತಾರೆ. ಇನ್ನು ಸಿನಿಮಾಗಳಲ್ಲಿ ಬಳಸಿದ ಬಟ್ಟೆಗಳನ್ನ ಮಾರಾಟ ಮಾಡುವ ಸಲುವಾಗಿ ಮುಂಬೈ ನಲ್ಲಿ ಒಂದು ದೊಡ್ಡ ಮಾರ್ಕೆಟ್ ಇದೆ, ಇನ್ನು ಕೆಲವು ನಿರ್ಮಾಪಕರು ಮುಂಬೈ ನಲ್ಲಿ ಇರುವ ಈ ಮಾರ್ಕೆಟ್ ಗೆ ತಮ್ಮ ಸಿನಿಮಾಗಳಲ್ಲಿ ಬಳಸಿದ ಬಟ್ಟೆಗಳನ್ನ ಮಾರಾಟ ಮಾಡುತ್ತಾರೆ. ಇನ್ನು ಕೆಲವು ನಿರ್ಮಾಪಕರು ವರ್ಷದಲ್ಲಿ ಎರಡು ಮೂರೂ ಸಿನಿಮಾಗಳನ್ನ ಮಾಡುವ ಸಲುವಾಗಿ ತಮ್ಮ ಹಿಂದಿನ ಸಿನಿಮಾಗಳಲ್ಲಿ ಬಳಸುವ ಬಟ್ಟೆಗಳನ್ನ ಹಾಗೆ ಗೋಡನ್ ಇರಿಸಿಕೊಂಡು ಮುಂದಿನ ಸಿನಿಮಾಗಳಿಗೆ ಅದನ್ನ ಬಳಸುತ್ತಾರೆ.

 

ಇನ್ನು ಕೆಲವು ಭಾರಿ ಸಿನಿಮಾ ಶೂಟಿಂಗ್ ಸಮಯದಲ್ಲಿ ನಟ ಮತ್ತು ನಟಿಯರು ತಮಗೆ ಇಷ್ಟವಾದ ಬಟ್ಟೆಗಳನ್ನ ಅವರೇ ಖರೀದಿ ಮಾಡಿ ಮೆನೆಗೆ ತೆಗೆದುಕೊಂಡು ಹೋಗುತ್ತಾರೆ. ಇನ್ನು ಸೀರಿಯಲ್ ಗಳಲ್ಲಿ ನಟನೆ ಮಾಡುವವರು ಅವರಿಗೆ ಅವರೇ ಬಟ್ಟೆಗಳನ್ನ ತೆಗೆದುಕೊಂಡು ಬರಬೇಕು ಮತ್ತು ನಿರ್ಮಾಪಕರು ಯಾವುದೇ ಬಟ್ಟೆಗಳನ್ನ ಖರಿದಿ ಮಾಡುವುದಿಲ್ಲ, ನಾಳೆಯ ಶೂಟಿಂಗ್ ಯಾವ ರೀತಿಯ ಬಟ್ಟೆಗಳನ್ನ ಹಾಕಿಕೊಳ್ಳಬೇಕು ಅನ್ನುವುದರ ಬಗ್ಗೆ ನಿರ್ದೇಶಕರು ನಟ ಮತ್ತು ನಟಿಯರಿಗೆ ಹೇಳುತ್ತಾರೆ ಮತ್ತು ಅದರ ಪ್ರಕಾರ ನಟ ಮತ್ತು ನಟಿಯರು ಬಟ್ಟೆಯನ್ನ ಧರಿಸಿ ಬರುತ್ತಾರೆ, ಇನ್ನು ಸೀರಿಯಲ್ ಗಳಲ್ಲಿ ಬಟ್ಟೆಗಳ ವ್ಯವಹಾರ ಅಷ್ಟಾಗಿ ಇರುವುದಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ.

LEAVE A REPLY

Please enter your comment!
Please enter your name here