ಮಡದಿ ಮತ್ತು ಪುತ್ರಿಯಿಂದ ದೂರವಾದ ಮೇಲೆ ಎಸ್.ಮಹೇಂದರ್ ಏನು ಮಾಡುತ್ತಿದ್ದಾರೆ ಗೊತ್ತಾ.?

0
554

ಎಸ್ ಮಹೇಂದರ್, ಕನ್ನಡ ಚಿತ್ರರಂಗ ಕಂಡ ಪ್ರತಿಷ್ಠಿತ ನಿರ್ದೇಶಕ, ಬರಹಗಾರ, ನಟ ಮತ್ತು ನಿರ್ಮಾಪಕ. ಅದೆಷ್ಟೋ ಪ್ರತಿಬೆಗಳನ್ನು ಚಂದನವನದ ಸ್ಟಾರ್ ನಟರನ್ನಾಗಿ ಮಾಡಿದ ನಿರ್ದೇಶಕ. ಕನ್ನಡ ಸಿನಿ ರಸಿಕರಿಕೆ ಭಾವಾನತ್ಮಕ ಸಿನಿಮಾಗಳನ್ನು ನೀಡಿ ಕಣ್ಣಂಚಲ್ಲಿ ನೀರು ತರಿಸಿದ ಅದ್ಭತ ಕಲಾಕಾರ. ಅದೊಂದು ಕಾಲವಿತ್ತು ಎಸ್‍.ಮಹೇಂದರ್ ಅವರು ಅಂದರೆ ಕನ್ನಡ ನಿರ್ಮಾಪಕರಿಗೆ ಬಹಳ ಅಚ್ಚುಮೆಚ್ಚು.

 

 

ಅವರ ಡೇಟ್ಸ್ ಗಳಿಗಾಗಿ ಕಾಯುತ್ತಿದ್ದರು. ಸಂಬಂದಗಳನ್ನು ಕಥಾವಸ್ತುಗಳನ್ನಾಗಿ ಮಾಡಿಕೊಂಡು, ಜೀವನ ಮೌಲ್ಯಗಳನ್ನು ತೋರಿಸಿ, ಪ್ರೇಕ್ಷಕರ ಮನ ಗೆದ್ದಿದ್ದರು. ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಹಿಟ್‍ಗಳ ಮೇಲೆ ಹಿಟ್ ನೀಡಿ, ನಿರ್ಮಾಪಕರ ಜೇಬು ತುಂಬಿಸುತ್ತಿದ್ದರು ! ಎಲ್ಲವೂ ಚೆನ್ನಾಗಿಯೆ ನಡೆಯುತ್ತಿತ್ತು, ಆದರೆ ಅವರ ಜೀವನದಲ್ಲಿ ಆಗಿದ ದುರ್ಘಟನೆಗಳನ್ನು ತಿಳಿದುಕೊಳ್ಳಲು ಮುಂದೇ ಓದಿ..

 

 

ಕರ್ನಾಟಕದ ಕೊಳ್ಳೆಗಾಲದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಎಸ್ ಮಹೇಂದರ್, ಬಾಲ್ಯದಿಂದಲೂ ಕಥೆ ಹೇಳುವುದು, ಕೇಳುವುದರಲ್ಲಿ ತುಂಬಾ ಆಸಕ್ತಿಯನ್ನು ಹೊಂದಿದ್ದರಂತೆ. ಕನ್ನಡದಲ್ಲಿ ಮೂವತ್ತಕ್ಕೂ ಹೆಚ್ಚು ಸಿನಿಮಾಗಳನ್ನು ನಿರ್ದೇಶಿಸಿದ ಅವರು, ನಾಯಕ ನಟರಾಗಿಯೂ ಕೂಡ ಅಭಿನಯಿಸಿ ಚಿತ್ರೋದ್ಯಮದಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. 1992 ರಲ್ಲಿ ಪ್ರಣಯದ ಪಕ್ಷಿಗಳು ಎಂಬ ಚಿತ್ರವನ್ನು ನಿರ್ದೇಶಿಸುವ ಮೂಲಕ ವೃತ್ತಿ ಜೀವನವನ್ನು ಪ್ರಾರಂಭಿಸಿ, ಹತ್ತು ಹಲವು ಭಾವನಾತ್ಮಕ ಸಂಬಂಧಗಳನ್ನು ತೆರೆಯ ಮೇಲೆ ತೋರಿಸಿ, ಪ್ರೇಕ್ಷಕರ ಮನಗೆದ್ದಿದ್ದಾರೆ !

 

 

ಅವರು ನಿರ್ದೇಶಿಸಿದ ಪ್ರಖ್ಯಾತ ಚಲನಚಿತ್ರಗಳೆಂದರೆ, ತಾಯಿ ಇಲ್ಲದ ತವರು, ಕರ್ಪೂರದ ಗೊಂಬೆ, ಸ್ನೇಹಲೋಕ, ಅಸುರ, ವಾಲಿ, ನಿನಗಾಗಿ, ಗೌಡ್ರು, ತಂದೆಗೆ ತಕ್ಕ ಮಗ ಅಂತಹ ಸ್ನೇಹ ಸಂಬಂಧಗಳನ್ನು ಸೃಷ್ಟಿಸಿ, ಸೆಂಟಿಮೆಂಟಲ್ ಕಿಂಗ್ ಎನಿಸಿಕೊಂಡರು. ಎಲ್ಲರ ಬದುಕಿನಲ್ಲಿ ನಡೆಯುವಂತೆ ಮಹೇಂದರ್ ಅವರು ಪ್ರೀತಿ ಪ್ರೇಮಕ್ಕೆ ಬೀಳುತ್ತಾರೆ. ಕನ್ನಡದ ಹೆಸರಾಂತ ನಟಿ ಶ್ರುತಿ ಅವರನ್ನು ಪ್ರೇಮಿಸಿ, ಅವರನ್ನೇ ವಿವಾಹ ಆಗಬೇಕು ಎಂದು ನಿರ್ಧರಿಸಿ 1998 ರಲ್ಲಿ ಸ್ನೇಹಿತರು, ಸಂಬಂಧಿಕರ ಸಮೂಖದಲ್ಲಿ ವಿವಾಹವಾದರು.

 

 

ನಂತರ ಈ ದಂಪತಿಗಳಿಗೆ ಗೌರಿ ಎಂಬ ಮುದ್ದಾದ ಮಗಳು ಕೂಡ ಜನಿಸಿದಳು. ತಮ್ಮ ಮಗಳೊಂದಿಗೆ ಅನ್ಯೋನ್ಯ ಜೀವನ ನಡಿಸಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದ ಸಮಯದಲ್ಲಿ ಬಂದಿದ್ದೆ ರಾಜಕೀಯ..

ಸಿನಿಮಾ ಹಾಗೂ ವೈವಾಹಿಕ ಜೀವನದಲ್ಲಿ ನೆಮ್ಮದಿಯನ್ನು ಕಾಣುತ್ತಿದ್ದ ಮಹೇಂದರ್ ಅವರಿಗೆ ತಾನು ಜನಿಸಿದ ಊರು ಕೊಳ್ಳೆಗಾಲಕ್ಕೆ ಏನಾದರು ಒಳ್ಳೆಯ ಕೆಲಸ ಮಾಡಬೇಕು ಎಂದು ಬಿಜೆಪಿ ಪಕ್ಷದ ಪರ ರಾಜಕೀಯಕ್ಕೆ ದುಮುಕಿದರು ಹಾಗೂ ಕೊಳ್ಳೆಗಾಲ ಕ್ಷೇತ್ರದಲ್ಲಿ ಎಂ.ಎಲ್.ಎ ಚುನಾವಣೆಗೆ ನಿಂತರು. ಈ ರಾಜಕೀಯದ ಆಳ ತಿಳಿಯದ ಎಸ್ ಮಹೇಂದರ್, ಅನ್ಯಾಯವಾಗಿ ದುಮುಕಿದರು ಆದರೆ ಬಿದ್ದವರಿಗೆ ಮೇಲೇಳುವ ಚಾಣಕ್ಯತನ ತಿಳಿದಿರಲಿಲ್ಲ. ಚುನಾವಣೆಯನ್ನು ಗೆಲ್ಲುವ ಸಲುವಾಗಿ ತನ್ನಲಿದ್ದ ಎಲ್ಲಾ ಹಣವನ್ನು ಸುರಿಯುತ್ತಾರೆ.

 

 

ಗೆದ್ದೇ ಗೆಲ್ಲುತ್ತೇನೆ ಎಂಬ ಭ್ರಮೆಯಲ್ಲಿ ತನ್ನಿಲ್ಲದ್ದ ಅಷ್ಟೂ ಹಣವನ್ನು ಖರ್ಚು ಮಾಡುತ್ತಾರೆ. ಆದರೆ ಅಂದುಕೊಂಡಿದ್ದೆ ಒಂದು, ಆಗಿದ್ದೆ ಒಂದು. ಕೇವಲ 12 ಸಾವಿರ ಮತಗಳ ಅಂತರದಿಂದ ಸೋಲನ್ನು ಅನುಭವಿಸುತ್ತಾರೆ. ಈ ಚುನಾವಣೆ ಮುಗಿದ ಮೇಲೆ, ಮಹೇಂದರ್ ಅವರ ಬದುಕಿನಲ್ಲಿ ಅನೇಕ ದುರ್ಘಟನೆಗಳು ನಡೆಯುತ್ತಲೇ ಇದ್ದವು. ಕಡೆಯ ಉಸಿರಿರುವವರೆಗೂ ಜೊತೆಯಲ್ಲಿ ಬಾಳಬೇಕೆಂದು ವಿವಾಹವಾದ ಶೃತಿ ಅವರ ಜೊತೆ ಬಿನ್ನಾಭಿಪ್ರಾಯಗಳು ಮೂಡುತ್ತವೆ. ನಂತರ ಇಬ್ಬರ ಕೌಟಿಂಬಿಕ ಜೀವನ ಸರಿ ಹೋಗುವುದೇ ಇಲ್ಲ. ಆದ ಕಾರಣ 2009 ರಲ್ಲಿ ದಂಪತಿಗಳಿಬ್ಬರು ವಿಚ್ಛೇದನ ಪಡೆದುಕೊಳ್ಳುತ್ತಾರೆ.

 

 

ಮೂರು ವರ್ಷಗಳ ಕಾಲ ಮಡದಿ ಮತ್ತು ಪುತ್ರಿ ಇಲ್ಲದೇ ಒಬ್ಬೊಂಟಿ ಜೀವನವನ್ನು ನಡೆಸುತ್ತಿದ್ದರು. ನಂತರ 2012 ರಲ್ಲಿ ಮೈಸೂರು ಮೂಲದ ಅರ್ಥಶಾಸ್ತ್ರ ವಿದ್ಯಾರ್ಥಿನಿ ಯಶೋದಾ ಅವರನ್ನು ವಿವಾಹವಾದರು. ಇದರ ಮದ್ಯೆ ಇತ್ತೀಚಿಗೆ ಮಹೇದಂರ್ ಅವರ ಮಗಳು ಗೌರಿ ಬರೆದ ಒಂದು ಪೋಸ್ಟ್, ಎಲ್ಲರ ಮನ ಕಲಕುತ್ತದೆ.

 

 

“ಅಪ್ಪ ಐ ಲವ್ ಯೂ, ನೀವು ಯಾವಗಲು ನನ್ನ ಮೊದಲ ಪ್ರೀತಿ, ನನ್ನ ನೆಚ್ಚಿನ ಹೀರೋ, ನಿಮ್ಮ ಮೇಲಿನ ನನ್ನ ಪ್ರೀತಿ, ನಮ್ಮ ಬಾಂದ್ಯವದ ಬೆಸುಗೆಯನ್ನು ಯಾರಿಂದಲು ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲಾ, ಐ ಮಿಸ್ ಯೂ, ನಿಮ್ಮೊಂದಿಗೆ ಸಮಯ ಕಳೆಯಬೇಕು ಅನಿಸುತ್ತಿದೆ. ಅದು ಶೀಘ್ರದಲ್ಲಿಯೇ ನಿಜವಾಗಲಿದೆ” ಎಂದು ಬರೆದು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿ ಅಪ್ಪನ ಮೇಲಿರುವ ಪ್ರೀತಿಯನ್ನು ತೋರಿಸಿದ್ದರು!

 

 

ಲಾಂಗ್ ಗ್ಯಾಪ್ ನಂತರ 2011 ರಿಂದ 2017 ರವರೆಗೆ ಮೂರು ಸಿನಿಮಾವನ್ನು ನಿರ್ದೇಶಿಸಿದ್ದರು. ಆದರೆ ಅವ್ಯಾವು ಅಂದುಕೊಳ್ಳುವಂತಹ ಹಿಟ್ ಆಗಲಿಲ್ಲ. ಇದಾದ ನಂತರ ಮತ್ಯಾವ ಸಿನಿಮಾವನ್ನು ಮಹೇಂದರ್ ಕೈಗೆತ್ತು ಕೊಂಡಿಲ್ಲ. ಆದರೆ ಒಂದಂತೂ ನಿಜ, ಈಗಿನ ಪೀಳಿಗೆಯವರು ಮಹೇಂದರ್ ಅವರ ಸಿನಿಮಾ ವೀಕ್ಷಿಸಿದರೆ ಸಂಬಂಧ ಮತ್ತು ಸ್ನೇಹದ ಬಗ್ಗೆ ತಿಳಿದುಕೊಳ್ಳುತ್ತಾರೆ.

LEAVE A REPLY

Please enter your comment!
Please enter your name here