ರಾತ್ರಿ 12 ಗಂಟೆಗೆ ಸಾಮಾನ್ಯ ಮಹಿಳೆಯಂತೆ ಬಸ್ ನಿಲ್ದಾಣದಲ್ಲಿ ನಿಂತ ‘ಡಿಸಿಪಿ’ ಮಾಡಿದ್ದೇನು ಗೊತ್ತಾ ??

0
1287

ಮಹಿಳೆಯರಿಗೆ ರಾತ್ರಿ ಹೊತ್ತಲ್ಲಿ ಅನಾನುಕೂಲವಾಗುವಂತಹ ಘಟನೆಗಳು ಪ್ರತಿ ದಿನ ನಡೆಯುತ್ತಿರುತ್ತದೆ. ಆಗ ನಾವು ಕೇಳುವ ಪ್ರಶ್ನೆ ಪೋಲಿಸರು ಏನು ಮಾಡುತ್ತಿದ್ದಾರೆ? ಎಂದು. ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೊರಟ ಮಹಿಳಾ DCP ರಾತ್ರಿ ಹೊತ್ತಲಿ ಸಾಮಾನ್ಯ ಮಹಿಳೆಯಂತೆ ಎಲ್ಲಾ ಸ್ಥಳಗಳನ್ನು ಸುತ್ತುತ್ತಾರೆ. ಆ ರಾತ್ರಿ ಆಕೆಗೆ ಆದ ಅನುಭವ ಭಯಾನಕ ಹಾಗೂ ವಿಚಿತ್ರ. ಅದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. ಕೇರಳ ರಾಜ್ಯದ ಕ್ಯಾಲಿಕಟ್ ನಗರದ DCP ಆಗಿ ಕೆಲಸ ಮಾಡುತ್ತಿದ್ದ ‘ಮೇರಿ ಜೊಸೆಫ್’ ರಾತ್ರಿ ಹೊತ್ತಲಿ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆ ಏನು ಎಂದು ತಿಳಿಯಲು ಒಂದು ಪ್ಲಾನ್ ಮಾಡುತ್ತಾರೆ. ಅದರ ಪ್ರಕಾರ ಯಾರಿಗೂ ತಿಳಿಯದಂತೆ DCP ಮೇರಿ ಜೊಸೆಫ್ ಮತ್ತು ಇಬ್ಬರು ಮಹಿಳಾ ಪೇದೆಗಳು ಸಾಮಾನ್ಯ ಮಹಿಳೆಯರಂತೆ ಬಟ್ಟೆ ಧರಿಸಿ ಕ್ಯಾಲಿಕಟ್ ನಗರದ ಕೆಲವು ಬೀದಿಗಳಲ್ಲಿ ಮಧ್ಯರಾತ್ರಿಯಲ್ಲಿ ಸುತ್ತಾಡುತ್ತಾರೆ.

ಒಂದು ಬಸ್ ಸ್ಟಾಂಡಿನಲ್ಲಿ ನಿಂತ DCP ಮೇರಿ ಜೊಸೆಫ್ ಗೆ ಯಾರು ಮಹಿಳೆಯರು ಕಾಣಿಸಲಿಲ್ಲ.ಎಲ್ಲಾ ಯುವಕರೇ ಇದ್ದರು. ತುಂಬಾ ಬಿಜಿ ಇರುವಂತಹ ಸ್ಟ್ರೀಟ್ ನಲ್ಲಿ DCP ಮೇರಿ ಜೊಸೆಫ್ ನಡೆದುಕೊಂಡು ಹೋಗುವಾಗ ಗಂಡಸರು ಇವರನ್ನು ನೋಡಿ ಒಂದು ರೀತಿಯ ಕೆಟ್ಟ ಭಾವನೆಯಲ್ಲಿ ನೋಡುತ್ತಾರೆ. ಬೇಬಿ ಮೆಮ್ಮೋರಿಯಲ್ ಹಾಸ್ಪಿಟಲ್ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಬೈಕ್ ನಲ್ಲಿ ಬಂದ ಮೂವರು ಯುವಕರು ತುಂಬಾ ಕೆಟ್ಟ ಭಾಷೆಯಲ್ಲಿ ಮಾತಾನಾಡುತ್ತ ಬರ್ತ್ತೀಯಾ ಎಂದು ಕೇಳುತ್ತಾರೆ. ಆ ಯುವಕರನ್ನು ನೋಡಿ ತುಂಬಾ ಕೋಪ ಬಂದರು ಅಲ್ಲಿಂದ ಮುಂದೆ ಸಾಗಿ ಇನ್ನೊಂದು ಬಸ್ ಸ್ಟಾಂಡ್ ನಲ್ಲಿ ನಿಂತುಕೊಳ್ಳುತ್ತಾರೆ. ಆಗ ಅಲ್ಲಿಗೆ ಬಂದ ಕೆಲವು ಗಂಡಸರು DCP ಮೇರಿ ಜೊಸೆಫ್ ಮತ್ತು ಇಬ್ಬರು ಮಹಿಳಾ ಪೇದೆಗಳನ್ನು ಕೆಟ್ಟ ಪದಗಳಲ್ಲಿ ನಿಂದನೆ ಮಾಡುತ್ತಾರೆ. ಹೀಗೆ ನಗರದ ಎಲ್ಲಾ ಬೀದಿಗಳಲ್ಲಿ ಹಾಗೂ ಬೀಚ್ ಏರಿಯಾಗಳಲ್ಲಿ ಸುತ್ತಾಡಿದ DCP ಮೇರಿ ಜೊಸೆಫ್ ಗೆ ಕೆಟ್ಟ ಅನುಭವವೇ ಆಗುತ್ತದೆ.

ರಾತ್ರಿ ಹೊತ್ತಲ್ಲಿ ಮಹಿಳೆಯರು ಕಾಣಿಸಿದಾಗ ಬರ್ತ್ತಿಯಾ ಎಂದು ಕೇಳಿದರೆ ಹೊರೆತು ನೀನು ಯಾರಮ್ಮ..??ಏಕೆ ಇಲ್ಲಿ ಕುತ್ತಿದ್ದಿಯಾ..??ಎಂದು ಯಾರು ಕೇಳಲಿಲ್ಲ. ಆದರೆ ಒಂದು ಪ್ರದೇಶದಲ್ಲಿ DCP ಮೇರಿ ಜೊಸೆಫ್ ಕುಳಿತ್ತಿದ್ದಾಗ ಅಲ್ಲಿಗೆ ಬಂದ ಪಾಟ್ರೋಲ್ ಪೋಲಿಸ್ ಯಾರಮ್ಮ ನೀನು..??ಏನಾದರೂ ಸಹಾಯ ಬೇಕಾ..??ಎಂದು ಕೇಳಿದರು. ಆದರೆ DCPಯನ್ನು ಆ ಪೋಲಿಸ್ ಗುರುತು ಹಿಡಿಯಲಿಲ್ಲ. ಹೀಗೆ ನೇರವಾಗಿ ಮಹಿಳೆಯರಿಗೆ ಯಾವ ರೀತಿ ಕೆಟ್ಟ ಅನುಭವಗಳಾಗುತ್ತಿವೆ. ಯಾವ ಪ್ರದೇಶಗಳು ಮಹಿಳೆಯರಿಗೆ ಸುರಕ್ಷಿತ ಅಲ್ಲ! ಎಂದೂ ಪ್ರತ್ಯಕ್ಷವಾಗಿ ನೋಡಿದ DCP ಮೇರಿ ಜೊಸೆಫ್ ಮರುದಿನವೇ ಆ ಪ್ರದೇಶಗಳಿಗೆ ಪೋಲಿಸರನ್ನು ನೇಮಿಸಿದರು ಹಾಗೂ ಆ ಏರಿಯಾಗಳಲ್ಲಿ ಬೀದಿ ದೀಪಗಳು ಸರಿಯಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಂಡರು. ಎಲ್ಲಾ ಪೋಲಿಸ್ ಆಫೀಸರಗಳು ಈ ರೀತಿ ಇದ್ದರೆ ಸಮಾಜಕ್ಕೆ ಎಷ್ಟು ಮಾದರಿ ಮತ್ತು ಸುರಕ್ಷತೆ ಅಲ್ಲವೇ.??

ಮತ್ತಷ್ಟು ಸುದ್ದಿಗಳನ್ನು ಓದಲು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಅನಿಸಿಕೆಗಳನ್ನು ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ ಧನ್ಯವಾದಗಳು.(ಈ ಕೆಳಗಿರುವ ವಿಡಿಯೋ ನೋಡಿ)

LEAVE A REPLY

Please enter your comment!
Please enter your name here