ಇಡಿ ಅಧಿಕಾರಿಗಳು ಡಿಕೆಶಿಗೆ ಕೇಳಿದ ಪ್ರಶ್ನೆಗಳೇನು ಗೊತ್ತಾ..?!

0
548

ಮಧ್ಯಂತರ ರಕ್ಷಣೆ ಕೋರಿ ಡಿಕೆಶಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನಿನ್ನೆ ವಜಾಗೊಳಿಸಿದ ನಂತರ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದರು. ಸತತ ಐದು ಗಂಟೆಗಳ ಸುಧಿರ್ಘ ವಿಚಾರಣೆಯಲ್ಲಿ ಇಡಿ ಅಧಿಕಾರಿಗಳು ಅನೇಕ ಪ್ರಶ್ನೆಗಳನ್ನು ಡಿಕೆಶಿ ಮುಂದಿಟ್ಟರು. ಇಡಿ ಕೇಳಿದ ಆ ಪ್ರಶ್ನೆಗಳು ಯಾವುವು ಎಂಬ ವಿವರ ಇಲ್ಲಿದೆ ನೋಡಿ.

ಇಡಿ: ಸುನಿಲ್ ಶರ್ಮಾ ಹೇಳಿದ್ದಾರೆ. ದೆಹಲಿಯಲ್ಲಿರುವ ಆ ಫ್ಲಾಟ್ ಮಾಲೀಕರು ನೀವೇ ಎಂದು, ಅದಕ್ಕೆ ನಿಮ್ಮ ಉತ್ತರ
ಡಿಕೆ: ಅವರು ಯಾಕಂಗೆ ಹೇಳಿದ್ರು ಗೊತ್ತಿಲ್ಲ, ಆಶ್ಚರ್ಯ ತಂದಿದೆ. ಈ ಬಗ್ಗೆ ನನಗೆ ಮಾಹಿತಿಯಿಲ್ಲ.
ಇಡಿ: ಸುನಿಲ್ ಶರ್ಮಾ ಜೊತೆ ನಿಮಗೆ ವ್ಯವಹಾರಿಕ ಸಂಬಂಧ ಇದ್ಯಾ?
ಡಿಕೆ: ಇದೆ, ನಾನು ಅವರ ಟ್ರಾವೆಲ್ಸ್‍ನಲ್ಲಿ ಪಾಲುದಾರ, ಅನೇಕ ವರ್ಷಗಳಿಂದ ವ್ಯವಹಾರ ನಡೆಸುತ್ತಿದ್ದೇವೆ.
ಇಡಿ: ಈ ಹಣ ನೀವು, ನಿಮ್ಮ ಸ್ನೇಹಿತರು ಅಕ್ರಮವಾಗಿ ಸಂಗ್ರಹಿಸಿದ್ದಾ?
ಡಿಕೆ: ಅಕ್ರಮವಾಗಿ ನಾನು ಏನನ್ನೂ ಸಂಪಾದಿಸಿಲ್ಲ. ಎಲ್ಲವನ್ನೂ ಕಾನೂನಿನ ತೆರಿಗೆ ಪಾವತಿಸಿ ಸಂಪಾದಿಸಿದ್ದೇನೆ.
ಇಡಿ: ಕೆಜಿ ಅನ್ನೋ ಕೋರ್ಡ್‍ವರ್ಡ್ ಅಲ್ಲಿ ಹವಾಲಾ ವ್ಯವಹಾರ ಮಾಡ್ತಿದ್ದೀರಾ?
ಡಿಕೆ: ನಾನು ಯಾವತ್ತೂ ಹವಾಲಾ ಕೆಲಸವನ್ನು ಮಾಡಿಲ್ಲ. ಆ ಬಗ್ಗೆ ನನಗೆ ಏನೂ ಗೊತ್ತಿಲ್ಲ.
ಇಡಿ: ಡ್ರೈವರ್ ಜೊತೆ ನಿಮಗೆ ಹಣಕಾಸಿನ ಸಂಬಂಧ ಇದ್ಯಾ..?

ಡಿಕೆ: ಇಲ್ಲ, ಯಾವುದೇ ವ್ಯವಹಾರ ಇಲ್ಲ. ಆತ ಕೇವಲ ನನಗೆ ಡ್ರೈವರ್ ಮಾತ್ರ.
ಇಡಿ: ಡ್ರೈವರ್‍ಗೆ ನೀವು ಹಣ ಕೊಟ್ಟು ಕಳುಹಿಸುವಷ್ಟು ನಂಬಿಕಸ್ತನಾ..?
ಡಿಕೆ: ಕೆಲವೊಂದು ವ್ಯವಹಾರಕ್ಕೆ ಹಣ ಕಳುಹಿಸಿದ್ದೇನೆ. ಅದರ ಹೊರತಾಗಿ ಹೆಚ್ಚಿನ ಮಾಹಿತಿ ಇಲ್ಲ.
ಹೀಗೆ ಡಿಕೆಶಿ ವ್ಯವಹಾರ ಸೇರಿದಂತೆ ಅವರ ಆಪ್ತರೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಇಡಿ ಅಧಿಕಾರಿಗಳು ಸುದಿರ್ಘ ವಿಚಾರಣೆ ನಡೆಸಿದ್ದಾರೆ. ನಿನ್ನೆ ತಡ ರಾತ್ರಿಯವರೆಗೂ ವಿಚಾರಣೆ ನಡೆಸಿದ ನಂತರ ಇಂದು ಕೂಡಾ ವಿಚಾರಣೆಗೆ ಮತ್ತೆ ಹಾಜರಾಗುವಂತೆ ಸೂಚಿಸಿದ್ದಾರೆ. ಇಂದು ಮತ್ತೆ ಡಿಕೆಶಿ ಇಡಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾಗುತ್ತಾರೆ.

LEAVE A REPLY

Please enter your comment!
Please enter your name here