ರಣಧೀರ ಚಿತ್ರದಲ್ಲಿ ಬಾಲನಟನಾಗಿದ್ದ ಮಾ|| ಮಂಜುನಾಥ್ ನಟನಾ ರಂಗಕ್ಕೆ ಬರದೇ ಇಂದು ಯಾವ ಕೆಲಸ ಮಾಡುತ್ತಿದ್ದಾರೆ ಗೊತ್ತಾ.?

0
1265

ಕನ್ನಡ ಚಿತ್ರರಂಗ ಒಂದು ಬೃಹತ್ ಆಲದ ಮರ ಇದ್ದ ಹಾಗೆ. ಯಾಕೆಂದರೆ ಈ ಒಂದು ಗರಡಿಯಲ್ಲಿ ತರಭೇತಿ ಪಡೆದವರು ಇಂದು ಆನೇಕ ಉನ್ನತ ಸ್ಥಾನಕ್ಕೆ ಏರಿದ್ದಾರೆ. ಸಾಕಷ್ಟು ಜನಪ್ರಿಯೆತೆ ಪಡೆದುಕೊಂಡು, ದೊಡ್ಡ ಮಟ್ಟದ ಹೆಸರು, ಕೀರ್ತಿಯನ್ನು ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗಲಾರದು.

 

 

ಹೌದು, ಅದರಲ್ಲೂ ಒಂದು ಸಿನಿಮಾ ಎಂದರೆ ಅಲ್ಲಿ ಬಾಲ ನಟ ಅಥವಾ ಬಾಲ ನಟಿಯರ ಅವಶ್ಯಕತೆ ಬಹಳ ಮುಖ್ಯವಾಗಿರುತ್ತದೆ. ಇತ್ತೀಚಿನ ಸಿನಿಮಾಗಳಲ್ಲಿ ನಾವು ನೀವು ಗಮನಿಸಿರುವ ಹಾಗೆ ಬಾಲ ನಟರನ್ನು ಸಿನಿಮಾಗಳಲ್ಲಿ ಹೆಚ್ಚಾಗಿ ತೋರಿಸುವುದಿಲ್ಲ. ಜೊತೆಗೆ ಅವರಿಗೆ ಅವಕಾಶ ಕೊಟ್ಟರು ಕೂಡ ಅವರಿಗೆ ಪ್ರೇಕ್ಷಕರನ್ನು ಸೆಳೆಯುವಂತ ಪ್ರಮುಖ ಪಾತ್ರವನ್ನು ಕೊಟ್ಟಿರುವುದಿಲ್ಲ. ಆದರೆ 90ರ ದಶಕದಲ್ಲಿ ಮೂಡಿಬರುತ್ತಿದ್ದ ಪ್ರತಿಯೊಂದು ಸಿನಿಮಾದಲ್ಲೂ ಬಾಲನಟ/ನಟಿಯರ ಪಾತ್ರಗಳು ಹೆಚ್ಚಿದ್ದವು ಜೊತೆಗೆ ಅವರ ಪಾತ್ರಗಳೂ ನಾಯಕ ನಟರ ಪಾತ್ರಕ್ಕೆ ಮತ್ತಷ್ಟು ಮೆರಗನ್ನು ತಂದುಕೊಡುವಂತೆ ಇರುತ್ತಿತ್ತು.

 

 

ಇದಕ್ಕೆ ಅದ್ಭುತ ಉದಾಹರಣೆ ಎಂದರೆ ಬಾಲನಟನ ಪಾತ್ರದಲ್ಲಿ ಮಿಂಚುತ್ತಿದ್ದ ಮಾಸ್ಟರ್ ಮಂಜುನಾಥ್.! ಹೌದು, ಮಾಸ್ಟರ್ ಮಂಜುನಾಥ್ ಎಂದರೆ ಸಾಕು ಕನ್ನಡ ಚಿತ್ರರಂಗಕ್ಕೆ ಬಹಳ ಅಚ್ಚುಮೆಚ್ಚು ಅಷ್ಟರ ಮಟ್ಟಿಗೆ ಎಲ್ಲರಿಗೂ ಚಿರಪರಿಚಿತವಾಗಿದ್ದ ಬಾಲನಟ. ಕನ್ನಡ ಚಿತ್ರರಂಗಕ್ಕೆ ತಮ್ಮ 3ನೇ ವಯಸ್ಸಿನಲ್ಲಿಯೇ ನಟನೆಗೆ ಎಂಟ್ರಿಕೊಡುತ್ತಾರೆ.

 

 

ಮಂಜುನಾಥ್ ಅವರು ಬಾಲನಟರಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಚಿತ್ರಗಳಾದ ರಣಧೀರ, ಕಿಂದರಜೋಗಿ, ಅಂಜದ ಗಂಡು ಚಿತ್ರಗಳಲ್ಲಿ ಅಭಿನಯಿಸಿ ರವಿಚಂದ್ರನ್ ಅವರಿಗೆ ಸಕತ್ ಸಾಥ್ ನೀಡಿದಂತ ನಟ. ರವಿಚಂದ್ರನ್ ಹಾಗೂ ಮಂಜುನಾಥ್ ಅವರ ಕಾಂಬಿನೇಷನ್ ಚಿತ್ರ ರಸಿಕರಿಗೆ ರಸದೌತಣದ ಮಹಾಪೂರವೇ ನೀಡುತ್ತಿತ್ತು. ಮಾಸ್ಟರ್ ಮಂಜುನಾಥ್ ಅವರು ನೋಡಲು ಬಹಳ ಮುಗ್ದನಾಗಿ, ಮುದ್ದು-ಮುದ್ದಾಗಿ ಕಾಣುತ್ತಿದ್ದರು.

 

 

ಕನ್ನಡ ಚಿತ್ರಗಳಲ್ಲದೇ ತಮ್ಮ ಚಿಕ್ಕವಯಸ್ಸಿನಲ್ಲಿಯೇ ವಿಜಯ್ ದಿನನಾಥ್ ಚೌಹಣ್ ಅವರ ಅಗ್ನಿಪಥ್ ಚಿತ್ರದಲ್ಲಿ ಅವರ ಬಾಲ್ಯದ ದೃಶ್ಯವನ್ನು ಮಂಜುನಾಥ್ ಅವರು ಅಭಿನಯಿಸಿದ್ದರು. ಜೊತೆಗೆ ತೆಲುಗಿನ ಮಮೂಟಿ ಅವರ ಸ್ವಾತಿ ಕಿರಣ್ ಚಿತ್ರದಲ್ಲಿ 1992ರಲ್ಲಿ ನಟಿಸಿ ಹೆಚ್ಚು ಪ್ರಶಂಸೆಯನ್ನು ಪಡೆದುಕೊಂಡರು. ಇವೆಲ್ಲದಕ್ಕಿಂತ ಹೆಚ್ಚಾಗಿ ಹೇಳುವುದಾದರೆ ಕನ್ನಡದ ಆಟೋ ಶಂಕರ್, ಸಾಂಗ್ಲಿಯಾನ ಶಂಕರ್ ನಾಗ್ ಅವರೊಡನೆ ಕೆಲಸ ಮಾಡಿದ ಮಾಸ್ಟರ್ ಮಂಜುನಾಥ್, ಶಂಕರ್ ನಾಗ್ ಅವರು 1987 ರಲ್ಲಿ ನಿರ್ದೇಶಿಸಿದ ಮಾಲ್ಗುಡಿ ಡೇಸ್ ಹಿಂದಿ ಭಾಷೆಯ ಸಿರೀಸ್ ನಲ್ಲಿ ಸ್ವಾಮಿ ಪಾತ್ರದಲ್ಲಿ ನಟಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇಲ್ಲಿಯವರೆಗೂ ಮಾಸ್ಟರ್ ಮಂಜುನಾಥ್ ಅವರು ಒಟ್ಟಾರೆ 68 ಸಿನಿಮಾಗಳಲ್ಲಿ ನಟಿಸಿದ್ದಾರೆ.

 

 

ಮಂಜುನಾಥ್ ಅವರು ಕನ್ನಡ ಚಿತ್ರರಂಗದಲ್ಲಿ ಉದಯೊನ್ಮುಖ ನಟರಾಗಿ ಹೊರಹೊಮ್ಮುತ್ತಾರೆ ಎಂದು ಆನೇಕರು ತಿಳಿದುಕೊಂಡಿದ್ದರು. ಆದರೆ ಮಂಜುನಾಥ್ ಅವರು 19ನೇ ವಯಸ್ಸಿನಲ್ಲಿ ಚಿತ್ರರಂಗಕ್ಕೆ ಗುಡ್ ಬೈ ಹೇಳುತ್ತಾರೆ. ಯಾಕೆಂದರೆ ಅವರ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು ಎಂಬ ಮುಂದಾಲೋಚನೆಯಿಂದ ಬಿಡುತ್ತಾರೆ. ಆನಂತರ ಚಿತ್ರರಂಗದ ಕಡೆ ತಲೆ ಹಾಕದ ಮಂಜುನಾಥ್ ಅವರು ಪಿ.ಆರ್ ಆಗಿ ಅಂದರೆ ಪಬ್ಲಿಕ್ ರಿಲೇಶನ್ ಶೀಪ್ ಕನ್ಸಲ್ಟೆನ್ಸಿ ಕಂಪನಿಯನ್ನು ಶುರು ಮಾಡುವ ಮೂಲಕ ಬೆಂಗಳೂರು-ಮಂಗಳೂರು ಇನ್‍ಫ್ರಾಸ್ಟ್ರ್ಕಚರ್ ಕಾರಿಡರ್ ಪ್ರಾಜೆಕ್ಟ್ ಜವಾಬ್ದಾರಿಯನ್ನು ಹೊತ್ತುಕೊಂಡು ಜನರೊಂದಿಗೆ ಕೆಲಸ ನಿರ್ವಹಿಸುತ್ತಿದ್ದಾರೆ.

 

 

ಸದ್ಯ ಮಂಜುನಾಥ್ ಅವರು ತಮ್ಮ ಕಂಪನಿಯನ್ನು ನೋಡಿಕೊಂಡು ಬಹಳ ಖುಷಿಯಿಂದ ಇದ್ದಾರೆ. ಮಂಜುನಾಥ್ ಅವರು ಕ್ರೀಡಾಪಟು ಸ್ವರ್ಣಲೇಖ ಅವರನ್ನು ವಿವಾಹವಾಗಿ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ. ಒಟ್ಟಿನಲ್ಲಿ 90ರ ದಶಕದಲ್ಲಿ ಚಿತ್ರರಸಿಕರನ್ನು ಮನರಂಜಿಸಿದ ಮಂಜುನಾಥ್ ಅವರ ಜೀವನ ಸುಖಕರವಾಗಿರಲಿ ಹಾಗೂ ತಮ್ಮ ಕೆಲಸದಲ್ಲಿ ಅದ್ಭುತ ಅಭಿವೃದ್ಧಿಯನ್ನು ಕಾಣಲಿ, ಮತ್ತಷ್ಟು ಯಶಸ್ಸು ನೋಡಲಿ ಎಂಬುದು ನಮ್ಮೆಲರ ಆಶಯ.

– Mohan shetty.

LEAVE A REPLY

Please enter your comment!
Please enter your name here